Advertisement

ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣ

05:52 PM May 04, 2022 | Team Udayavani |

ಮಾಗಡಿ: ಮಹಾಶಿವಶರಣೆ ಹೊನ್ನಾದೇವಿ ನೂತನ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸಿ, ದೇಗುಲದ ಸುತ್ತಲು 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್‌ ಹಾಕಿಸಲಾಗುವುದು ಎಂದು  ಶಾಸಕ ಎ.ಮಂಜುನಾಥ್‌ ಭರವಸೆ ನೀಡಿದರು.

Advertisement

ತಾಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಮಹಾಶಿವಶರಣೆ ಶ್ರೀಹೊನ್ನಾದೇವಿ ಅಮ್ಮನವರ ನೂತನ ದೇವಾಲಯ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆ, ಹೊನ್ನಾದೇವಿ ಮತ್ತು ಗಂಗಾದೇವಿ ಸ್ಥಿ ರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ, ಮಹಾಶಿವಶರಣೆ ಹೊನ್ನಾದೇವಿ ಶಕ್ತಿ ಅಪಾರ. ಆಕೆಯ ಮಹಾಶಕ್ತಿಯ ಪವಾಡದಿಂದ ಲೋಕ ಕಲ್ಯಾಣವಾಗುತ್ತಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಆವರಣ ಹೈಮಾಸ್ಕ್ ದೀಪ ಅಳವಡಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆ ವೇಳೆ ತಂಗಲು ವಸತಿಗೃಹ, ಸ್ನಾನದ ಗೃಹ, ಶೌಚಾಲಯ ನಿರ್ಮಿಸಿಕೊಡುವಂತೆ (ಡಾಮೆಂಟರಿ)ಸಮಿತಿಯವರು ಮನವಿ ಮಾಡಿದ್ದು, ಕ್ರಮ ವಹಿಸುವುದಾಗಿ ತಿಳಿಸಿದರು.

ಬಸವಣ್ಣನ ಬದುಕು ನಮಗೆ ಆದರ್ಶ:
ಸಿದ್ಧಗಂಗಾ ಮಠದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕಾಯಕದಿಂದ ಕೈಲಾಸ ಕಾಣಬೇಕು ಎಂದು ವಚನಗಳ ಮೂಲಕ ತಿಳಿಸಿಕೊಟ್ಟಿವರು ಬಸವಣ್ಣ ಅವರ ತತ್ವ ಪ್ರತಿಯೊಬ್ಬರಿಗೂ ಅವಶ್ಯ. ಅವರ ಬದುಕೇ ನಮ್ಮೆಲ್ಲರಿಗೂ ಆದರ್ಶವಾಗಿದೆ. ಸಿದ್ಧಗಂಗೆಯ ಶಿವೈಕ್ಯ ಶ್ರೀಶಿವಕುಮಾರ ಸ್ವಾಮೀಜಿ ಅವರು ಬ್ಯಾಲಕೆರೆ ಗ್ರಾಮದಿಂದ ಗ್ರಾಮಾಂತರ ಬಸವ ಜಯಂತಿ ಪ್ರಾರಂಭಿಸಿದ್ದು ಎಂದು ಹೇಳಲು ಹೆಮ್ಮೆ. ಅಕ್ಷಯ ತೃತೀಯದ ದಿನದಂದೇ ಹುಟ್ಟಿದ ಬಸವಣ್ಣ ಅವರ ಜಯಂತಿ ದಿನ ಮಹಾಶಿವಶರಣೆ ಹೊನ್ನಾದೇವಿ ದೇವಸ್ಥಾನ ಪುನರ್‌ ಪ್ರತಿಷ್ಠಾಪನೆ ಅವಿಸ್ಮರಣೀಯ ಎಂದು ಹೇಳಿದರು.

ದೇಗುಲ ಶಾಂತಿ, ನೆಮ್ಮದಿಯ ಶಕ್ತಿ ಕೇಂದ್ರ:
ಕಂಚಗಲ್‌ ಬಂಡೇಮಠದ ಮಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ದೇಗುಲಗಳು ಶಾಂತಿ, ನೆಮ್ಮದಿಯ ಶಕ್ತಿ ಕೇಂದ್ರ. ಸಂಸ್ಕಾರವಿಲ್ಲದ ಶಿಕ್ಷಣ ಪ್ರಯೋಜನವಿಲ್ಲ. ಶಿಕ್ಷಣ ಪಡೆದು ಸಂಸ್ಕಾರವಂತರಾಗಬೇಕು. ಸಂಸ್ಕಾರ ಮರೆತು ಆಡಂಬರದ ಜೀವನ ನಡೆಸುತ್ತಿದ್ದಾರೆ. ಸಂಸ್ಕಾರದ ಮಹತ್ವ ಮರೆಯಬಾರದು. ವೈಷಮ್ಯ ಮರೆತು ಅವಿಭಕ್ತಿ ಕುಟುಂಬದಲ್ಲಿ ಒಟ್ಟಾಗಿ ಬದುಕಬೇಕು. ಸಮಾಜದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲು ತೊಡಿಗಿಸಿಕೊಳ್ಳಬೇಕು ಎಂದರು.

ಧಾರ್ಮಿಕ ಕೈಂಕರ್ಯ: ಹೊನ್ನಾದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಹೋಮ, ಹವನ ಧಾರ್ಮಿಕ ಪೂಜಾ ಕೈಂಕರ್ಯಗಳು ಪೂರ್ಣಾಹುತಿ ಸಾಂಘವಾಗಿ ಸಂಪನ್ನಗೊಂಡಿತು. ದೇವಿ ಪ್ರತಿಷ್ಠಾಪನೆ, ಅರ್ಚನೆ. ವಿಶೇಷ ಅಲಂಕಾರ, ಪೂಜೆ ಪುರಸ್ಕಾರಗಳು ಶಾಸ್ತ್ರೋತ್ತವಾಗಿ ನೆರವೇರಿತು.

Advertisement

ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಶಿವಗಂಗೆ ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಮೂಲ್‌ ಅಧ್ಯಕ್ಷ ನರಸಿಂಹ ಮೂರ್ತಿ, ವಿಜಯಕುಮಾರ್‌, ಜೆ.ಪಿ.ಚಂದ್ರೇ ಗೌಡ, ಹೊನ್ನಾದೇವಿ ದೇಗುಲ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮರಳುಸಿದ್ದಯ್ಯ, ಎಲ್‌.ಎನ್‌. ಸ್ವಾಮಿ, ಹೊನ್ನಬಸಣ್ಣ, ವಕೀಲರಾದ ರಾಜಯ್ಯ, ರಾಮಚಂದ್ರ, ಎಚ್‌.ಮಂಜುನಾಥ್‌, ಗ್ರಾಪಂ ಸದಸ್ಯ ಚಿಕ್ಕರಾಜು, ರಾಮಸಿಂಗ್‌, ಕಲಾ ಶಿಕ್ಷಕ
ನಟರಾಜ್‌, ಹರೀಶ್‌, ವೆಂಕಟಗಿರಿಯಪ್ಪ , ಮುಖ್ಯಶಿಕ್ಷಕ ರಾಜಶೇಖರ್‌, ಶಾಂತಿಗ್ರಾಮದ ರಾಘವೇಂದ್ರ, ಮೂರ್ತಿ, ಶಿವಣ್ಣ, ಮಹೇಶ್‌, ರವಿಕುಮಾರ್‌, ವೆಂಕಟರಾಮಯ್ಯ, ಚಂದ್ರು, ರಮೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next