Advertisement

ಸತತ ಮಳೆ: ಕತ್ತಲಲ್ಲಿ ಕಾಲ ಕಳೆದ ಗ್ರಾಮೀಣ ಜನತೆ

12:07 PM Apr 04, 2018 | Team Udayavani |

ಸುಬ್ರಹ್ಮಣ್ಯ: ಮೂರು ದಿನಗಳಿಂದ ಸಂಜೆ ವೇಳೆಗೆ ಗುಡುಗು, ಮಿಂಚು, ಗಾಳಿ ಸಹಿತ ಹಗುರ ಮಳೆಯಾಗುತ್ತಿದೆ. ಹಲವೆಡೆ ವಿದ್ಯುತ್‌ ವ್ಯತ್ಯಯ ಆಗುತ್ತಿದೆ. ಸಂಜೆ ವೇಳೆಗೆ ಗಾಳಿ ಮಳೆ ಆಗುತ್ತಿರುವ ಕಾರಣ ವಿದ್ಯುತ್‌ ಮಾರ್ಗಗಳ ತಂತಿಗಳಲ್ಲಿ ದೋಷಗಳು ಕಾಣಿಸಿಕೊಂಡು ಗ್ರಾಮೀಣ ಭಾಗಕ್ಕೆ ವಿದ್ಯುತ್‌ ಸರಬರಾಜು ಕಡಿತಗೊಳ್ಳುತ್ತಿದೆ. ಮಡಪ್ಪಾಡಿ, ಕಲ್ಮಕಾರು, ಬಾಳುಗೋಡು, ದೇವಚಳ್ಳ ಪರಿಸರದ ಜನತೆ ಮೂರು ದಿನಗಳಿಂದ ರಾತ್ರಿ ಹೊತ್ತು ಕರೆಂಟ್‌ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ. 

Advertisement

ಮೆಸ್ಕಾಂ ಸಿಬಂದಿ ವಿದ್ಯುತ್‌ ಮಾರ್ಗದ ದೋಷಗಳನ್ನು ಪತ್ತೆ ಹಚ್ಚಿ, ಅದರ ದುರಸ್ತಿ ಕಾರ್ಯಕ್ಕೆ ಹರಸಾಹಸ ಪಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಾಡಿನೊಳಗಿನ ಮಾರ್ಗದಲ್ಲಿ ವಿದ್ಯುತ್‌ ತಂತಿ ಹಾದು ಹೋದ ಕಾರಣ ಸಮಸ್ಯೆ ಜಟಿಲವಾಗಿದ್ದು, ಸಕಾಲದಲ್ಲಿ ಎಲ್ಲ ಕಡೆಗೂ ವಿದ್ಯುತ್‌ ಸರಬರಾಜು ಮಾಡಲು ಮೆಸ್ಕಾಂನಲ್ಲಿ ಸಿಬಂದಿ ಕೊರತೆಯಿದೆ. ಬಡಗನ್ನೂರು, ಕಬಕ ಪರಿಸರದಲ್ಲೂ ಮಂಗಳವಾರ ಸಂಜೆ ಮಳೆಯಾಗಿದೆ.

ಸಾಧಾರಣ ಮಳೆ
ಪುತ್ತೂರು:
ತಾಲೂಕಿನ ನಗರ ಹಾಗೂ ಗ್ರಾಮಾಂತರದ ಕೆಲವು ಭಾಗಗಳಲ್ಲಿ ಮಂಗಳವಾರ ಸಂಜೆ 10 ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ. ಪುತ್ತೂರು ನಗರ, ಕಬಕ, ಸವಣೂರು, ಕುಂಬ್ರ, ಸಂಪ್ಯ ಸಹಿತ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯ ಜತೆಗೆ ಗುಡುಗು ಅಬ್ಬರಿಸಿದರೂ ಹೆಚ್ಚು ಸಮಯ ಮಳೆ ಬೀಳಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next