Advertisement

ಮಕ್ಕಳಲ್ಲಿ ಕಂಡುಬರುತ್ತಿದೆ ಸಾಂಕ್ರಾಮಿಕ ಸೋಂಕು

01:22 AM Jan 08, 2022 | Team Udayavani |

ಉಡುಪಿ: ಒಮಿಕ್ರಾನ್‌ ಹಾಗೂ ಕೋವಿಡ್‌ ಆತಂಕದ ನಡುವೆ ಮಕ್ಕಳಲ್ಲಿ ಈಗ ಸಾಂಕ್ರಾಮಿಕ ರೋಗಗಳು ಕಂಡುಬರುತ್ತಿವೆ. ಕೋವಿಡ್‌ ಲಕ್ಷಣಗಳನ್ನೇ ಹೋಲುವ ರೋಗಲಕ್ಷಣಗಳು ಕಂಡುಬರುತ್ತಿದ್ದು, ಕೋವಿಡ್‌ ಪರೀಕ್ಷೆ ನಡೆಸಿದಾಗ ಕೆಲವು ಪ್ರಕರಣಗಳು ನೆಗೆಟಿವ್‌ ಕಂಡುಬರುತ್ತವೆ.

Advertisement

ಜಿಲ್ಲೆಯಲ್ಲಿ ಶೇ. 65ರಷ್ಟು ಇಂತಹ ಪ್ರಕರಣಗಳು ಮಕ್ಕಳಲ್ಲಿ ಕಂಡುಬರುತ್ತಿವೆ. ಮಕ್ಕಳಿಂದ ಹಿರಿಯ  ರಿಗೆ ಹಾಗೂ ಹಿರಿಯರಿಂದ ಮಕ್ಕಳಿಗೂ ಇದು ಹರಡುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ವೈದ್ಯರಾದ ಡಾ| ಯಶಸ್ವಿನಿ.

ಕೋವಿಡ್‌ ಪರೀಕ್ಷೆ
ಪದೇ ಪದೇ ಜ್ವರ, ಶೀತ, ಕೆಮ್ಮು ಕಂಡುಬರುವ ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಪಾಸಿಟಿವ್‌ ಕಂಡುಬಂದರೂ ಅವರನ್ನು ಹೋಂ ಐಸೋಲೇಶನ್‌ ಮೂಲಕ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ತರಗತಿಗಳಲ್ಲಿ ಎಚ್ಚರಿಕೆ ಅಗತ್ಯ
ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿದ್ದು, ಪ್ರೀ ನರ್ಸರಿಗಳು, ಅಂಗನವಾಡಿ ಕೇಂದ್ರಗಳು, ಸಹಿತ ಇತರ ತರಗತಿಗಳಲ್ಲಿ ಶುಚಿತ್ವಕ್ಕೆ ಗರಿಷ್ಠ ಆದ್ಯತೆ ನೀಡುವ ಕೆಲಸವಾಗಬೇಕಿದೆ. ಮಕ್ಕಳು ಆಟಾಟೋಪಗಳಲ್ಲಿ ತೊಡಗುವ ಸಂದರ್ಭ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳೂ ಇರುತ್ತವೆ. ಅಲ್ಲದೆ ಸಣ್ಣ ಪುಟ್ಟ ರೋಗ ಲಕ್ಷಣಗಳಿದ್ದವರು ತರಗತಿಗಳಿಗೆ ತೆರಳುತ್ತಿರುವುದರಿಂದ ಸೋಂಕು ಉಲ್ಬಣವಾಗುವ ಸಾಧ್ಯತೆಗಳೇ ಅಧಿಕವಾಗಿದೆ. ಈ ಬಗ್ಗೆ ತರಗತಿಗಳಲ್ಲಿಯೂ ಎಚ್ಚರ ವಹಿಸುವ ಅನಿವಾರ್ಯತೆ ಎದುರಾಗಿದೆ.

ನಿರ್ಲಕ್ಷ್ಯ ಬೇಡ
ಮಕ್ಕಳಲ್ಲಿ ಕಂಡು ಬರುವ ರೋಗಲಕ್ಷಣಗಳ ಬಗ್ಗೆ ಪೋಷಕರು ಯಾವುದೇ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಬೇಕಿದೆ. ಕೋವಿಡ್‌ ತಪಾಸಣೆ ಮಾಡಿದರೆ ಮತ್ತಷ್ಟು ಒಳ್ಳೆಯದು. ಸಾಮಾನ್ಯ ಔಷಧ ಉಪಯೋಗವಾಗದಿದ್ದರೆ ನುರಿತ ವೈದ್ಯರಲ್ಲಿ ಭೇಟಿ ನೀಡಿ ಪರೀಕ್ಷಿಸುವುದು ಉತ್ತಮ.

Advertisement

ಇದನ್ನೂ ಓದಿ:ಸರ್ಕಾರಿ ಶಾಲೆಯ 21ವಿದ್ಯಾರ್ಥಿಗಳು, ಓರ್ವ ಶಿಕ್ಷಕರಲ್ಲಿ ಕೋವಿಡ್ ದೃಢ : ಶಾಲೆಗೆ 7 ದಿನ ರಜೆ

ನಿಯಂತ್ರಣಗಳೇನು?
-ಹೆಚ್ಚು ನೀರು ಸೇವನೆ
-ಸೀನು ಹಾಗೂ ಕೆಮ್ಮುವಾಗ ಕರವಸ್ತ್ರ ಬಳಕೆ
-ಶುಚಿತ್ವ ಕಾಪಾಡುವುದು
-ಧವಸ ಧಾನ್ಯಗಳ ಸೇವನೆ
-ಪೌಷ್ಟಿಕಾಂಶಯುಕ್ತ ಆಹಾರ ಸೇವನೆ
-ಕಣ್ಣು,ಮೂಗು, ಬಾಯಿ ಮುಟ್ಟಿಕೊಳ್ಳದಿರುವುದು

ಮಕ್ಕಳಲ್ಲಿ ಕೋವಿಡ್‌ ಅಲ್ಲದಿದ್ದರೆ ಫ‌ೂÉನಂತಹ ವೈರಸ್‌ ಕಂಡುಬರುತ್ತಿದೆ. ಚಳಿಗಾಲದಲ್ಲಿ ಇದು ಹೆಚ್ಚಾಗುತ್ತದೆ. ಎಲ್ಲ ಮಕ್ಕಳಿಗೂ ಕೋವಿಡ್‌ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗುತ್ತಿದೆ.
– ಡಾ| ವೇಣುಗೋಪಾಲ್‌,
ಮಕ್ಕಳ ತಜ್ಞರು, ಜಿಲ್ಲಾಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next