Advertisement
ಇಂಥ ವೇಗದ ಶಂಕರ್‌ನಾಗ್‌ರ ನಿರ್ಗಮನವೂ ಅಷ್ಟೇ ವೇಗದ್ದು ಅನ್ನುವುದು ದುರಂತ; ಬದುಕಿದ ಮೂವತ್ತೈದೇ ವರ್ಷಗಳಲ್ಲಿ ಅವರು ಗಮನ ಸೆಳೆದದ್ದು ತಮ್ಮಲ್ಲಿನ ಉತ್ಸಾಹದಿಂದ, ಬೆರಗಾಗಿ ಸುವ ಚಾಕಚಕ್ಯತೆಯಿಂದ ಹಾಗೂ ಕಾಲ ಕೂಡ ಕಣ್ಣರಳಿಸುವ ಕನಸುಗಳಿಂದ. ಆಯ್ಕೆ ಮಾಡಿಕೊಂಡದ್ದು ನಟನೆಯ ರಂಗ; ಆದರೆ ಅದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲಿಲ್ಲ. ನಟನೆಯ ಜತೆಗೆ ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಎಲ್ಲಕ್ಕೂ ಸೈ. ರಂಗ ಭೂಮಿಯಿಂದ ಸಿನಿಮಾಗೆ ಪದಾರ್ಪಣೆ; ಪ್ರತಿಯೊಂದು ಕೆಲ ಸದ ಹಿಂದೊಂದು ದರ್ಶನ; ಎಲ್ಲಕ್ಕೂ ಕ್ಲಾಸಿಸಿಸಂ ಸ್ಪರ್ಶ. ಸಿನೆಮಾದಲ್ಲಿ ದೊಡ್ಡ ಸ್ಟಾರ್ ಆದ ಮೇಲೂ ರಂಗದೊಂದಿಗೆ ನಂಟು; ಅದಕ್ಕೂ ಬದ್ಧ; ತಿಂಗಳಿಗೆ ಕನಿಷ್ಠ ಮೂರು ನಾಟಕಗಳ ಪ್ರದರ್ಶನ.
Related Articles
Advertisement
ಮೇಲಿನ ಮಾತುಗಳಿಗೆ ಕಿವಿಯಾದರೆ ರಾಗವೊಂದರ ವಿಸ್ತರಣೆ ಅನಿಸುತ್ತದೆ. ಜೊತೆಗೆ ಶಂಕರ್ ನಾಗ್‌ರಿಗೆ ಅರ್ಪಿಸಲಿಕ್ಕೆ ಮತ್ತೂಂದು ಸಂಗೀತ ಸಂಬಂಧಿ ರೂಪಕವೊಂದು ಹುಟ್ಟಿಕೊಳ್ಳುತ್ತಿದೆ. ಅದು ಶಂಕರ್‌ನಾಗ್ ಎಂಬುದು ಒಂದು ರಾಗ; ಅದು ನಿಜಕ್ಕೂ ಶಂಕರಾ ಭರಣ ಎಂಬ ರಾಗ. ಅದರ ಸ್ಥಾಯಿ ಸ್ವರಗಳು ಆ ರಾಗದ ಅಸ್ತಿತ್ವ; ಆದರೆ ಆ ರಾಗದ ವಿಸ್ತರಣೆಯನ್ನು ಹಲವರು ಹಲವು ಕಾಲಗಳಲ್ಲಿ ಮಾಡುತ್ತಿರುತ್ತಾರೆ. ವಿಸ್ತರಣೆಗೆ ಮೂಲಾಧಾರ ಅವೇ ಸ್ವರಗಳಾದರೂ ಅವು ರಾಗದಲ್ಲಿ ವಿಸ್ತರಣೆಗೊಳ್ಳುವ ಬಗೆ ಬೇರೆ ಬೇರೆ.
ಹಂಸಲೇಖಾರವರು ಶಂಕರಾಭರಣವನ್ನು ತಾಕಿ ವಿಸ್ತರಿಸಿದ ಬಗೆ ಕೇಳಿದ ಮೇಲೆ ಕುತೂಹಲ ಕೆರಳಿದ್ದು ಅರುಂಧತಿ ನಾಗ್‌ರ ವಿಸ್ತರಣೆ ಮತ್ತು ನಡುವೆ ಅವರು ಬಳಸಿರಬಹುದಾದ ಚಿಟ್ಟೆಸ್ವರಗಳು; ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಕ್ಕೆ ಕಣ್ಣುಕಿವಿಯಾದೆ: ಹೀಗಿದೆ ಅರುಂಧತಿ ಅವರ ಶಂಕರಾಭರಣ ಆಲಾಪ…
“”ಅವನು ಇದ್ದಿದಿದ್ರೆ ತುಂಬ ತುಂಬ ಕೆಲಸ ಮಾಡ್ತಿದ್ದ; ಕರ್ನಾಟಕಕ್ಕೆ ಮಾತ್ರ ಅಲ್ಲ, ಇಡೀ ಭಾರತಕ್ಕೆ. ಪೊಟೆನ್‌ಷಿಯಲ್ ಇದ್ದ ಮನುಷ್ಯ; ಒಳ್ಳೆ ವ್ಯಕ್ತಿ. ಅಂಥವನು ಹೋದರೆ its a loss, its a national loss. ನಂದು ಪರ್ಸನಲ್ ಲಾಸ್ ಅದು ಬೇರೆ. ಆ ತರಹದ ವ್ಯಕ್ತಿಗಳು ಅಪರೂಪ; ಶಂಕರ್ ಹೋದಾಗ ಇನ್ನೂ ಕಂಪ್ಯೂಟರ್ ಬಂದಿರಲಿಲ್ಲ. ಮೊಬೈಲ್ ಫೋನ್ಸ್ ಬಂದಿರಲಿಲ್ಲ. ಅವನನ್ನ ಹಿಡಿಯೋವ್ರೇ ಇರ್ತಿರಲಿಲ್ಲ ಯಾರು.. But u cantfi ght destiny. ಅವನು ಹೋಗಿ ಇಪ್ಪತ್ತು ವರ್ಷಗಳ ಮೇಲಾಗ್ತಾ ಬಂತು. There is internalising of loss; You cantexplain; ಇದ್ದಿದ್ದರಲ್ಲಿ how do you manage happily…ಅದು ಮುಖ್ಯ. ಒಬ್ಬಳು ಮಗಳು. ಶಂಕರ್ ಹೋದಾಗ ಅವಳಿಗೆ 5 ವರ್ಷ. ಕಾವ್ಯಂಗೆ I didn’t want one sad house; ಅವಳ ನೇಚರ್ ಸೆಲ್ಫ್ ಪಿಟಿಯಿಂಗ್ ನೇಚರ್ ಆಗಬಾರದು. ಅದಕ್ಕೆ ತುಂಬ ಖುಷಿಯಿಂದಾನೇ ಬಾಳ್ಕೊಂಡು ಬಂದಿದ್ದೇನೆ.
ಅವನು ಹೋದಾಗ ಅವಂದು ಒಂದು ಕನಸಿತ್ತು; ಒಂದು ಥಿಯೇಟರ್ ಕಟ್ಟಬೇಕು ಅಂತ. ಅದು it should be worldclass theatre; ಅದರಲ್ಲಿ ದಿನಾ ನಾಟಕ ಆಡಬೇಕು..ಹೀಗೆ; ನನಗೆ ಅದನ್ನ ಮಾಡೊ ಶಕ್ತಿ ಇತ್ತು; ಅದನ್ನೂ ನಾನು ಒಬ್ಬಳೇ ಮಾಡಲಿಲ್ಲ. ಫ್ರೆಂಡ್ಸ್ ನೆಂಟ್ರಾ ಎಲ್ಲ ಜೊತೆಗೂಡಿದ್ರು. ಅವನು ಹೋದ ಮೇಲೆ ನಾನು ಸ್ವಲ್ಪ ಹೆಚ್ಚಿಗೆ ಕೆಲಸ ಮಾಡಿದೆ; ಯಾಕಂದರೆ ನನ್ನ ಹತ್ರ ಟೈಂ ಇತ್ತು; ಅಷ್ಟು ಪ್ಯಾಷನ್ ಇತ್ತು; ತೃಪ್ತಿ ಇದೆ ನನಗೆ. ಆದರೆ ಅವನ ನೆನಪೇ ಹೊರೆ ಆಗಬಾರದು; ನಮ್ಮ ಮನೇಲಿ ಕೂಡ ಅಷ್ಟೆ; ಅವನ ಒಂದು ಫೋಟೊ ಅವನ ಟ್ರೋಫಿಗಳು ಯಾವುದನ್ನೂ ಇಟ್ಟಿಲ್ಲ. ನೆನಪುಗಳು ಮನಸ್ನಲ್ಲಿ ಇರಬೇಕು. ನೀವು ರಂಗಶಂಕರ ದಲ್ಲೂ ನೋಡಬಹುದು. ನಾನು ಅವನ ಪ್ರತಿಮೆ ಹಾಕಿಲ್ಲ- ಫೋಟೊ ಹಾಕಿಲ್ಲ. ಒಂದು ಗಾಜಿನ ಮೇಲೆ ಸ್ಕೆಚ್ಚಿಂಗ್ ಇದೆ (ಶಂಕರ್‌ನಾಗ್ ನಿಂತಿರುವ ಭಂಗಿಯದ್ದು) ನೀವು ನೆನಸಿಕೊಂಡರೆ ಉಂಟು ಇಲ್ಲಾಂದ್ರೆ ಇಲ್ಲ. ನನ್ನ ಪ್ರಕಾರ ಅದರಲ್ಲಿ ಆಗ್ತಾ ಇರೋ ಚಟುವಟಿಕೆ ಅದು ಶಂಕರ್. ಕರ್ನಾಟಕದಲ್ಲಿ ಎಲ್ಲೆಲ್ಲಿ ನಾಟಕ ಆಗುತ್ತೆ.ಈ ನಮ್ಮ ಆ್ಯಕ್ಟರ್ ಇಲ್ಲಿಂದ ಅಲ್ಲಿಗೆ ಹೋಗಿ ಅಲ್ಲೆಲ್ಲ ಒಳ್ಳೆ ಪ್ರದರ್ಶನ ನೀಡಿದ್ರೆ ಅದು ಶಂಕರ್; ಯಾರಾದರೂ ಎಂಗಸ್ಟರ್ಸ್ ಕರ್ನಾಟಕ ದಿಂದ ಒಂದು ಒಳ್ಳೆಯ ಸಿನೆಮಾ ಮಾಡಿದ್ರೆ ಅದು ಶಂಕರ್. ನನ್ನ ಹತ್ರ ಒಂದು ರಿಪೋರ್ಟ್ ಇದೆ ಮನೇಲಿ. ಬೆಂಗಳೂರಿಂದು. ಜಿಯಾಲಾಜಿಕಲ್ ಸರ್ವೆ ಮಾಡಿರೋದು, ಅಂಡರ್‌ಗ್ರೌಂಡ್‌ನಲ್ಲಿ ಕಲ್ಲು ಎಲ್ಲಿದೆ? ಆ ಕಲ್ಲಲ್ಲಿ ನಾವು ಟನಲ್ ಮಾಡಬಹುದಾ ಹೇಗೆ ಅಂತ ನನ್ನ ಹತ್ರ ರಿಪೋರ್r ಇದೆ. ಅವನು ಇದ್ದಿದ್ರೆ ಅಂಡರ್‌ಗ್ರೌಂಡ್ ರೈಲ್ವೆ ಆಗ್ತಿತ್ತು. ಈಗ ಇರೋದು ಸಫೇìಸ್ ರೈಲ್ವೆ. ಎಲ್ಲ ಮರಗಳನ್ನ ಕಡಿದುಹಾಕಿ ಕಿತ್ತಾಕಿ ಪೊಲ್ಯುಷನ್ ಆಗಿದೆ. ಲಂಡನ್‌ನಲ್ಲಿ ಅಂಡರ್‌ಗ್ರೌಂಡ್ ರೈಲ್ವೆ ಇದೆ. ಅದು ಈಗ ಮಾಡಿರೋ ರೈಲ್ವೆಗಿಂತ ಎಂಟು ಪಟ್ಟು ಹೆಚ್ಚು ಖರ್ಚಾಗುತ್ತೆ ಹೌದು; ಆದರೆ ನಾವು ಲಾಂಗ್ ಟರ್ಮ್ ಯೋಚನೆ ಮಾಡಬೇಕು. ಖರ್ಚಾಗುತ್ತೆ ಹೌದು; ಆದರೆ ಬೆಂಗಳೂರು ಹಾಗೇ ಉಳೀತಿತ್ತು. ಇಟ್ ವಾಸ್ ಹಿಸ್ ಪ್ಲಾನ್. ಆದರೆ ಆಗಲಿಲ್ಲ. ಸದ್ಯ ಇದಾದ್ರೂ ಆಗಿದ್ಯಲ್ಲ… ಅವನು ಯಾವುದೇ ಪ್ರಾಜೆಕ್ಟ್ ಮಾಡ್ತಿದ್ರೂ ನನ್ನ ಹತ್ರ ಬಂದು ಹೇಳ್ಳೋವ್ನು. ನನ್ನಿಂದ ಸಾಧ್ಯ ಇದ್ರೆ ನಾನು ಅವನಿಗೆ ಸಲಹೆ ಕೊಡ್ತಿದ್ದೆ; ಇಲೆª ಇದ್ದರೂ ಅವನ ಜೊತೆಗಂತೂ ಇದ್ದೇ ಇರ್ತಿದ್ದೆ. ನನ್ನ ಜೊತೆಗೆ ಅರು ಇದ್ದಾಳೆ ಅಂತ ಅವನಿಗೆ ಗೊತ್ತಿತ್ತು. ನಂದಿಯಲ್ಲಿ ರೋಪ್‌ವೇ ಕಟಿನಿ ಅಂತಿದ್ದ; ಆಮೇಲೆ ಗಾರ್ಮೆಂಟ್ ಯೂನಿಟ್ ಒಂದು; ಆವಾಗ ಇನ್ನೂ ಕಂಪ್ಯೂಟರ್ಸ್ ಬಂದಿ ರಲಿಲ್ಲ. ಒಂದು ಮೆಡಿಕಲ್ ನೆಟ್‌ವರ್ಕ್ ಮಾಡಬೇಕು ಅಂತಿದ್ದ; ಹೆಲಿಕಾಪ್ಟರ್ ಸರ್ವಿಸ್‌ನಿಂದ ಎಮರ್ಜೆನ್ಸಿ ಪೇಶೆಂಟ್ಸ್ ಗಳನ್ನ ಬೆಂಗಳೂರಿಗೆ ಕರ್ಕೊಂಡು ಬರೋದು; ಏರ್‌ಪೋರ್ಟ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೆಲಿಕಾಪ್ಟರ್ ಸರ್ವಿಸ್; ಅವನಿಗೆ ಈ ಎಲ್ಲ ಆಲೋಚನೆಗಳಿದ್ದವು. ತುಂಬ ತುಂಬ ಓದ್ತಾ ಇದ್ದ. ಜಗತ್ತಿನಲ್ಲಿ ಮೆಡಿಕಲ್ ಫೀಲ್ಡ್‌ನಲ್ಲಿ ಏನೇನು ನಡೀತಿದೆ?
ಸೈನ್ಸ್ ಅಂಡ್ ಟೆಕ್ನಾಲಜಿ ಫೀಲ್ಡ್‌ನಲ್ಲಿ ಏನೇನು ನಡೀತಿದೆ- ಎಲ್ಲ ಓದಿ¤ದ್ದ ಅವನು. ಹಾರು ಬೂದಿ ಇಟ್ಟಿಗೆಗಳ ಒಂದು ಫ್ಯಾಕ್ಟರಿ ಹಾಕೋಣ ಅಂತಿದ್ದ; ಎಲ್ಲಿ ಅಂದರೆ ರಾಯಚೂರಿನ ಥರ್ಮಲ್ ಪವರ್ ಸ್ಟೇಷನ್ ಬಳಿ. ಅದರ ಬೂದಿ ಎಲ್ಲ ಹಾರ್ತಾ ಇರುತ್ತಲ್ಲ..ಅದನ್ನ ಬಳಸಿಕೊಂಡು ಇಟ್ಟಿಗೆಗಳನ್ನ ಮಾಡೋದು. ಇದು ಒಂದು ಪ್ರಾಜೆಕ್ಟ್. ಒಂದು ಆರ್ಡಿನರಿ ಮನೇಲಿ ಹುಟ್ಟಿದ ಹುಡುಗ ಶಂಕರ್; ಉಡುಪಿ ಹತ್ರ ಅವನ ಊರು; ಆರ್ಡಿನರಿ ಸ್ಕೂಲ್‌ಗೆ ಹೋದವನು. ಬ್ಯಾಂಕ್‌ನಲ್ಲಿ ಕ್ಲಾರ್ಕ್ ಅಂತ ಕೆಲಸ ಮಾಡ್ಕೊಂಡು ಫೀಸ್ ಕಟಿ¤ದ್ದ; ಆದರೆ ಅವನಿಗೆ ಅವಕಾಶ ಸಿಕ್ತು; He really flowered. ಮತ್ತೂಂದು ಸಂದರ್ಭ. ಆಗ ಎಲೆಕ್ಷನ್ ಟೈಂ. ರಾಮಕೃಷ್ಣ ಹೆಗಡೆ ಅವರು ಶಂಕರ್‌ಗೆ ಅಂತ ಹಣ ಕೊಟ್ರಾ. ಕ್ಯಾಂಪೇನ್‌ಗೆ ಅಂತ- ಗಾಡಿಗೆ, ಬಾಡಿಗೆ ಲೈಟ್ಸ್‌ಗೆ, ಮೆಗಾ ಫೋನ್‌ಗೆ ಹೀಗೆ. ಶಂಕರ್ ಕ್ಯಾಂಪೇನ್ ಮುಗಿಸಿದ ಮೇಲೆ ಉಳಿದ ಹಣಾನ ತಗೊಂಡು ಹೋಗಿ ಹೆಗಡೆ ಅವರಿಗೆ ಕೊಟ್ಟಿದ್ದಾನೆ. ಹೆಗಡೆ ಅವರು ಅಂದರಂತೆ- ನನ್ನ ಇಡೀ ಪೊಲಿಟಿಕಲ್ ಕೆರಿಯರ್‌ನಲ್ಲಿ ಹಣ ಮಿಕು¤ ಅಂತ ವಾಪಸ್ ತಂದು ಕೊಟ್ಟಿರಲಿಲ್ಲ. ಇವನೇನಯ್ಯ ಇವ್ನು…ಅಂದರಂತೆ….ಇಂಥವರು ಬೇಕು. ಸಂಕೇತ್ ಎಲೆಕ್ಟ್ರಾನಿಕ್ಸ್ ಸೃಷ್ಟಿ ಮಾಡಿದ; ಕನ್ನಡ ಸಿನೆಮಾ ಇಲ್ಲಿ ಮಾಡಿದ್ರೂ ಸಾಂಗ್ ರೆಕಾರ್ಡಿಂಗ್ ಮಿಕ್ಸಿಂಗ್ ಎಲ್ಲ ಆಗ್ತಿದದ್ದು ಚೆನ್ನೈಯಲ್ಲಿ. ಅದಕ್ಕೆ ಆಗಿನ ಕಾಲದಲ್ಲಿ ಲೆಟರ್ ಆಫ್ ಕ್ರೆಡಿಟ್ ತೆರೆದು ಅಮೆರಿಕಾದಿಂದ ಪರಿಕರಗಳನ್ನ ಇಂಪೋರ್ಟ್ ಮಾಡ್ಕೊಂಡು ನಮ್ಮ ಕರ್ನಾಟಕದಲ್ಲಿ ನಮ್ಮದು ಅಂತ ಒಂದು ಇರಬೇಕು ಅಂತ ಇದ್ದ. ಈ ರೀತಿ ಇರಬೇಕು. ಸುಮ್ಮನೆ ಸಿಸ್ಟಂನ ಬ್ಲೀಡ್ ಮಾಡ್ಕೊಂಡು ಇರೋದು ನೋ ಪಾಯಿಂಟ್. ಒಂದು ಸಲ ಮೆಟ್ರೊ ರೈಲ್‌ಗೋಸ್ಕರ ಶಂಕರ್ ಸ್ವಂತ ದುಡ್ಡಲ್ಲಿ ಪ್ಯಾರಿಸ್ ಮತ್ತು ಲಂಡನ್‌ಗೆ ಹೋದ; ನಾನು ಕೇಳಿದೆ- “”ಶಂಕರ್ ನೀ ಯಾಕೆ ನಿನ್ನ ಸ್ವಂತ ದುಡ್ಡು ಖರ್ಚು ಮಾಡ್ಕೊಂಡು ಹೋಗ್ತಿದ್ಯ..ದುಡ್ಡು ಜಾಸ್ತಿ ಆಗ್ತಿದ್ಯ ನಿನ್ನ ಹತ್ರ?’ ಅವನು ಒಂದೇ ಮಾತು ಹೇಳª- “”ಅರು ನಾನು ಹೆಸರು ಗಳಿಸಿದ್ದು ಗೌರವ ಸಂಪಾದನೆ ಮಾಡಿದ್ದು ಕರ್ನಾಟಕದಲ್ಲಿ. ಈ ರಾಜ್ಯಕ್ಕೆ ನಾನು ಇಷ್ಟು ಖರ್ಚುಮಾಡಿ ಒಂದು ರೈಲ್ವೆ ಕೊಡೋದಕ್ಕೆ ಆಗೋದಿಲ್ವ? ನನ್ನ ಬಾಯಿ ಕಟ್ಟಿಹೋಗಿತ್ತು…” ಕಾಲ ಕೂಡ ತನ್ನ ಒಡಲಲ್ಲಿ ಇಂಥದ್ದೊಂದು ಜನ್ಮ ತಾಳುತ್ತದೆ ಎಂದು ಕನಸೂ ಕಂಡಿರದಂಥವುಗಳನ್ನು ಶಂಕರ್ ನಾಗ್ ಅವರು ಕನಸಿದ್ದರು; ಆದರೆ ಕಾಲಕ್ಕೆ ಅವರಷ್ಟು ಧಾವಂತವಿರಲಿಲ್ಲವಾದ್ದರಿಂದ ಅವರ ಕನಸುಗಳು ಕೆಲವು ನನಸಾಗುತ್ತಿವೆ, ಕೆಲವು ಸನ್ನಾಹ ನಡೆಸಿವೆ, ಮತ್ತೆ ಕೆಲವು ಗರ್ಭ ಧರಿಸಿಯೇ ಇಲ್ಲ. ಆದರೆ ಶಂಕರ್ ಸರ್ ಅಧ್ಯಾಯ ಮುಗಿಸಿ ಹೊರಟೇಬಿಟ್ಟರು. ತುಂಬ ದೂರದೃಷ್ಟಿ ಇದ್ದದ್ದರಿಂದಲೇ ಅವರು ರಾಗದಂತೆ ಹಲವರಲ್ಲಿ ವಿಸ್ತರಣೆಯಾ ಗುತ್ತಲೇ ಇದ್ದಾರೆ. ಇದು ನಿಜವಾದ ಹುಟ್ಟು ಮತ್ತು ಸಂಭ್ರಮ. ಎನ್.ಸಿ. ಮಹೇಶ್