Advertisement
ಆಕೆಯ ಹೆಸರು ಬೊಮ್ಮಿ ಪೂಜಾರ್ತಿ ಊರಲ್ಲೆಲ್ಲ ಬೊಮ್ಮಕ್ಕ ಎಂದೇ ಪರಿಚಿತರು. ಕೃಷಿ- ಕೂಲಿ ಕೆಲಸ, ತೆಂಗಿನ ಗೆರಟೆಯನ್ನು ಹದಮಾಡಿ ಸಟ್ಟಿಗ ಮಾಡುವ ಪರೋಕ್ಷ ಕಾಯಕವನ್ನು ಮಾಡಿಕೊಂಡು ಸಿಕ್ಕ ಒಂದಷ್ಟು ಪುಡಿಗಾಸೇ ಆಕೆಯ ಜೀವನಾಧಾರ. ಮೂವರು ಹೆಣ್ಣು ಮಕ್ಕಳನ್ನು ಕೈಗಿತ್ತು, ಪತಿ ತೌಡು ಪೂಜಾರಿ ಅಕಾಲಿಕವಾಗಿ ಸಾವನ್ನಪ್ಪಿದಾಗ ಬೊಮ್ಮಿ ಪೂಜಾರಿಗೆ ಆಸರೆಯಾದವರೇ ಸ್ಥಳೀಯರು. ಕಷ್ಟಪಟ್ಟು ಮಕ್ಕಳನ್ನು ಬೆಳೆಸಿ ಮದುವೆ ಮಾಡಿಸಿದರು.
ಗ್ರಾಮದ ಬಡ ಮಹಿಳೆಗೆ ಸೂರೊಂದನ್ನು ನಿರ್ಮಿಸಲು ಮೊದಲಿಗೆ ಪಡುಪಣಂಬೂರು ಗ್ರಾ.ಪಂಚಾಯತ್‌ನ ಅಧ್ಯಕ್ಷರಾಗಿರುವ ಮೋಹನ್‌ದಾಸ್ ಹಾಗೂ ಸದಸ್ಯರಾಗಿರುವ ಹೇಮಂತ್ ಅಮೀನ್ ಮುಂದಾದರಾದರೂ ಜಮೀನಿಗೆ ದಾಖಲೆ ಪತ್ರದ ಸಮಸ್ಯೆ ಯಿತ್ತು. ಇದು ಕಾನೂನಾತ್ಮಕವಾಗಿಯೂ ತೊಡಕಾಯಿತು. ಆದರೂ ಸಹ ಇದ್ದ ಸ್ಥಳದಲ್ಲಿಯೇ ಮನೆಯ ದುರಸ್ತಿ ಎಂಬ ಮೀಸಲು ಅನುದಾನವನ್ನು ಪಂಚಾಯತ್‌ನಿಂದ ಆರಂಭದಲ್ಲಿ ಬಳಸಿಕೊಂಡು ಸ್ಥಳೀಯ ಸಮಾಜಮುಖಿ ಚಿಂತನೆಯ ಸೇವಾ ಸಂಸ್ಥೆಗಳಿಗೆ ನೆರವನ್ನು ನೀಡಲು ಬೊಮ್ಮಿ ಪೂಜಾರಿಯವರ ಪರವಾಗಿ ವಿನಂತಿಸಿಕೊಂಡರು.
Related Articles
Advertisement
ಕೈ ಮುಗಿದ ಬೊಮ್ಮಕ್ಕಮನೆ ನಿರ್ಮಾಣದ ಬಗ್ಗೆ ಪತ್ರಿಕೆಯೊಂದಿಗೆ ಹೇಳಿಕೆ ನೀಡಲು ಮುಂದಾದರೂ ಸಹ ಬೊಮ್ಮಕ್ಕನ ಬಾಯಲ್ಲಿ ಮಾತು ಹೊರಡಲಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಆಕೆ ಕೈ ಮುಗಿದು ಸಹಕರಿಸಿದವರನ್ನು ನೆನಪಿಸಿಕೊಂಡು ಕಣ್ಣೀರು
ಸುರಿಸಿದರು. ಸಂಸ್ಥೆಗಳ ನೆರವು
ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರು ಸಹ ಈ ಅಸಹಾಯಕ ಮಹಿಳೆಗೆ ಸ್ಪಂದಿಸಲು ಸಹಕರಿಸಿದರಲ್ಲದೇ, ಸ್ಥಳೀಯ ಸಂಘ ಸಂಸ್ಥೆಗಳು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸಿದ್ದಾರೆ.
– ಮೋಹನ್ ದಾಸ್, ಅಧ್ಯಕ್ಷರು,
ಪಡುಪಣಂಬೂರು ಗ್ರಾ.ಪಂ.