ಮಂಡ್ಯ: ಅಯೋಧ್ಯೆಯಲ್ಲಿ ಶ್ರೀರಾಮಂದಿರಮಂದಿರ ನಿರ್ಮಾಣ ಮಾಡಿದರೆ ರಕ್ತಪಾತ ಆಗುತ್ತದೆ ಎಂದು ವಿರೋಧಿಗಳು ದೇಶಾದ್ಯಂತ ಅಪಪ್ರಚಾರ ಮಾಡುತ್ತಿದ್ದರು. ಒಂದು ತೊಟ್ಟು ರಕ್ತ ಕೆಳಗೆಬೀಳದಂತೆ ರಾಮಮಂದಿರ ನಿರ್ಮಾಣ ಕಾರ್ಯಭರದಿಂದ ಸಾಗುತ್ತಿದೆ.
ಇದು ಬಿಜೆಪಿ ಸರ್ಕಾರದಸಾಧನೆಯಾಗಿದೆ ಎಂದು ಹಿಂದುಳಿದ ವರ್ಗಗಳಕಲ್ಯಾಣ ಮತ್ತು ಹಿಂದೂ ಧಾರ್ಮಿಕ, ಧರ್ಮದಾಯ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದರೆ ರಕ್ತಪಾತವಾಗುತ್ತದೆ ಎಂ ಎಚ್ಚರಿಕೆ ನೀಡಿದ್ದರು. ಅಯೋಧ್ಯೆವಿವಾದ ಬಹಳ ವರ್ಷದಿಂದ ನಡೆಯುತ್ತಲೇ ಇತ್ತು.ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿರುವುದನ್ನುನಾವೆಲ್ಲರೂ ನೋಡಿದ್ದೇವೆ ಎಂದರು.
ಕಾಶ್ಮೀರದಲ್ಲಿ 370ನೇ ಕಾಯಿದೆಯನ್ನು ರದ್ದುಪಡಿಸಿ ಕಾಶ್ಮೀರವೂ ಭಾರತದ ಒಂದು ಭಾಗ ಎಂಬುದಾಗಿ ಪ್ರಧಾನಿ ನರೇಂದ್ರಮೋದಿಯವರು ತೋರಿಸಿಕೊಟ್ಟಿದ್ದಾರೆ. ಕಾಶ್ಮೀರದಲ್ಲಿ 370 ರದ್ದುಪಡಿಸುವ ಮಾತುಗಳು ಬಂದಾಗ ಭಯೋತ್ಪಾದಕರು,ಭಾರತೀಯರೇ ಬನ್ನಿ, ನಿಮ್ಮ ತಾಯಿಯ ಎದೆಹಾಲನ್ನು ಕುಡಿದಿದ್ದರೆ ಕಾಶ್ಮೀರದ ಲಾಲ್‌ಚೌಕಕ್ಕೆಬಂದು ತ್ರಿವರ್ಣ ಧ್ವಜ ಹಾರಿಸಿ ವಾಪಸ್ಸು ಹೋಗಿಎಂದು ಸವಾಲು ಹಾಕಿದ್ದರು.
ಅಂದೇ ಬಿಜೆಪಿಹಿರಿಯ ನಾಯಕ ಮುರಳಿ ಮನೋಹರ ಜೋಷಿಹಾಗೂ ನರೇಂದ್ರ ಮೋದಿ ಅವರು ಲಾಲ್‌ಚೌಕಕ್ಕೆತೆರಳಿ ತ್ರಿವರ್ಣ ಧ್ವಜ ಹಾರಿಸಿದ್ದರು ಎಂದು ಹೇಳಿದರು. ಪ್ರಸ್ತುತ ಭಾರತದ ಎಲ್ಲ ಭಾಗಗಳಲ್ಲಿರುವಂತೆಕಾಶ್ಮೀರದ ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣಧ್ವಜ ಹಾರಾಡುತ್ತಿದೆ.
ಇದು ಬಿಜೆಪಿ ಸರ್ಕಾರದಿಂದಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು.ಕಟ್ಟಿ ಬೆಳೆಸಿದ್ದಾರೆ: ಮಾಜಿ ಪ್ರಧಾನಿ ವಾಜಪೇಯಿ,ಮುಖಂಡರಾದ ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆಅನೇಕ ಮಹನೀಯರು ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದರು.
ಅದರ ಭಾಗವಾಗಿ ಕೇಂದ್ರಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರನಡೆಸುತ್ತಿದೆ. ಪ್ರಧಾನಿ ನರೇಂದ್ರಮೋದಿಯವರುವಿಶ್ವಮನ್ನಣೆ ಪಡೆದ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ಬಣ್ಣಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್,ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಪ್ರಧಾನ ಕಾರ್ಯದರ್ಶಿ ಪ.ನಾ.ಸುರೇಶ್,ಮುಖಂಡರಾದ ಎಚ್.ಆರ್.ಅಶೋಕ್‌ಕುಮಾರ್,ಯುವ ಮೋರ್ಚಾ ಕಾರ್ಯಕರ್ತರಾದ ರಾಜೇಶ್,ಹರ್ಷ ಇತರರು ಹಾಜರಿದ್ದರು.