Advertisement
ನಗರದ ಬಂಡಿಹಟ್ಟಿಯಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್.ಬಸರೆಡ್ಡಿ ಮಾತನಾಡಿ, ಕ್ಷಯರೋಗವನ್ನು ನೇರ ನಿಗಾವಣಾ ಅಲ್ಪಾವ ಚಿಕಿತ್ಸೆ (ಡಾಟ್ಸ್) ಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. 6-8 ತಿಂಗಳು ತಪ್ಪದೇ ಚಿಕಿತ್ಸೆಯನ್ನು ಪಡೆಯಬೇಕು ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ| ಇಂದ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಶೇ. 40ರಷ್ಟು ಯುವಜನಾಂಗವು ಕ್ಷಯರೋಗದ ಸೋಂಕಿತರಾಗಿದ್ದು ಜೀವಿತಾವಧಿಯಲ್ಲಿ ರೋಗಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಪ್ರತಿದಿನ 6 ಸಾವಿರ ಜನ ಹೊಸ ಕ್ಷಯರೋಗಿಗಳಾಗುತ್ತಿದ್ದಾರೆ. ಪ್ರತಿ ಎರಡೂವರೆ ನಿಮಿಷಕ್ಕೆ ಒಬ್ಬರು (ಪ್ರತಿ ದಿನ 600) ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ವಿವರಿಸಿದರು.
ಟಿ.ಬಿಯನ್ನು ಸೋಲಿಸಿ-ದೇಶವನ್ನು ಗೆಲ್ಲಿಸಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ-ರೋಗಿಯನ್ನು ನಿಮ್ಮ ಮಿತ್ರನಂತೆ ಕಾಣಿರಿ, ಕ್ಷಯರೋಗ ಸಂಪೂರ್ಣ ಗುಣಮುಖ ವಾಗುವಂತ ರೋಗ, ಕ್ಷಯರೋಗಿಯನ್ನು ಮುಟ್ಟುವುದರಿಂದ ಕೈಕುಲುಕುವುದರಿಂದ ಕ್ಷಯರೋಗ ಹರಡುವುದಿಲ್ಲ. ರೋಗವನ್ನು ದೂರವಿಡಿ, ರೋಗಿಯನ್ನು ಅಲ್ಲ. ಕ್ಷಯರೋಗವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಮೋಹನ್‌ಕುಮಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ರಾಜಶೇಖರ ರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣಾಕಾರಿ ಡಾ| ವಿಜಯಲಕ್ಷ್ಮೀ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಅನಿಲಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮರಿಯಂಬಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಅಬ್ದುಲ್ಲಾ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮತ್ತಿತರರು ಇದ್ದರು. ಕ್ಷಯರೋಗದಿಂದಗುಣಮುಖರಾದ ಮೆಹಬೂಬ್‌ಸಾಬ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.