Advertisement

ಗ್ರಾಮೀಣ ಶಿಕ್ಷಣಕ್ಕೆ ಮಂಡ್ಯ ರಾಜಕಾರಣಿಗಳ ಕೊಡುಗೆ ಅಪಾರ

04:40 PM Sep 03, 2017 | |

ಮಂಡ್ಯ: ಬಹುಸಂಖ್ಯಾತ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಂಡ್ಯದ ರಾಜಕೀಯ ದಿಗ್ಗಜರ ಕೊಡುಗೆ ಅಪಾರ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ತಿಳಿಸಿದರು.

Advertisement

ನಗರದ ರೈತ ಸಭಾಂಗಣದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್‌ ಆಯೋಜಿಸಿದ್ದ ದೇವಮ್ಮ ಇಂಡುವಾಳು ಎಚ್‌.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಮತ್ತು ಶಾರದಮ್ಮ ಕೆಂಪಮ್ಮ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೆ.ವಿ.ಶಂಕರೇಗೌಡ, ಎಚ್‌.ಹೊನ್ನಯ್ಯ, ಎಚ್‌.ಕೆ.ವೀರಣ್ಣಗೌಡ, ಎಸ್‌.ಸಿ.ಮಲ್ಲಯ್ಯ ಸೇರಿದಂತೆ ಹಲವು ಮಹನೀಯರು ಶಿಕ್ಷಣಕ್ಕೆ ಒತ್ತು ನೀಡಿದ್ದರ ಜೊತೆಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಹೋರಾಟದ ಫ‌ಲವಾಗಿ ಇಂದು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಅನುಕೂಲಗಳು ಲಭ್ಯವಾಗುತ್ತಿವೆ.ಇರ್ವಿನ್‌ ನಾಲಾ ಚಳವಳಿಯಿಂದಾಗಿ ನೀರಾವರಿ ಯೋಜನೆಗೆ
ಒತ್ತು ನೀಡಿದಂತಾಯಿತು. ಇದರಿಂದಾಗಿ ರೈತರ ಬದುಕು ಹಸನಾಯಿತು ಎಂದು ತಿಳಿಸಿದರು.

ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘ, ಮೈಷುಗರ್‌ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಎಚ್‌.ಹೊನ್ನಯ್ಯ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ವೇಳೆ ಕೆ.ವಿ.ಶಂಕರಗೌಡರೂ ಅವರೊಂದಿಗಿದ್ದರು ಎಂದು ತಿಳಿಸಿದರು. ಸ್ವಾರ್ಥರಹಿತ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಇಂದು ಪ್ರಶಸ್ತಿ ಪಡೆಯುತ್ತಿರುವ ಜನವಾದಿ ಮಹಿಳಾ ಸಂಘಟನೆಯ ದೇವಿ ಹಾಗೂ ಪ್ರೇರಣಾ ಸಂಸ್ಥೆಯ ರವಿಕುಮಾರ್‌ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಜನದನಿ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಸಮಾಜಮುಖೀ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪ್ರತಿ ವರ್ಷ ಸಾಧಕರನ್ನು ಗುರುತಿಸಿ ನಗದು ಸೇರಿದಂತೆ ಪ್ರಶಸ್ತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದನ್ನು ಶ್ಲಾಸಿದರು. 

Advertisement

ಪ್ರಶಸ್ತಿ ಪುರಸ್ಕೃತರು:ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ, ಪ್ರೇರಣಾ ವಿಶೇಷ ಚೇತನರ ಟ್ರಸ್ಟ್‌ ನ ರವಿಕುಮಾರ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ವಿ.ಕೆ.ಶ್ರೀಕಲಾ, ಬಿ.ಪಿ.ಮದನ್‌, ಸಿ.ಎಸ್‌. ಭುವನೇಶ್‌, ಬಿ.ಎಸ್‌.ಕವನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್‌ ಸಂಸ್ಥಾಪಕ ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷ ಕೆ.ಜಯರಾಮು, ಕಾರ್ಯದರ್ಶಿ ಎಸ್‌.ಡಿ. ಸೋಮಶೇಖರ್‌, ಎಂ.ಕೆ. ಹರೀಶ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next