Advertisement

ಮೊದಲ ದಿನದ ಮುಷರಕ್ಕೆ ಗ್ರಾಹಕ ಸುಸ್ತು

01:08 PM May 31, 2018 | Team Udayavani |

ಚಿಕ್ಕಬಳ್ಳಾಪುರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ದೇಶದ್ಯಾಂತ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ನಡೆಸುತ್ತಿರುವ ಎರಡು ದಿನಗಳ ಮುಷ್ಕರದ ಬಿಸಿ ಜಿಲ್ಲೆಯಲ್ಲಿ ಮೊದಲ ದಿನವೇ
ಗ್ರಾಹಕರಿಗೆ ತಟ್ಟಿದೆ.

Advertisement

 ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘ ಕೈಗೊಂಡಿರುವ ಎರಡು ದಿನಗಳ ಮುಷ್ಕರ ಬೆಂಬಲಿಸಿ ಜಿಲ್ಲೆಯಲ್ಲಿನ ರಾಷ್ಟ್ರೀಕೃತ ಎಲ್ಲಾ ಬ್ಯಾಂಕುಗಳು ಬುಧವಾರ ಕಾರ್ಯ ನಿರ್ವಹಿಸದೇ ಬಾಗಿಲು ಬಂದ್‌ ಮಾಡಿದ್ದ ರಿಂದ ಗ್ರಾಹಕರಿಗೆ ಅಗತ್ಯವಾದ ಬ್ಯಾಂಕ್‌ ಸೇವೆಗಳು ಲಭ್ಯವಾಗದೇ ವಾಣಿಜ್ಯ ವಹಿವಾಟುಗಳಿಗೆ ಹಣ ಹೊಂದಿಸಿಕೊಳ್ಳಲು ಜಿಲ್ಲೆಯ ಜನತೆ ಪರದಾಡುವಂತಾಯಿತು.

ವ್ಯಾಪಾರಕ್ಕೆ ಹೊಡೆತ: ಬ್ಯಾಂಕ್‌ ಮುಷ್ಕರದ ಬಿಸಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ಚಿಂತಾ ಮಣಿ, ಗೌರಿಬಿದನೂರು ತಾಲೂಕುಗಳಲ್ಲಿ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ಮೂರು ತಾಲೂಕುಗಳಲ್ಲಿ ಪ್ರತಿ ನಿತ್ಯ ಕೋಟ್ಯಾಂತರ ರೂ, ವಾಣಿಜ್ಯ ವಹಿವಾಟುಗಳು ನಡೆಯುವುದರಿಂದ ಸಹಜವಾಗಿಯೆ ಬ್ಯಾಂಕ್‌ ಮುಷ್ಕರ ವ್ಯಾಪಾರಸ್ಥರಿಗೆ, ರೈತರಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಇನ್ನೂ ಮುಷ್ಕರ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ತಡೆ ಯೊಡ್ಡಿದೆ.

ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ರೇಷ್ಮೆಗೂಡು ಖರೀದಿಸುವ ರೀಲರ್‌ಗಳು ರೇಷ್ಮೆ ಬೆಳೆಗಾರರಿಗೆ ಗೂಡು ಖರೀದಿಸಿ ಹಣ ಕೂಡಲು ಬ್ಯಾಂಕ್‌ ಮುಷ್ಕರದ ನೆಪವೊಡ್ಡುತ್ತಿದ್ದಾರೆ. ಇದರಿಂದ ರೇಷ್ಮೆ ಬೆಳೆಗಾರರು ಕೂಡ ಕೈನಲ್ಲಿ ಕಾಸು ನೋಡಿ ದಂತಾಗಿದೆ. ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ಗಳು ಚುರುಕು ಗೊಂಡಿದ್ದು ಅದಕ್ಕಾಗಿ ಬ್ಯಾಂಕಿನಲ್ಲಿ ತಮ್ಮ ಹಣವನ್ನೇ ಬಳಸಿ ರೈತರು ಬಿತ್ತನೆಬೀಜ, ರಸಗೊಬ್ಬರ ಖರೀದಿಗೆ ಕಾಸಿಲ್ಲದ ಪರಿಸ್ಥಿತಿ ಒದಗಿದೆ. ಶಾಲೆಗಳಿಗೆ ಡೊನೇಷನ್‌, ಶುಲ್ಕ ಪಾವತಿಗೂ ಸಾಮಾನ್ಯವರ್ಗಕ್ಕೆ ತೊಡಕಾಗಿದೆ.

ವಾಪಸ್ಸು ಹೋದರು!: ಜಿಲ್ಲೆಯ ಗ್ರಾಮೀಣ ಜನತೆ ಬ್ಯಾಂಕ್‌ ಮುಷ್ಕರದ ಅರಿವು ಇಲ್ಲದೇ ಬುಧವಾರ ಬ್ಯಾಂಕ್‌ಗಳ ಕಡೆ ಆಗಮಿಸಿ ಬಳಿಕ ಬಾಗಿಲು ಮುಚ್ಚಿದ್ದನ್ನು ನೋಡಿಕೊಂಡು ವಾಪಸ್ಸು ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯ ವಾಗಿತ್ತು. ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಸಹ ತಮ್ಮ ಸಂಘಗಳ ಉಳಿತಾಯದ ಹಣ ಪಾವತಿಸಲು ಆಗಮಿಸಿ ಮುಷ್ಕರ
ನಡೆಯುತ್ತಿರುವುದನ್ನು ತಿಳಿದು ವಾಪಸ್‌ ತೆರಳಿದರು. ಸದಾ ಗ್ರಾಹಕರ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಬ್ಯಾಂಕ್‌ಗಳು ಮುಷ್ಕರದಿಂದ ಅಕ್ಷರಃ ಬಿಕೋ ಎನ್ನುವಂತಿತ್ತು. ಕೆಲವು ಬ್ಯಾಂಕ್‌ಗಳ ಮುಂದೆ ಮುಷ್ಕರದ ಸೂಚನಾ ಫ‌ಲಕಗಳಿದ್ದರೆ
ಕೆಲವು ಬ್ಯಾಂಕ್‌ಗಳ ಮುಂದೆ ಸೂಚನಾ ಫ‌ಲಕಗಳು ಇರದೇ ಗ್ರಾಹಕರು, ಸಾರ್ವಜನಿಕರು ಗೊಂದಲಕ್ಕೀಡಾದರು.

Advertisement

ಬಾಗಿಲು ಮುಚ್ಚಿ ಕಾರ್ಯ: ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘ ಕೆರೆ ನೀಡಿದ್ದ ಎರಡು ದಿನಗಳ ಬ್ಯಾಂಕ್‌ ಮುಷ್ಕರಕ್ಕೆ ಜಿಲ್ಲಾದ್ಯಂತ ಉತ್ತಮ ಬೆಂಬಲ ವ್ಯಕ್ತವಾದರೂ ಕೆಲವು ಬ್ಯಾಂಕ್‌ಗಳ ಅಧಿಕಾರಿ, ಸಿಬ್ಬಂದಿ ಮಾತ್ರ ಬ್ಯಾಂಕ್‌ಗಳನ್ನು ಮುಚ್ಚಿ ಕೊಂಡು ಒಳಗೆ ಕೆಲಸ ಮಾಡಿದ ದೃಶ್ಯಗಳು ಜಿಲ್ಲಾ ಕೇಂದ್ರದಲ್ಲಿ ಕಂಡು ಬಂತು. ನಗರದ ಬಿಬಿ ರಸ್ತೆ ಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಮುಷ್ಕರದ ನಡುವೆಯು ಅಧಿಕಾರಿಗಳು ಬಾಗಿಲು ಬಂದ್‌ ಮಾಡಿ ಒಳಗೆ ಕೆಲಸ ನಿರ್ವಹಿಸಿದರು. 

ಮುಷ್ಕರ ಇಂದೂ ಮುಂದುವರಿಕೆ ಎರಡು ದಿನಗಳ ಬ್ಯಾಂಕ್‌ ಮುಷ್ಕರ ಜಿಲ್ಲೆಯಲ್ಲಿ ಗುರುವಾರವು ಸಹ ಮುಂದುವರೆಯಲಿರುವುದರಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಬರೋ ಬ್ಬರಿ 23 ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದು 167 ಕ್ಕೂ ಹೆಚ್ಚು ಉಪ ಶಾಖೆಗಳು ಇವೆ. ನಿತ್ಯ ಸಹಸ್ರಾರು ಗ್ರಾಹಕರು ಬ್ಯಾಂಕ್‌ಗಳ ಸೇವೆಯನ್ನು ಅಲಂಬಿಸಿದ್ದಾರೆ. ಇದರಿಂದ ಬ್ಯಾಂಕ್‌ ಮುಷ್ಕರ ಸಹಜವಾಗಿಯೆ ಜಿಲ್ಲೆಯ ಜನತೆ ಪರದಾಡುವಂತಾಗಿದೆ. ಜಿಲ್ಲೆಯ ಹಲವು ಎಟಿಎಂ ಕೇಂದ್ರಗಳಲ್ಲಿ ಬುಧವಾರವೇ ಹಣ ಖಾಲಿಯಾದ ಕಾರಣ ಗ್ರಾಹಕರಿಗೆ ತೊಡಕಾಗಿದೆ.

ಬ್ಯಾಂಕ್‌ಗಳಮುಷ್ಕರದ ಹೈಲೆಟ್ಸ್‌…„ ಬ್ಯಾಂಕ್‌ ಮುಷ್ಕರಕ್ಕೆ ಹೈರಾಣದ ಗ್ರಾಹಕರು „ ಎಟಿಎಂ ಕೇಂದ್ರಗಳಲ್ಲಿ ಹಣಕ್ಕೆ ಬರ ವೇತನ ಪರಿಷ್ಕರಣೆಗೆ ನೌಕರರ ಪಟ್ಟು „ ಇಂದು ಸಹ ಮುಷ್ಕರ ಮುಂದುವರೆರಿಕೆ „ ಇಂದು ಸಹ ಮುಷ್ಕರ ಮುಂದುವರಿಕೆ.

Advertisement

Udayavani is now on Telegram. Click here to join our channel and stay updated with the latest news.

Next