Advertisement

Contractor: ಲೈಂಗಿಕ ದೌರ್ಜನ್ಯ; ಗುತ್ತಿಗೆದಾರ ಸೆರೆ

08:51 AM Oct 11, 2023 | Team Udayavani |

ಬೆಂಗಳೂರು: ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಅ.7ರಂದು ರಾತ್ರಿ 23 ವರ್ಷದ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಗುತ್ತಿಗೆದಾರ ರೊಬ್ಬರನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಆಗಿರುವ ಗುತ್ತಿಗೆದಾರನನ್ನು ಬಂಧಿಸಲಾಗಿದೆ. ಯುವತಿ ಹಾಗೂ ಸ್ನೇಹಿತೆಯರು ಊಟ ಮಾಡಲೆಂದು ಚರ್ಚ್‌ಸ್ಟ್ರೀಟ್‌ಗೆ ಬಂದಿದ್ದರು. ನಗರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಆರೋಪಿ ಸಹ ಊಟಕ್ಕೆಂದು ಬಂದಿದ್ದ. ಊಟ ಮುಗಿಸಿದ್ದ ಯುವತಿ, ಮನೆಗೆ ಹೋಗಲು ಕ್ಯಾಬ್‌ ಕಾಯ್ದಿರಿಸಿ ರಸ್ತೆಯಲ್ಲಿ ನಿಂತುಕೊಂಡಿದ್ದರು. ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ಯುವತಿಯನ್ನು ತಬ್ಬಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಆತಂಕಗೊಂಡಿದ್ದ ಯುವತಿ, ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಈತ ಮದ್ಯದ ಅಮಲಿನಲ್ಲಿದ್ದ’ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next