ರಾಮನಗರ: ಮೈಸೂರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೋಟು ಮುದ್ರಣ ಘಟಕದಿಂದ ಬೆಂಗಳೂ ರಿನ ಕಡೆಗೆ ಸಾಗುತ್ತಿದ್ದ ನೋಟು ತುಂಬಿದ್ದ ಕಂಟೈನರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉರುಳಿ ಬಿದ್ದ ಘಟನೆ ನಗರ ಸಮೀಪದ ಕಲ್ಲುಗೋಪಹಳ್ಳಿ ಬಳಿ ನಡೆದಿದೆ.
ಗುರುವಾರ ಮಧ್ಯಾಹ್ನ ಮೈಸೂರಿನ ನೋಟು ಮುದ್ರಣ ಘಟಕದಿಂದ 18 ಕಂಟೈನರ್ ಲಾರಿಗಳು ಕೈಗಾ ರಿಕಾ ಭದ್ರತಾ ಪಡೆಯ ರಕ್ಷಣೆಯಲ್ಲಿ ಬೆಂಗಳೂರಿನ ಕಡೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆ 275ರ ವಿಸ್ತ ರಣಾ ಕಾಮಗಾರಿ ನಡೆಯುತ್ತಿದೆ. ರಾಮನಗರ-ಬಿಡದಿ ನಡುವೆ ಕಲ್ಲುಗೋಪಹಳ್ಳಿ ಬಳಿ ಕಾಮಗಾರಿ ಕಾರಣ ದೊಡ್ಡ ತಿರುವು ನಿರ್ಮಾಣವಾಗಿದ್ದು, ಕಂಟೈನರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ.
ಚಾಲಕನಿಗೆ ಸಣ್ಣ ಪುಟ್ಟ ಗಾಯ: ತಕ್ಷಣ ರಕ್ಷಣಾ ಪಡೆ ಎಲ್ಲ ಲಾರಿಗಳನ್ನು ಅಲ್ಲಿಯೇ ತಡೆದು, ಉರುಳಿ ಬಿದ್ದ ಕಂಟೈನರ್‌ನ ರಕ್ಷಣೆಗೆ ನಿಂತರು. ಉರುಳಿ ಬಿದ್ದ ಕಂಟೈನರ್ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾ ಗಿದ್ದು, ಬಿಡದಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಬಿಡದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಸಿಬ್ಬಂದಿಗೆ ಸಹಕಾರ ನೀಡಿದ್ದಾರೆ. ಕಂಟೈನರ್‌ಗಳ ಜೊತೆಗೆ ಪ್ರಯಾಣಿಸುತ್ತಿದ್ದ ನೋಟು ಮುದ್ರಣ ಘಟಕದ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಅಧಿಕಾರಿಗಳ ಸ್ಥಳ ಭೇಟಿ, ಪರಿಶೀಲನೆ ನಂತರ ಸಂಜೆ ವೇಳೆಗೆ ಉಳಿದ 17 ಕಂಟೈನರ್‌ಗಳು ತಮ್ಮ ಪ್ರಯಾಣ ಮುಂದುವರೆಸಿವೆ.
ಉರುಳಿ ಬಿದ್ದಿರುವ ಲಾರಿಯನ್ನು ಕ್ರೇನ್ ಮೂಲಕ ಎತ್ತಿ ನಿಲ್ಲಿಸಿ ವಾಪಸ್ ಮೈಸೂರಿಗೆ ತೆಗೆದುಕೊಂಡು ಹೋಗುವುದಾಗಿ, ಲಾರಿಯಲ್ಲಿರುವ ನೋಟುಗಳಿಗೆ ಹಾನಿ ಆಗಿಲ್ಲ ಎಂದು ಖಾತರಿ ಪಡಿಸಿಕೊಂಡ ನಂತರ ಪುನಃ ನೋಟುಗಳನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಲಾಗುವುದು ಎಂದು ಪೊಲೀಸರು ತಿಳಿ ಸಿದ್ದಾರೆ.
ಪೊಲೀಸ್ ಬಂದೂಬಸ್ತ್: ಲಾರಿಯನ್ನು ಎತ್ತಿ ನಿಲ್ಲಿಸುವ ಸಾಮರ್ಥ್ಯದ ಕ್ರೇನ್‌ಗಾಗಿ ಪೊಲೀಸರು ಕಾಯುತ್ತಿ ದ್ದಾರೆ. ಕತ್ತಲಾದ ಪರಿಣಾಮ ಬಹುಶಃ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರೆಯಬಹುದು ಎನ್ನ ಲಾಗಿದೆ. ಅಲ್ಲಿಯವರೆಗೆ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೂಬಸ್ತ್ ಮುಂದುವರೆಯಲಿದೆ.