Advertisement

ರಾಜ್ಯದಲ್ಲಿ ಹೈ ಬ್ರಿಡ್ ಪವರ್ ಪಾರ್ಕ್ ನಿರ್ಮಾಣ : ಸುನೀಲ್ ಕುಮಾರ್

01:05 PM Mar 07, 2022 | Team Udayavani |

ವಿಧಾನಪರಿಷತ್ : ರಾಜ್ಯದಲ್ಲಿ5000 ಮೆಗಾ ವ್ಯಾಟ್ ಸಾಮರ್ಥ್ಯದ ಹೈಬ್ರಿಡ್ ಪವರ್ ಪಾರ್ಕ್ ಸ್ಥಾಪನೆಯ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

Advertisement

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೊಪ್ಪಳ, ಧಾರವಾಡ, ಗದಗ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಹೈಬ್ರಿಡ್ ಪಾರ್ಕ್ ಸ್ಥಾಪನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ರಾಜ್ಯದ ವಿದ್ಯುತ್ ಕಂಪನಿಗಳು ಅಥವಾ ಹೊರ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ೨೦೨೦ರ ನವೆಂಬರ್ ತಿಂಗಳಲ್ಲಿ ವಿಂಡ್ ಪಾರ್ಕ್ ಮತ್ತು ವಿಂಡ್ ಸೋಲಾರ್ ಹೈಬ್ರಿಡ್‌ ಪಾರ್ಕ್ ಪರಿಕಲ್ಪನೆ ಟಿಪ್ಪಣಿಯನ್ನು ಜಾರಿಗೊಳಿಸಿದೆ. ಆದರೆ ಅಂತಿಮ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಬೇಕಿದೆ. ಹೈಬ್ರೀಡ್ ಯೋಜನೆಗಳನ್ನು ಸೌರ, ಗಾಳಿ ಮತ್ತು ಶೇಖರಣಾ ತಂತ್ರಜ್ಞಾನಗಳನ್ನು ಮಿಶ್ರಣ ಮಾಡುವುದರಿಂದ ಉತ್ತಮ ವಿದ್ಯುತ್ ಪೂರೈಕೆಯನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಬಹುದಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ವಿದ್ಯುತ್ : ಸ್ವಚ್ಚ ಮತ್ತು ಹಸಿರು ಯೋಜನೆಗಳಿಂದ ರಾಜ್ಯ ಸರಕಾರ ಹೆಚ್ಚುವರಿ ವಿದ್ಯುತ್ ಪಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಿರುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next