Advertisement
ಈ ಮಧ್ಯೆ, ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಸಿದ್ದಾಪುರ ಮತ್ತು ಕೊಟ್ಟಿಗೆಹಾರದಲ್ಲಿ ರಾಜ್ಯ ದಲ್ಲಿಯೇ ಅಧಿಕವೆನಿಸಿದ 14 ಸೆಂ.ಮೀ.ಗಳಷ್ಟು ಮಳೆ ಸುರಿಯಿತು. ಈ ಮಧ್ಯೆ, ಮಂಗಳವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆ ಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ ಮತ್ತು ಒಳನಾಡಿನ ಹಲವೆಡೆ ಸಾಧಾರಣ ಮಳೆ ಯಾಗಲಿದೆ ಎಂದು ಹವಾಮಾನ ಕಚೇರಿಯ ಇಲಾಖೆ ತಿಳಿಸಿದೆ.
Related Articles
Advertisement
ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಎದುರಾಗಿದ್ದು, ಹುಬ್ಬಳ್ಳಿ-ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಂ.218 ಸೇರಿ ಜಿಲ್ಲೆಯಲ್ಲಿ 14 ಸೇತುವೆಗಳು ಜಲಾವೃತಗೊಂಡಿವೆ. ಮುಧೋಳ ತಾಲೂಕಿನ ನಂದಗಾವ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮಗಳ ಸುತ್ತ ನೀರು ಬಂದಿದ್ದು, ಅಲ್ಲಿನ ಜನರನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ.
ನಾಲ್ವರ ಸಾವು, ಮೂವರಿಗೆ ಗಾಯ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಹಾಗೂ ಉಡುಪಿ ಜಿಲ್ಲೆ ಕೊಲ್ಲೂರುಗಳಲ್ಲಿ ಸಂಭವಿಸಿದ ಪ್ರತ್ಯೇಕ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ನಾಲ್ವರು ಅಸುನೀಗಿದ್ದಾರೆ. ಮೂವರು ಗಾಯಗೊಂಡಿದ್ದಾರೆ.ಶನಿವಾರ ರಾತ್ರಿ ಮಲಗಿದ್ದಾಗ ಮನೆಯ ಗೋಡೆ ಕುಸಿದು ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಕೂಲಿ ಕಾರ್ಮಿಕ ಗುರುಸ್ವಾಮಿ (40) ಎಂಬುವರು ಮೃತಪಟ್ಟಿದ್ದಾರೆ. ಇವರ ಪತ್ನಿ ಗಂಗಮ್ಮ, ಮಕ್ಕಳಾದ ಮಂಜುನಾಥ, ಭೂಮಿಕಾ ಗಾಯಗೊಂಡಿದ್ದಾರೆ. ಪುತ್ತೂರು ಹೊರವಲಯದ ಕುಂಜೂರು ಪಂಜ ಸಮೀಪದ ಮೇಗಿನಪಂಜದಲ್ಲಿ ಉಮೇಶ್ ಪೂಜಾರಿ ಎಂಬುವರು ಹಟ್ಟಿಯಿಂದ ಗೊಬ್ಬರ ತೆಗೆಯುತ್ತಿದ್ದಾಗ ಹಟ್ಟಿಯ ಗೋಡೆ ಕುಸಿದು ಅಲ್ಲಿಯೇ ನಿಂತಿದ್ದ ಅವರ ತಾಯಿ ವಾರಿಜಾ (86)ಮೃತಪಟ್ಟಿದ್ದಾರೆ. ಸಂಜೆ ಸುರಿದ ವಿಪರೀತ ಮಳೆಯಿಂದಾಗಿ ಗೋಡೆ ಹಸಿಯಾಗಿತ್ತು. ಈ ಮಧ್ಯೆ, ಪುತ್ತೂರು ಸಮೀಪದ ಅಜಲಡ್ಕ ಅರ್ತಿಮೂಲೆಯಲ್ಲಿ ಪುರಂದರ (50) ಎಂಬುವರು ಆನಾಜೆ ಬಳಿಯ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಇದೇ ವೇಳೆ, ಕೊಲ್ಲೂ ರು ಸಮೀಪ ಸೌಪರ್ಣಿಕಾ ನದಿಗೆ ಕಾಲು ಜಾರಿ ಬಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ನೆರೆ ವೀಕ್ಷಣೆಗೆ ಪ್ರಧಾನಿ ಭೇಟಿ ಅಗತ್ಯವಿಲ್ಲ
ಹುಬ್ಬಳ್ಳಿ: ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಭೇಟಿ ನೀಡಿ ಸಮೀಕ್ಷೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಬೇಕೆಂದೇನಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲುಂಟಾದ ಅತಿವೃಷ್ಟಿ ಕುರಿತು ಈಗಾಗಲೇ ಕೇಂದ್ರದ ಅಧ್ಯಯನ ತಂಡ ಹಾಗೂ ರಾಜ್ಯ ಸರ್ಕಾರ ಸಮಗ್ರ ಅಧ್ಯಯನ ಮಾಡುತ್ತಿದೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ನೆರೆ ಪರಿಹಾರ ಸಮರ್ಪಕವಾಗಿ ನಡೆಯುತ್ತಿದೆ. ನೆರೆ ಪರಿಹಾರಕ್ಕೆ ಸಂಬಂಧಿಸಿದ ಸಚಿವರೇ ಭೇಟಿ ನೀಡಿ ಸಮೀಕ್ಷೆ ಮಾಡಿದಾಗ ಪ್ರಧಾನಿ ಭೇಟಿಯಾಗುವ ಅಗತ್ಯವಿಲ್ಲ ಎಂದರು. ನೆರೆ ಸಂತ್ರಸ್ತರಿಗೆ 10 ಸಾವಿರ ರೂ. ಕೊಟ್ಟಿದ್ದೇ ದೊಡ್ಡದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರ ಮಾತಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಶೇ.25 ಮನೆ ಕುಸಿದವರಿಗೆ 25 ಸಾವಿರ ರೂ., ಶೇ.75 ಕುಸಿದವರಿಗೆ 1 ಲಕ್ಷ ರೂ. ಕೊಡುತ್ತಿದ್ದೇವೆ. ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಪರಿಹಾರ ನೀಡಲಾಗುತ್ತಿದೆ ಎಂದರು. ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರರ ರಕ್ಷಣೆ
ಗದಗ: ನರಗುಂದ ತಾಲೂಕಿನ ಕೊಣ್ಣೂರಿ ನಲ್ಲಿ ಭಾನುವಾರ ಉಮೇಶ ಹಾಗೂ ಪ್ರವೀಣ ಎಂಬುವರು ಬಾದಾಮಿ ಕಡೆ ಯಿಂದ ಕೊಣ್ಣೂರು ಗ್ರಾಮಕ್ಕೆ ಮಲಪ್ರಭಾ ನದಿಯ ಪ್ರವಾಹ ಲೆಕ್ಕಿಸದೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ, ಮಲಪ್ರಭಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಬೈಕ್ ಸಮೇತ ಕೊಚ್ಚಿ ಹೋಗು ತ್ತಿದ್ದರು. ಇದನ್ನು ಗಮನಿಸಿದ ಜೆಸಿಬಿ ಚಾಲಕ ಸದ್ದಾಂ ಎಂಬುವರು, ಜೆಸಿಬಿ ಸಹಾಯ ದಿಂದ ಬೈಕ್ ಅಡ್ಡಗಟ್ಟುವ ಮೂಲಕ ಕೊಚ್ಚಿ ಹೋಗುತ್ತಿದ್ದ ಯುವಕರನ್ನು ಬೈಕ್ ಸಮೇತ ದಡ ಸೇರಿಸಿದ್ದಾರೆ. ಹಂಪಿ ಸ್ಮಾರಕಗಳು ಜಲಾವೃತ
ಹೊಸಪೇಟೆ: ತುಂಗ ಭದ್ರಾ ಜಲಾಶಯದ 28 ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದ್ದು, ಹಂಪಿಯ ಪುರಂದರ ಮಂಟಪ ಸಂಪೂರ್ಣ ಮುಳುಗಿದೆ. ವೈದಿಕ ಮಂಟಪ, ಜನಿವಾರ ಮಂಟಪ ಸೇರಿ ಹಲವು ಸ್ಮಾರಕಗಳ ಬಳಿ ನೀರು ನಿಂತಿದೆ. ರಾಮ-ಲಕ್ಷ್ಮಣ ದೇಗುಲಕ್ಕೆ ತೆರಳುವ ಪಾದ ಚಾರಿ ಮಾರ್ಗ, ಹಂಪಿಯಿಂದ ವಿರೂಪಾಪುರ ಗಡ್ಡೆಗೆ ತೆರಳುವ ಮಾರ್ಗ ಜಲಾವೃತಗೊಂಡಿದೆ. ಕಂಪ್ಲಿ, ಗಂಗಾವತಿ ಮಾರ್ಗದ ಸೇತುವೆ ಮುಳುಗುವ ಹಂತ ತಲುಪಿದ್ದು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.