Advertisement

ಗರ್ಭ ನಿರೋಧಕ ಇಂಜೆಕ್ಷನ್‌ ವಿವಾಹಿತೆಯರಿಗೆ ಮಾತ್ರ ಇರಲಿ: ಬಿಜೆಪಿ ನಾಯಕ

10:50 AM Oct 17, 2018 | udayavani editorial |

ಹೊಸದಿಲ್ಲಿ : ಯುವತಿಯರ ಸುರಕ್ಷೆಯ ದೃಷ್ಟಿಯಿಂದ, ಎಫ್ಎಂ ರೇಡಿಯೋ ಸ್ಟೇಶನ್‌ಗಳಲ್ಲಿ  ಗರ್ಭ ನಿರೋಧಕ ಇಂಜೆಕ್ಷನ್‌ ಬಗ್ಗೆ ಬರುತ್ತಿರುವ ಜಾಹೀರಾತುಗಳನ್ನು ತಡೆಯುವ ಅಗತ್ಯವಿದೆ ಎಂದು ದಿಲ್ಲಿ ಬಿಜೆಪಿ ವಕ್ತಾರ ಪ್ರವೀಣ್‌ ಕಪೂರ್‌ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

Advertisement

”ಸರಕಾರಿ ಆಸ್ಪತ್ರೆಗಳು ಗರ್ಭ ನಿರೋಧಕ ಇಂಜೆಕ್ಷಗಳನ್ನು ವಿವಾಹಿತ ಮಹಿಳೆಯರಿಗೆ ಮಾತ್ರವೇ ಶಿಫಾರಸು ಮಾಡುವಂತೆ ನಿರ್ದೇಶ ಹೊರಡಿಸಬೇಕು” ಎಂದು ಕಪೂರ್‌ ಅವರು ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. 

‘ಸಮಾಜದಲ್ಲಿ ಯುವಕ-ಯುವತಿಯರ ನಡುವೆ ವ್ಯಾಪಕ ಸೆಕ್ಸ್‌ ಸಂಬಂಧಗಳು ಇರುವ ಕಾರಣ ಮತ್ತು ಸೆಕ್ಸ್‌ ಉದ್ಯಮ ಮಾಫಿಯಾ ಯುವತಿಯರನ್ನು ಸೆಳೆಯುತ್ತಿರುವುದರಿಂದ “ಗಭ ನಿರೋಧಕ ಇಂಜೆಕ್ಷನ್‌’ಗಳ ಆಪಾಯದಿಂದ ಯುವ ಜನರನ್ನು ರಕ್ಷಿಸುವ ಅಗತ್ಯವಿದೆ’ ಎಂದು ಕಪೂರ್‌ ಹೇಳಿದ್ದಾರೆ.

“ನನ್ನ ಈ ಅಭಿಪ್ರಾಯಗಳು ಹಳೇ ಕಾಲದವುಗಳು ಎಂದು ಯಾರಿಗಾದರೂ ಅನ್ನಿಸಬಹುದು; ಆದರೆ ಯುವತಿಯರ ಆರೋಗ್ಯ ಮತ್ತು ಸುರಕ್ಷೆಯೇ ಈ ಅಭಿಪ್ರಾಯದ ಹಿಂದಿನ ಕಾಳಜಿಯಾಗಿದೆ. ಯುವತಿಯರು ಈ ಬಗೆಯ ಇಂಜೆಕ್ಷನ್‌ ಉಪಯೋಗಿಸುವ ಸಾಧ್ಯತೆ ಇರುವುದರಿಂದ ಅವರ ಆರೋಗ್ಯಕ್ಕೆ ಧಕ್ಕೆ ಒದಗುವುದು ನಿಶ್ಚಿತವಿದೆ” ಎಂದು ಕಪೂರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next