Advertisement

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ: ನಾಳೆ ಬೆಂಗಳೂರಲ್ಲಿ ಗುತ್ತಿಗೆದಾರ ಸಂಘದ ಮಹತ್ವದ ಸಭೆ

03:23 PM Dec 31, 2024 | Team Udayavani |

ಕಲಬುರಗಿ: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಕುರಿತಾಗಿ ಪರಾಮರ್ಶಿಸಲು ಹಾಗೂ ಮುಂದಿನ ಹೋರಾಟ ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ (ಗುತ್ತಿಗೆದಾರ) ಅಸೋಸಿಯೇಷನ್ ನಾಳೆ (ಜನವರಿ 1ರಂದು) ಬೆಂಗಳೂರಿನ ತನ್ನ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ಕರೆದಿದೆ.

Advertisement

ಸಭೆಯಲ್ಲಿ ಗುತ್ತಿಗೆದಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯತನ ವಹಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಸೇರಿದಂತೆ ಇತರ ಹೋರಾಟಗಳನ್ನು ಕೈಗೊಳ್ಳಲು ಜತೆಗೆ ಪ್ರಮುಖವಾಗಿ ಬೀದರ್ ಗುತ್ತಿಗೆದಾರ ಸಚಿವ ಪಂಚಾಳ ಆತ್ಮಹತ್ಯೆಗೆ ನ್ಯಾಯ ಕಲ್ಪಿಸುವಂತೆ ಆಗ್ರಹಿಸುವ ಹೋರಾಟ ಕೈಗೊಳ್ಳಲು ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಕಲಬುರಗಿಯ ಜಗನ್ನಾಥ ಶೇಗಜಿ ಧಂಗಾಪುರ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಬೀದರ್‌ನ ಸಚಿವ ಪಾಂಚಾಳ ಗುತ್ತಿಗೆದಾರನಾಗಿದ್ದರೋ ಇಲ್ಲವೇ ಎಂಬುದರ ಕುರಿತಾಗಿ ಮಾಹಿತಿ ನೀಡುವಂತೆ ಬೀದರ್ ಜಿಲ್ಲಾ ಘಟಕಕ್ಕೆ ನಿರ್ದೇಶಿಸಲಾಗಿದೆ. ಅವರ ಮಾಹಿತಿಯನ್ನು ಆಧರಿಸಿ ಮುಂದಿನ ಹೋರಾಟ ರೂಪಿಸಲಾಗುವುದು. ಪ್ರಮುಖವಾಗಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾದಲ್ಲಿದ್ದಾಗ ಶೇ. 40ರಷ್ಟು ಪರ್ಸೆಂಟ್ ಕಮಿಷನ್ ಆರೋಪದ ಕುರಿತಾಗಿ ರಾಜ್ಯಾದಾದ್ಯಂತ ಸಂಗ್ರಹಿಸಲಾದ ಎಲ್ಲ ದಾಖಲೆಗಳನ್ನು ನ್ಯಾ. ನಾಗಮೋಹನದಾಸ್ ಸಮಿತಿಗೆ ಸಲ್ಲಿಸಲಾಗಿದೆ. ಆದರೆ ಸಮಿತಿಯ ಫಲಿತಾಂಶ ಮಾತ್ರ ಏನು ಕಾಣ್ತಾ ಇಲ್ಲ. ಅದೇ ರೀತಿ ಗುತ್ತಿಗೆದಾರರ ಮೂರು ವರ್ಷದ ಬಾಕಿ ಬಿಲ್ ಪಾವತಿ ಕುರಿತಾಗಿ ಹೋರಾಟಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಒಂದೂ ಬೇಡಿಕೆ ಸಾಕಾರಗೊಳ್ಳದ ಹಿನ್ನೆಲೆಯಲ್ಲಿ ಈ ಸಲ ಪ್ರಬಲ ಹೋರಾಟಕ್ಕೆ ಮುಂದಾಗಲಾಗುತ್ತಿದೆ. ಜನೇವರಿ 1ರಂದು ಸಂಜೆ 4ಕ್ಕೆ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: Mumbai-Nagpur: ಸಮೃದ್ಧಿ ಹೆದ್ದಾರಿಯಲ್ಲಿ ಏಕಾಏಕಿ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…

Advertisement

Udayavani is now on Telegram. Click here to join our channel and stay updated with the latest news.

Next