ಮಾಗಡಿ: ಬೆಂಗಳೂರು ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಬೃಹತ್ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲನೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ತಾಲೂಕಿನ ಕೆಂಪಾಪುರದ ಹಿರಿಯ ಕೆಂಪೇಗೌಡರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
23 ಎಕರೆ ಪ್ರದೇಶದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ಜೂನ್ 27ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ ಜಯಂತಿ ದಿನದಂದೇ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅತ್ಯಾಕರ್ಷಕ, ಅದ್ಭುತ ನಾಡಪ್ರಭು ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ಮಾಗಡಿಯ ಕೆಂಪಾಪುರ ಬಂಗಾರದ ನಾಡಾಗಲಿದೆ.
ಈಗಾಗಲೇ ಐಡೆಕ್ಸ್ ಸಂಸ್ಥೆ ನೀಲಿ ನಕ್ಷೆ ತಯಾರಿಸಿದೆ. ಸುಮಾರು 8 ಎಕರೆ ಪ್ರದೇಶದಲ್ಲಿ ಇಲ್ಲಿ ಹಿರಿಯ ಕೆಂಪೇಗೌಡರ ಸಮಾಧಿಯನ್ನು ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. 12 ಕೋಟಿ ರೂ. ವೆಚ್ಚದಲ್ಲಿ ಕೆಂಪಾಪುರದ ಕೆರೆ ಜೀರ್ಣೋದ್ಧಾರ ಸೇರಿದಂತೆ ಕೋಟೆ, ದುರ್ಗಾ, ಗುಡಿ ಗೋಪುರ ಅಭಿವೃದ್ಧಿ ಪಡಿಸಿ ಅಂತರಾಷ್ಟ್ರೀಯ ಸ್ಮಾರಕ ಮಾಡಲಾಗುವುದು ಎಂದರು.
ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈ ಜೋಡಿಸಿ: ತಾಲೂಕಿನಲ್ಲಿ ಹಿರಿಯ ಕೆಂಪೇ ಗೌಡರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೆಂಪೇಗೌಡರ ಸಮಾಧಿ ಅಭಿ ವೃದ್ಧಿಪಡಿಸಲು ಭೂ ಸ್ವಾಧೀನಪಡಿಸಿಕೊಳುವುದು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರವನ್ನು ಗ್ರಾಮಸ್ಥರು ನೀಡ ಬೇಕು. ಶುದಟಛಿ ಕುಡಿಯುವ ನೀರಿನ ಘಟಕ, ಗುಣಮಟ್ಟದ ರಸ್ತೆ, ಸರ್ಕ್ನೂಟ್ ನೆಟ್‌ವರ್ಕ್ ಅಳವಡಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎ.ಮಂಜುನಾಥ್ ಮಾತನಾಡಿ, ತಾಲೂಕಿನ ಕೆಂಪಾಪುರದಲ್ಲಿರುವ ಜಾನಿಗೆರೆ ಗ್ರಾಮಕ್ಕೆ ಸೇರಿರುವ ಸರ್ವೇ ನಂ. 91ರ 29 ಎಕರೆ ಪ್ರದೇಶದ ಕೆರೆಯನ್ನು ನರೇಗಾದಲ್ಲಿ ಹೂಳೆತ್ತಲು ಕಾಮಗಾರಿ ಕೈಗೊಳ್ಳಲಾಗಿದೆ. ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಹೂಳೆ ತ್ತುವ ಕಾರ್ಯಕ್ಕೆ ಡಿಸಿಎಂ ಚಾಲನೆ ನೀಡಿ ದ್ದಾರೆ. ಸರ್ಕಾರ ಕೈಗೊಳ್ಳುವ ಎಲ್ಲ ಕೆಲಸಗಳಿಗೆ ಸಮರ್ಪಕವಾಗಿ ಸ್ಪಂದಿಸುವು ದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಆ.ದೇವೇಗೌಡ ಮಾತನಾಡಿದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್.ಎಂ.ಕೃಷ್ಣ ಮೂರ್ತಿ, ಜೆಡಿಎಸ್ ಉಪಾಧ್ಯಕ್ಷ ಕೆ.ಕೃಷ್ಣ ಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ತಾಲೂಕು ಜೆಡಿಎಸ್ ಮಹಿಳಾಧ್ಯಕ್ಷೆ ಶೈಲಜಾ, ಸರ್ಕಾರದ ಕಾರ್ಯ ದರ್ಶಿ ಪ್ರದೀಪ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಸಿಇಓ ಇಕ್ರಾಂ,
ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್, ತಾಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ, ತಾಪಂ ಸದಸ್ಯ ಕೆ.ಎಚ್.ಶಿವರಾಜು, ತಾಪಂ ಇಓ ಟಿ. ಪ್ರದೀಪ್, ಮುಖಂಡ ಸಿಂಗ್ರೀಗೌಡ, ಚಿಕ್ಕ ಮುದಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೀಳಾ ರಾಜಣ್ಣ, ಸದಸ್ಯ ರವೀಶ್,ಪಿಡಿಓ ನರಸಿಂಹಯ್ಯ,ಪಾಪಣ್ಣ, ಹನುಮಂತಪ್ಪ, ಹರೀಶ್ ಕುಮಾರ್ ಇತರರು ಇದ್ದರು.