Advertisement

ಹೆಡಗಾಪುರದಲ್ಲಿ ಗೋಶಾಲೆ ನಿರ್ಮಾಣ

02:33 PM Mar 27, 2022 | Team Udayavani |

ಔರಾದ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ಕನಸಿನ ಮತ್ತೊಂದು ಯೋಜನೆಯಾದ “ಜಿಲ್ಲೆಗೊಂದು ಗೋಶಾಲೆ’ ಯೋಜನೆಯಡಿ ಗೋಶಾಲೆ ನಿರ್ಮಾಣದ ಭೂಮಿಪೂಜೆ ಸಮಾರಂಭ ಶನಿವಾರ ತಾಲೂಕಿನ ಹೆಡಗಾಪೂರ ಗ್ರಾಮದ ಬಳಿ ನಡೆಯಿತು.

Advertisement

ಜಿಪಂ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಪ್ರಾಣಿ ದಯಾ ಸಂಘದ ಆಶ್ರಯದಲ್ಲಿ ಗ್ರಾಮದ ಸರ್ಕಾರದ 33 ಎಕರೆಯ ಗೋಮಾಳ ಜಮೀನಿನ ವಿಶಾಲ ಜಾಗೆಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೋಶಾಲೆ ನಿರ್ಮಾಣಕ್ಕೆ ಸಚಿವರು ವಿದ್ಯುಕ್ತ ಚಾಲನೆ ನೀಡಿದರು.

ಇದಕ್ಕೂ ಮೊದಲು ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ನಡೆಸಲಾಯಿತು. ಈ ವೇಳೆ ಮಾತನಾಡಿದ ಸಚಿವರು, ತಾವು ಪಶು ಸಂಗೋಪನೆ ಸಚಿವರಾದ ಕೂಡಲೇ ದೇಶದ ಗಮನ ಸೆಳೆದ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿ ಮಾಡಿ ಗೋ ಸಂರಕ್ಷಣೆಗೆ ಒತ್ತು ಕೊಡಲಾಗಿದೆ. ಅಂತಹ ಗೋವುಗಳ ಪಾಲನೆ ಪೋಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಕನಸಿನ ಮತ್ತೂಂದು ಯೋಜನೆಯಾದ ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೋಶಾಲೆಗಳು ನಿರ್ಮಾಣವಾಗಲಿವೆ. ರಾಜ್ಯಾದ್ಯಂತ ಗೋಶಾಲೆ ಗಳ ನಿರ್ಮಾಣಕ್ಕೆ ಚಾಲನೆ ಕೊಡುವ ಈ ಕಾರ್ಯಕ್ರಮವು ಸಹ ಬೀದರ ಜಿಲ್ಲೆಯಿಂದ ಆರಂಭವಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.

10 ಎಕರೆಯಲ್ಲಿ ಗೋಶಾಲೆ

ಔರಾದ ತಾಲೂಕಿನಲ್ಲಿ 10 ಎಕರೆ ವಿಶಾಲ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ ಎಂದು ತಿಳಿಸಿದ ಸಚಿವರು, 36 ಕೋಟಿ ರೂ. ವೆಚ್ಚದಲ್ಲಿ ಕೂಡ ಜಾನುವಾರು ಸಂವರ್ಧನಾ ಕೇಂದ್ರ ಮತ್ತು 2 ಕೋಟಿ ರೂ ವೆಚ್ಚದಲ್ಲಿ ತಾಲೂಕು ಹೈಟೆಕ್‌ ಪಶು ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

Advertisement

ಪಶು ಸಂಗೋಪನೆ ಸಚಿವರಾದ ಬಳಿಕ ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರಾಜ್ಯದ ವಿವಿಧೆಡೆಯಲ್ಲಿನ ಪಶುಪಾಲನಾ ವ್ಯವಸ್ಥೆಯನ್ನು ನೋಡಿದ್ದೇನೆ. ಮುಖ್ಯವಾಗಿ ಯೋಜನೆಗಳ ಅನುಷ್ಠಾನದಲ್ಲಿ ಸಕ್ರಿಯ ಭಾಗಿಯಾಗುವ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಂಬಡ್ತಿ ನೀಡಿ ಪ್ರೋತ್ಸಾಹಿಸಲಾಗಿದೆ. ಪಶು ಸಂಜೀವಿನಿ ಯೋಜನೆ ಜಾರಿ ಮಾಡಿ ಜನತೆಗೆ ಸಾಕಷ್ಟು ಅನುಕೂಲತೆ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಶಿವಲಿಂಗ ಶಿವಾಚಾರ್ಯರು, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಶಂಭುಲಿಂಗ ಶಿವಾಚಾರ್ಯರು, ಪ್ರಾಣಿ ದಯಾ ಸಂಘದ ಬಂಡೆಪ್ಪ ಕಂಟೆ, ಇಲಾಖೆಯು ಉಪ ನಿರ್ದೇಶಕ ಮಲ್ಲಿಕಾರ್ಜುನ ಹಂಚಿನಾಳ, ಅಧಿಕಾರಿಗಳಾದ ಡಾ| ರವಿ ಭೂರೆ, ಡಾ| ರಾಜಕುಮಾರ ಬಿರಾದಾರ, ತಹಶೀಲ್ದಾರ್‌ ಅರುಣಕುಮಾರ ಪಾಟೀಲ, ಪ್ರಮುಖರಾದ ಪ್ರತಿಕ್‌ ಚವ್ಹಾಣ್‌, ರಾಮಶೆಟ್ಟಿ ಪನ್ನಾಳೆ, ಶಿವಾಜಿ ಭೋಸ್ಲೆ, ಕಿರಣ ಪಾಟೀಲ, ಶ್ರೀಮಂತ ಪಾಟೀಲ, ಶಿವಾಜಿರಾವ್‌ ಕಾಳೆ, ಮಾರುತಿ ಚವ್ಹಾಣ್‌, ದೋಂಡಿಬಾ ನಾಯಕ, ರಾವ್‌ಸಾಬ್‌ ಪಾಟೀಲ ಇದ್ದರು. ಮುಖ್ಯ ಪಶುವೈದ್ಯಾಧಿಕಾರಿ ಡಾ| ಗೌತಮ ಅರಳಿ ಪ್ರಾಸ್ತಾವಿಕ ಮಾತನಾಡಿದರು. ಗುರುನಾಥ ರಾಜಗೀರಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next