Advertisement

ನಿರಂತರ ವಿದ್ಯುತ್‌ ಗ್ರಾಹಕರ ಹಕ್ಕು

12:54 AM Dec 23, 2020 | mahesh |

ಹೊಸದಿಲ್ಲಿ: ದೇಶಾದ್ಯಂತ ಗ್ರಾಹಕರು ಇನ್ನು ನಿರಂತರ ವಿದ್ಯುತ್‌ ಸಂಪರ್ಕ ಪಡೆಯುವ ಹಕ್ಕು ಹೊಂದಲಿದ್ದಾರೆ.

Advertisement

ವಿದ್ಯುತ್‌ ಪೂರೈಕೆ (ಗ್ರಾಹಕರ) ಹಕ್ಕು ನಿಯಮಗಳು, 2020ರ ಅಡಿಯಲ್ಲಿ ತರಲಾಗಿರುವ ಬದಲಾವಣೆಗಳು ಕೃಷಿ ಸಂಪರ್ಕದಂಥ ಕೆಲವು ನಿರ್ದಿಷ್ಟ ವರ್ಗಗಳನ್ನು ಬಿಟ್ಟು ಉಳಿದೆಲ್ಲ ಗ್ರಾಹಕರಿಗೆ ವರ್ಷಪೂರ್ತಿ 24×7 ವಿದ್ಯುತ್‌ ಪಡೆಯುವ ಹಕ್ಕನ್ನು ಕೊಡಲಿವೆ. ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ಈ ವಿಚಾರವನ್ನು ಘೋಷಿಸಿದ್ದಾರೆ. “ಸರಕಾರಿ ಆಗಿರಲಿ ಅಥವಾ ಖಾಸಗಿ ಆಗಿರಲಿ; ದೇಶಾದ್ಯಂತ ವಿದ್ಯುತ್‌ ಪೂರೈಕೆ ಕಂಪೆನಿಗಳು(ಡಿಸ್ಕಾಂ) ಏಕಸ್ವಾಮ್ಯ ಹೊಂದಿವೆ ಮತ್ತು ಇದರಿಂದ ಗ್ರಾಹಕರಿಗೆ ಪರ್ಯಾಯವಿಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ಹೊಸ ನಿಯಮಗಳಲ್ಲಿ ಗ್ರಾಹಕರ ಹಕ್ಕುಗಳನ್ನು ಸ್ಥಾಪಿಸುವುದು, ಈ ಹಕ್ಕುಗಳ ಅನುಷ್ಠಾನವನ್ನು ಖಾತ್ರಿಪಡಿಸುವುದು ಅಗತ್ಯವಾಗಿತ್ತು’ ಎಂದಿದ್ದಾರೆ.

ಹೊಸ ನಿಯಮಗಳಡಿ ಗ್ರಾಹಕರ ಹಕ್ಕುಗಳು, ವಿತರಣ ಪರವಾನಿಗೆದಾರರ ಕಟ್ಟುಪಾಡುಗಳು, ಹೊಸ ಸಂಪರ್ಕದ ವಿತರಣೆ, ಅಸ್ತಿತ್ವದಲ್ಲಿ ಇರುವ ಸಂಪರ್ಕಗಳಲ್ಲಿ ಮಾರ್ಪಾಡು, ಮೀಟರಿಂಗ್‌ ವ್ಯವಸ್ಥೆ, ಬಿಲ್ಲಿಂಗ್‌ ಮತ್ತು ಪಾವತಿ ವ್ಯವಸ್ಥೆಯ ವಿಚಾರದಲ್ಲೂ ಹಲವು ಬದಲಾವಣೆಗಳನ್ನು ತರಲಾಗಿದೆ. ಎಲ್ಲ ಡಿಸ್ಕಾಂಗಳು 24×7 ಉಚಿತ ಕಸ್ಟಮರ್‌ ಕೇರ್‌ ಕಾಲ್‌ ಸೆಂಟರ್‌ಗಳನ್ನು ಸ್ಥಾಪಿಸುವುದು, ಗ್ರಾಹಕರ ಕುಂದುಕೊರತೆ ಪರಿಹಾರಕ್ಕಾಗಿ ಬಲಿಷ್ಠ ವ್ಯವಸ್ಥೆ ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next