Advertisement

ದೇಗುಲ, ಪ್ರವಾಸಿ ತಾಣಗಳಲ್ಲಿ ಮುಂದುವರಿದ ಜನರ ದಟ್ಟಣೆ

01:27 AM Apr 17, 2022 | Team Udayavani |

ಬೆಳ್ತಂಗಡಿ: ಸರಣಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ಹಾಗು ದೇವಸ್ಥಾನಗಳಲ್ಲಿ ಜನರ ದಟ್ಟಣೆ ಶನಿವಾರವೂ ಮುಂದುವರಿದಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಸಹಿತ ಎಲ್ಲೆಡೆ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಷು ಜಾತ್ರೆ ಆರಂಭಗೊಂಡ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಭಕ್ತರು ಆಗಮಿಸುತ್ತಿದ್ದಾರೆ. ಸುರ್ಯ ಸದಾಶಿವರುದ್ರ ದೇವಸ್ಥಾನ, ಸೌತಡ್ಕ ಮಹಾಗಣಪತಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು.

ಕುಕ್ಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಶನಿವಾರ ದೂರದೂರುಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಪಾರ್ಕಿಂಗ್‌ ಪ್ರದೇಶದಲ್ಲೂ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು.

ಇದನ್ನೂ ಓದಿ:ಕಲ್ಲಂಗಡಿ ಧ್ವಂಸ ಪ್ರಕರಣ : ನಾಲ್ವರು ಆರೋಪಿಗಳಿಗೆ ಜಾಮೀನು

Advertisement

ಪಣಂಬೂರು ಬೀಚ್‌ನಲ್ಲಿ ಪ್ರವಾಸಿಗರ ಕಳೆ
ಪಣಂಬೂರು: ಸತತ ನಾಲ್ಕು ದಿನಗಳ ರಜೆಯ ಕಾರಣ ಪಣಂಬೂರು ಬೀಚ್‌ನಲ್ಲಿ ಪ್ರವಾಸಿಗರ ದಟ್ಟಣೆ ಶನಿವಾರ ಕಂಡುಬಂತು. ಯುಗಾದಿ ಪ್ರಯುಕ್ತ ರಜೆಯಿದ್ದು ವಿವಿಧ ದೇವಸ್ಥಾನ, ಮಠ ಮಂದಿರಗಳಿಗೆ ಭೇಟಿ ನೀಡಿದ ಜನ ಪಣಂಬೂರಿನಲ್ಲಿ ಸಂಜೆ ಸಮುದ್ರದಲ್ಲಿ ಸಮುದ್ರ ಸ್ನಾನಗೈದು, ಒಂಟೆ -ಕುದುರೆ ಸವಾರಿ ಮಾಡಿ ಸಂಭ್ರಮಿಸಿದರು. ಕೊರೊನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದರಿಂದ ಕೊರೊನಾ ನಡುವೆ ವ್ಯಾಪಾರದಿಂದ ಸೊರಗಿದ ಬೀಚ್‌ ಬದಿಯ ವ್ಯಾಪಾರಿಗಳಿಗೆ ಭರವಸೆಯ ದಿನಗಳು ಎದುರಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next