Advertisement
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಸಿದ್ಧಪಡಿಸಿದ ನಗರ ಸಮಗ್ರ ಸಂಚಾರ ಯೋಜನೆ (ಸಿಎಂಪಿ)ಯ ಕರಡಿನಲ್ಲಿ ಮಾಡಿದ ಶಿಫಾರಸುಗಳು ಇವು. ಇದರ ಒಟ್ಟು ಗುರಿ ಸಮೂಹ ಸಾರಿಗೆ (ಮೆಟ್ರೋ, ಬಸ್, ಆಟೋ, ಕ್ಷಿಪ್ರ ಸಾರಿಗೆ ಇತ್ಯಾದಿ) ಬಳಕೆದಾರರ ಪ್ರಮಾಣವನ್ನು ಶೇ. 70ಕ್ಕೆ ಹೆಚ್ಚಿಸುವುದಾ ಗಿದ್ದು, ಶೇ. 60 ಜನ ಟಿಒಡಿ ವಲಯದಲ್ಲಿ ಬರುವಂತೆ ಮಾಡುವುದಾಗಿದೆ.
Related Articles
Advertisement
ಇದರ ಜತೆಗೆ ಸ್ವಯಂಚಾಲಿತ ಪ್ರಯಾಣ ದರ ಸಂಗ್ರಹ ವ್ಯವಸ್ಥೆ, ಐಟಿ ಕಂಪನಿಗಳಿಗೆ ಚಾರ್ಟರ್ ಸೇವೆ (ಗುತ್ತಿಗೆ ಸೇವೆ)ಗಳನ್ನು ಹೆಚ್ಚಿಸಬೇಕು, ನಿರ್ವಾಹಕ ರಹಿತ ಬಸ್‌ಗಳು, ಲೀಸ್‌ನಲ್ಲಿ ಬಸ್‌ಗಳನ್ನು ಪಡೆಯುವುದು ಇಂತಹ ಹಲವು ಪೂರಕ ಕ್ರಮಗಳ ಮೂಲಕ ಬಿಎಂಟಿಸಿಯು ತನ್ನ ಆರ್ಥಿಕ ಸಂಕಷ್ಟದಿಂದ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಮೆಟ್ರೋದಲ್ಲೂ ಸುಧಾರಣೆ ಅಗತ್ಯ: “ನಮ್ಮ ಮೆಟ್ರೋ’ ಸೇವೆ ಇನ್ನಷ್ಟು ಉತ್ತಮಗೊಳ್ಳುವ ಅವಶ್ಯಕತೆ ಇದೆ. ಪ್ರಯಾಣಿಕರನ್ನು ಸೆಳೆಯಲು ಮಾಸಿಕ ಚಂದಾದಾರ, ಗುಂಪು ಟಿಕೆಟ್‌ಗಳ ಖರೀದಿಗೆ ರಿಯಾಯ್ತಿ ಸೇರಿದಂತೆ ಹಲವು ಕೊಡುಗೆಗಳನ್ನು ಪರಿಚಯಿಸಬೇಕು. ಮೆಟ್ರೋ ನಿಲ್ದಾಣದ ನಿರ್ಗಮನ ದ್ವಾರಗಳಿಂದ ಬಸ್ ನಿಲ್ದಾಣಗಳು ಪಾರ್ಕಿಂಗ್ ಜಾಗಕ್ಕಿಂತ ಸಮೀಪದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಮೆಟ್ರೋ ಮತ್ತು ಬಸ್ ನಿಲ್ದಾಣಗಳ ನಡುವೆ ಟ್ರಾನ್ಸಿಟ್ ಹಬ್‌ಗಳನ್ನು ನಿರ್ಮಿಸಬೇಕು. ಸಂಚಾರ ಆಧಾರಿತ ಅಭಿವೃದ್ಧಿ ನೀತಿ ಪರಿಚಯಿಸುವ ಮೂಲಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸಂಪನ್ಮೂಲ ಕ್ರೋಡೀಕರಿಸಬೇಕು. ಈ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಬೇಕು. ಸರ್ಕಾರದ ಇತರೆ ಸ್ಥಳೀಯ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಹೊಂದುವ ಅವಶ್ಯಕತೆ ಇದೆ ಎಂದೂ ಕರಡಿನಲ್ಲಿ ಹೇಳಲಾಗಿದೆ.
30 ದಿನಗಳ ಆಕ್ಷೇಪಣೆ ಅವಕಾಶ: ಡಿ.6ರಂದು ಬಿಎಂಆರ್‌ಸಿಎಲ್ ವೆಬ್‌ಸೈಟ್: https://www.bmrc.co.in/ ನಲ್ಲಿ ಈ ಕರಡನ್ನು ಪ್ರಕಟಿಸಲಾಗಿದ್ದು, ಪ್ರಕಟಗೊಂಡ ದಿನದಿಂದ 30 ದಿನಗಳಲ್ಲಿ ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸಲ್ಲಿಸಬಹುದು.
ಸಮೂಹ ಸಾರಿಗೆ ಪ್ರಕಾರ ಮತ್ತು ಮಾರ್ಗದ ವಿವರ ಹೀಗಿದೆ (2031ಕ್ಕೆ)ಸಮೂಹ ಸಾರಿಗೆ ಪ್ರಕಾರ ಮಾರ್ಗದ ಉದ್ದ (ಕಿ.ಮೀ.ಗಳಲ್ಲಿ)
ಮೆಟ್ರೋ 317
ಉಪನಗರ ರೈಲು 177
ಬಸ್ ಆದ್ಯತಾ ಪಥ 202
ಬಿಆರ್‌ಟಿಎಸ್ 107
ಒಟ್ಟಾರೆ 803 ಸಮೂಹ ಸಾರಿಗೆ ವ್ಯವಸ್ಥೆಗೆ ಇರುವ ಸಾಮರ್ಥ್ಯ
ಸಾರಿಗೆ ಪ್ರಕಾರ ಪ್ರಯಾಣಿಕರ ಸಾಮರ್ಥ್ಯ (ಪ್ರತಿ ಗಂಟೆ ಪ್ರತಿ ದಿಕ್ಕು)
ಬಿಆರ್‌ಟಿಎಸ್ 8,000
ಮೆಟ್ರೋಲೈಟ್ 15,000
ಮೋನೊ ರೈಲು 15,000
ಮೆಟ್ರೋ 40,000
ಭಾರಿ ಮೆಟ್ರೋ 60,000