Advertisement

ರಾಜಧಾನಿ ಹಸಿರಾಗಿಸಲು ಮುಂದಡಿ

11:23 AM Apr 04, 2017 | Team Udayavani |

ಬೆಂಗಳೂರು: ನಗರದಲ್ಲಿ ಹಸಿರು ಪರಿಸರ ಹೆಚ್ಚಿಸುವ ಮತ್ತು ಅಪಾಯ ಸ್ಥಿತಿಯಲ್ಲಿರುವ ಮರಗಳು ಧರೆಗುರುಳಿ ಸಂಭವಿಸುತ್ತಿದ್ದ ಅನಾಹುತಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಸರ ತಜ್ಞ ಡಾ.ಎ.ಎನ್‌. ಯಲ್ಲಪ್ಪ ರೆಡ್ಡಿ ಅವರು ಸಲ್ಲಿಸಿದ್ದ ಶಿಫಾರಸುಗಳ ವರದಿಯನ್ನು ಕೊನೆಗೂ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ. ನಗರದ ವಾತಾವರಣ ಹಾಗೂ ಮಣ್ಣಿನ ಫ‌ಲವತ್ತತೆಗೆ ಅನುಗುಣವಾಗಿ ಎಂಥ ಮರ ಗಿಡಗಳನ್ನು ನೆಡಬೇಕು.

Advertisement

ಅತಿಹೆಚ್ಚು ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುವ ಪ್ರದೇಶಗಳಲ್ಲಿ ಎಂತಹ ಪ್ರಬೇಧದ ಗಿಡಗಳನ್ನು ಹಾಕಬೇಕು ಎಂಬುದರ ಕುರಿತು ಸಮಗ್ರ ಅಧ್ಯಯನ ನಡೆಸಿದ್ದ ಯಲ್ಲಪ್ಪರೆಡ್ಡಿ ಸಮಿತಿ ನಗರದಲ್ಲಿ ದೇಶಿಯ ಗಿಡಿಗಳು ಸೇರಿದಂತೆ 250 ಪ್ರಬೇಧದ ಗಿಡಿಗಳನ್ನು ಸೂಚಿಸಿ ವರದಿಯನ್ನು ಸಲ್ಲಿಕೆ ಮಾಡಿತ್ತು. ವರದಿ ಸಲ್ಲಿಕೆಯಾಗಿ 15 ವರ್ಷಗಳು ಕಳೆದರೂ ಈವರೆಗೆ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಿರಲಿಲ್ಲ. 

ಆದರೆ, ಬಿಬಿಎಂಪಿಯ 2017-18ನೇ ಸಾಲಿನ ಬಜೆಟ್‌ನಲ್ಲಿ ಯಲ್ಲಪ್ಪ ರೆಡ್ಡಿ ವರದಿಯ ಕುರಿತು ಉಲ್ಲೇಖೀಸಿರುವ ತೆರಿಗೆ ಮತ್ತು ಆಸ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ಪರಿಸರ ಸಂರಕ್ಷಣೆ ಹಾಗೂ ಸಸಿಗಳನ್ನು ಕಾಪಾಡಲು ಮತ್ತು ನಗರದಲ್ಲಿ ಮರಗಳಿಂದ ಅನಾಹುತ ಉಂಟಾಗದಂತೆ ಎಚ್ಚರ ವಹಿಸಲು ವರದಿಯಲ್ಲಿನ ಅಂಶಗಳನ್ನು ಅನುಷ್ಠಾನಧಿಗೊಳಿ­ ಸು­ವುದಾಗಿ ತಿಳಿಸಿದ್ದರು. ಅದರಂತೆ ಶಿಫಾರಸು ಜಾರಿ ಕಾರ್ಯಕ್ಕೆ ಚಾಲನೆ ದೊರೆತಂತಾಗಿದೆ.

ಯಲ್ಲಪ್ಪರೆಡ್ಡಿ ವರದಿಯಲ್ಲಿನ ಕೆಲ ಅಂಶಗಳು: ಗುಲ್‌ ಮೊಹರ್‌, ಸ್ವತೋಡಿಯಾ, ಆಕಾಶ ಮಲ್ಲಿಗೆಯಂಥ ಮರಗಳು ನೋಡಲು ಆಕರ್ಷಕವಾಗಿದ್ದರೂ  ಸಾಧಾರಣ ಗಾಳಿ, ಮಳೆಗೆ ಉರುಳಿ ಬೀಳುತ್ತವೆ. ನೈಸರ್ಗಿಕವಾಗಿ ಈ ಮರಗಳ ಸ್ವರೂಪವೇ ಹೀಗಿದ್ದು, ಹಗುರ ಮರಗಳೆನಿಸಿವೆ. 30-40 ವರ್ಷಗಳ ಹಿಂದೆ ಬಡಾವಣೆಗಳ ನಿರ್ಮಾಣ ವೇಳೆ ಸೌಂದರ್ಯ ಹೆಚ್ಚಿಸುವ ಕಾರಣಕ್ಕೆ ರಸ್ತೆ ಬದಿ ಹೂ ಬಿಡುವ ಗಿಡಗಳನ್ನು ನೆಡಲಾಗಿತ್ತು. ಅವು  ಈಗ ಮಳೆ ಮತ್ತು ಗಾಳಿ ಸಂದರ್ಭದಲ್ಲಿ ಧರೆಗುರುಳುತ್ತಿವೆ. ಹೀಗಾಗಿ, ಇವುಗಳನ್ನು ಮತ್ತೆ ನೆಡಿಸಬಾರದು ಎಂದು ತಿಳಿಸಲಾಗಿದೆ.

ಕೊಂಬೆಗಳಿಗೆ ಕತ್ತರಿ ಸರಿಯಲ್ಲ: ಕೊಂಬೆಗಳನ್ನು ಅವೈಜ್ಞಾನಿಕವಾಗಿ ಕಡಿಯುವುದೂ ಕೂಡ ಮರ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌, ಒಎಫ್ಸಿ ಸಂಸ್ಥೆಗಳು ರಸ್ತೆ ಅಗೆಯುವುದರಿಂದ ಮರದ ಬೇರುಗಳು ಸಡಿಲಗೊಳ್ಳುತ್ತವೆ. ಇದರಿಂದ ಮರ ಕ್ರಮೇಣ ಒಂದು ಬದಿಗೆ ವಾಲಿಕೊಳ್ಳುತ್ತದೆ ಎಂದು ವರದಿಯಲ್ಲಿದೆ.

Advertisement

ಎಂ.ಆರ್‌.ಶ್ರೀನಿವಾಸಮೂರ್ತಿ ಪಾಲಿಕೆಯ ಆಯುಕ್ತರಾಗಿದ್ದ ವೇಳೆ ನಗರಕ್ಕೆ ಸೂಕ್ತ ಸಸಿಗಳ ಬಗ್ಗೆ ವರದಿ ನೀಡುವಂತೆ ಕೋರಿದ್ದರು. ಅದರಂತೆ ನಗರದ ವಾತಾವರಣಕ್ಕೆ ಸೂಕ್ತವಾದ ಸುಮಾರು 250ಕ್ಕೂ ಹೆಚ್ಚು ಪ್ರಬೇಧದ ಸ್ಥಳೀಯ ಸಸಿಗಳ ಕುರಿತು ವರದಿ ಸಲ್ಲಿಸಲಾಗಿತ್ತು. ಆದರೆ, ವರದಿ ನೀಡಿ ಹಲವು ವರ್ಷಗಳು ಕಳೆದರೂ ಪಾಲಿಕೆ ಜಾರಿಗೊಳಿಸಿಲ್ಲ. 
-ಎ.ಎನ್‌.ಯಲ್ಲಪ್ಪರೆಡ್ಡಿ, ಪರಿಸರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next