Advertisement
ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಕೆಲ ಸ್ಮಾರಕಗಳು, ಮುಳಗಡೆಯಾಗಿ ಕಾಣದಂತಾಗಿವೆ. ಸ್ನಾನಘಟ್ಟ, ವೈದಿಕ ಮಂಟಪ, ಚಕ್ರತೀರ್ಥ ಪ್ರದೇಶ, ಕೋದಂಡರಾಮ ದೇವಾಲಯದ ಆವರಣ, ಪುರಂದರ ದಾಸರ ಮಂಟಪ ವಿಜಯನಗರ ಅರಸರ ಕಾಲದ ಹಳೆ ಸೇತುವೆಯ ಬೃಹತ್ ಕಲ್ಲಿನ ಕಂಬಗಳು ಸಂಪೂರ್ಣ ನೀರಿನಲ್ಲಿ ಮುಳಗಿವೆ.
Related Articles
Advertisement
ತಾಲ್ಲೂಕಿನ ವೆಂಕಟಾಪುರ, ಬುಕ್ಕಸಾಗರ ಗ್ರಾಮದ ನದಿ ಅಂಚಿನ ಬಾಳೆ ತೋಟಗಳಿಗೆ ನೀರು ಒಕ್ಕಿದೆ. ನದಿ ತೀರಕ್ಕೆ ಹೋಗದಂತೆ ಹಂಪಿ ಕೊಟ್ಟೂರು ಸ್ವಾಮಿ ಮಠದ ಹತ್ತಿರ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಒಂದೊಮ್ಮೆ ಜಲಾಶಯದಿಂದ ನದಿಗೆ ಮತ್ತಷ್ಟು ನೀರು ಹರಿದು ಬಂದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿರುವ ಜನತಾ ಪ್ಲಾಟ್‌ಗಳಿಗೂ ನೀರು ನುಗ್ಗುವ ಸಾಧ್ಯತೆಯಿದೆ. ಹೀಗಾಗಿ ಅಲ್ಲಿನ ನಿವಾಸಿಗಳನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಹಂಪಿ ಜೈನ್ ಮಂದಿರದಲ್ಲಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಸ್ಥಳದಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.