Advertisement

ಸಣ್ಣ ಕೈಗಾರಿಕೆಗಳಿಂದ ಮೇಕ್‌ ಇನ್‌ ಇಂಡಿಯಾಗೆ ಕೊಡುಗೆ

12:31 PM Dec 04, 2017 | Team Udayavani |

ಉಡುಪಿ: ಸಣ್ಣ ಕೈಗಾರಿಕೆಗಳು ಸ್ಥಳೀಯ ಸಂಪನ್ಮೂಲ, ಸ್ಥಳೀಯ ಕೌಶಲವನ್ನು ಬಳಸಿ ಉತ್ಪಾದನೆ ಮಾಡುತ್ತಾ “ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಗೆ ಪೂರಕವಾಗಿ ಗಣನೀಯ ಕೊಡುಗೆ ನೀಡುತ್ತಿವೆ ಎಂದು ಮಂಗಳೂರು ಎಂಎಸ್‌ಎಂಇ ಉಪ ನಿರ್ದೇಶಕ ಕೆ.ಸಾಕ್ರೆಟೀಸ್‌ ಹೇಳಿದರು.

Advertisement

ಅವರು ರವಿವಾರ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ಜರಗಿದ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ಡಿಎಸ್‌ಐಎ) ದ ರಜತ ಮಹೋತ್ಸವ ಹಾಗೂ “ಎಕ್ಸ್‌ಪೋ 2017’ರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಣ್ಣ  ಕೈಗಾರಿಕೋದ್ಯಮಿಗಳ ಬೆಳವಣಿಗೆಗೆ ಅವಶ್ಯವಾದ ಮಾಹಿತಿ, ವಾತಾವರಣ ಸೃಷ್ಟಿಗೆ ಪೂರಕವಾಗಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಘ ಯಶಸ್ವಿಯಾಗಿ ಸಾಗಲು ಸಾಧ್ಯವಾಗಿದೆ. ಎಂದವರು ಅಭಿಪ್ರಾಯಪಟ್ಟರು.

ತಂತ್ರಜ್ಞಾನದ ಮಾಹಿತಿ ಅಗತ್ಯ
ಸ್ಮರಣ ಸಂಚಿಕೆ “ದಿ ಎಂಟರ್‌ಪ್ರೀನಿಯರ್‌’ ಬಿಡುಗಡೆ ಮಾಡಿದ ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್‌ ಅವರು ಮಾತನಾಡಿ, ಆರಂಭದಲ್ಲಿ  ಕೈಗಾರಿಕಾ ನೀತಿ ಕಠಿಣವಾಗಿತ್ತು. ಈಗ ಬಹಳಷ್ಟು ಸರಳೀಕರಣಗೊಳಿಸಲಾಗಿದೆ. ಸಣ್ಣ ಕೈಗಾರಿಕಾ ಕ್ಷೇತ್ರದ ಆಧುನಿಕ ತಂತ್ರಜ್ಞಾನ, ಸಣ್ಣ ಕೈಗಾರಿಕೆಗಳ ಸಾಮರ್ಥ್ಯ ಮೊದಲಾದವುಗಳ ಬಗ್ಗೆ ಎಲ್ಲಾ ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕರಿಗೆ ಮಾಹಿತಿ ದೊರೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಎಕ್ಸ್‌ಪೋ ಅರ್ಥಪೂರ್ಣ. ಇದನ್ನು ಪ್ರತಿ ವರ್ಷವೂ ಆಯೋಜಿಸಬೇಕಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಚ್‌.ಸುಧೀರ್‌ ನಾಯಕ್‌ ಸ್ವಾಗತಿಸಿದರು. ಸ್ಮರಣ ಸಂಚಿಕೆ ಸಂಪಾದಕ ಮಟ್ಟಾರು ರಮೇಶ್‌ ಕಿಣಿ, ಸ್ಮರಣ ಸಂಚಿಕೆ ಸಮಿತಿಯ ಚೇರ್‌ವೆುನ್‌ ಐ.ಆರ್‌.ಫೆರ್ನಾಂಡಿಸ್‌, ಸಂಘದ ಕಾರ್ಯದರ್ಶಿ ಎಂ.ವಸಂತ ಕಿಣಿ, ಖಜಾಂಚಿ ಹೃಷಿಕೇಶ್‌ ಹೆಗ್ಡೆ ಉಪಸ್ಥಿತರಿದ್ದರು. 

ಎಕ್ಸ್‌ಪೋ 2017ರ ಕೈಗಾರಿಕಾ ಪ್ರದರ್ಶನ ಸಮಿತಿಯ ಚೇರ್‌ವೆುನ್‌ ಶಂಕರ್‌ ಸುವರ್ಣ ಮತ್ತು ಕೋ ಚೇರ್‌ವೆುನ್‌ ಜಗದೀಶ್‌ ರಾವ್‌ ಅವರನ್ನು ಸಮ್ಮಾನಿಸಲಾಯಿತು. ವಲ್ಲಭ್‌ ಭಟ್‌ ಅತಿಥಿಗಳನ್ನು ಪರಿಚಯಿಸಿದರು. ಮಂಜುಳಾ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next