Advertisement
ಈಗಿರುವ ಭಾರತ್ ಸ್ಟೇಜ್ -4 ಗ್ರೇಡ್‌ನಿಂದ ಬಿಎಸ್-6ಗೆ ಏರಲು 2020ರ ಏಪ್ರಿಲ್‌ನ ಗಡುವನ್ನು ಈ ಹಿಂದೆ ಅಂದರೆ 2015ರಲ್ಲೇ ಸರ್ಕಾರ ವಿಧಿಸಿಕೊಂಡಿತ್ತು. ಅದರಂತೆ, ದೇಶಾದ್ಯಂತ ಇನ್ನೆರಡು ವರ್ಷಗಳ ಬಳಿಕ ಬಿಎಸ್-6 ಗ್ರೇಡ್ ಜಾರಿಗೆ ಬರಬೇಕಿತ್ತು. ಆದರೆ, ದೆಹಲಿ ವಾಯುಮಾಲಿನ್ಯ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನು 2 ವರ್ಷ ಮುಂಚಿತವಾಗಿಯೇ ಅಂದರೆ 2018ರ ಏಪ್ರಿಲ್‌ನಿಂದಲೇ ಜಾರಿಯಾಗುವಂತೆ ಬುಧವಾರ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶಿಸಿದೆ.
Related Articles
Advertisement
ದೆಹಲಿಗರಿಗೆ ನಗರ ತ್ಯಜಿಸಲು ಇಷ್ಟವಂತೆ
ವಾಯುಮಾಲಿನ್ಯ ವಿಪರೀತವಾಗಿರುವ ಹಿನ್ನೆಲೆಯಲ್ಲಿ ದೆಹಲಿಗರು ನಗರ ಬಿಟ್ಟು ತೆರಳಲು ಇಷ್ಟಪಡುತ್ತಾರೆ ಎಂಬ ಅಂಶ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಹಿಂದುಸ್ತಾನ್ ಟೈಮ್ಸ್ ನಡೆಸಿದ ಟ್ವಿಟರ್ ಸಮೀಕ್ಷೆಯಲ್ಲಿ ಶೇ.83ರಷ್ಟು ಮಂದಿ ದೆಹಲಿಯನ್ನು ತ್ಯಜಿಸಲು ಬಯಸುತ್ತೇವೆ ಎಂದಿದ್ದಾರೆ. ಒಟ್ಟು 844 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇ.11 ಮಂದಿ ದೆಹಲಿ ಬಿಡಲ್ಲ ಎಂದಿದ್ದರೆ, ಶೇ.6ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ.
787 ಕೋಟಿಯಲ್ಲಿ ಬಳಸಿದ್ದು 93 ಲಕ್ಷ!
ದೆಹಲಿ ಸರ್ಕಾರವು ಪರಿಸರ ಸೆಸ್ ರೂಪದಲ್ಲಿ ಒಟ್ಟು 787 ಕೋಟಿ ರೂ. ಸಂಗ್ರಹಿಸಿದ್ದರೂ, ಬಳಕೆ ಮಾಡಿದ್ದು ಕೇವಲ 93 ಲಕ್ಷ ರೂ. ಮಾತ್ರ ಎಂಬ ವಿಚಾರ ಬಹಿರಂಗವಾಗಿದೆ. ಆರ್‌ಟಿಐ ಮೂಲಕ ಪಡೆದ ಮಾಹಿತಿಯಲ್ಲಿ ಈ ಅಂಶ ಗೊತ್ತಾಗಿದೆ. ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯು ಪರಿಸರ ಸೆಸ್ ಸಂಗ್ರಹಿಸು ತ್ತಿದ್ದು, ಆ ಮೊತ್ತವನ್ನು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಬಳಕೆ ಮಾಡಬೇಕಾಗುತ್ತದೆ. ಆದರೆ, ಈವರೆಗೆ ಸರ್ಕಾರ ಬಳಸಿದ್ದು 93 ಲಕ್ಷ ರೂ. ಮಾತ್ರ. ಈ ಬಗ್ಗೆ ಕೇಳಿದರೆ ಕೇಜ್ರಿವಾಲ್ ಸರ್ಕಾರವು, 786 ಕೋಟಿ ರೂ.ಗಳನ್ನು 500 ಎಲೆಕ್ಟ್ರಿಕ್ ಬಸ್, 2 ಸಾವಿರ ಡಿಟಿಸಿ ಮತ್ತು ಕ್ಲಸ್ಟರ್ ಬಸ್‌ಗಳ ಖರೀದಿಗೆ ಬಳಸಲಿದ್ದೇವೆ ಎಂದಿದೆ.