Advertisement
ರೋಟರಿ ಸಂಸ್ಥೆಯ ಟಿ.ಭಾಸ್ಕರ,ಯೋಜನಾ ನಿರ್ದೇಶಕರಾದ ಡಾ| ರವಿ ಅಪ್ಪಾಜಿ ಮತ್ತು ರೋಟರಿ ಜಿಲ್ಲೆ ಗವರ್ನರ್‌ರೋಹಿನಾಥ್, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್, ಗ್ರಾ.ಪಂ. ಉಪಾಧ್ಯಕ್ಷರಾದ ಲತಾ ಮತ್ತಿತರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು. ಪ್ರಕೃತಿ ಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅವರವ ಸ್ವಂತ ಜಾಗದಲ್ಲಿ ಒಂದು ಮನೆಗೆ 5 ಲಕ್ಷ ರೂ. ನಂತೆ 25 ಮನೆಗಳನ್ನು ರೋಟರಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗುತ್ತದೆ. 25 ಮನೆಗಳಿಗೆ 1.26 ಕೋಟಿ ರೂ. ವೆಚ್ಚವಾಗಲಿದೆ ಎಂದು ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರಾದ ಟಿ.ಭಾಸ್ಕರ್ ಅವರು ತಿಳಿಸಿದರು.
ಸರಕಾರದ ಜತೆ ಸರಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ನಿರಾಶ್ರಿ ತರು ಎಂದಿನಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್.ಐ ಜಿಲ್ಲಾ 3181 ಗವರ್ನರ್ ಪಿ.ರೋನಾಥ್ ಅವರು ಮಾತನಾಡಿ ರೋಟರಿ ಹ್ಯಾಬಿಟೇಟ್ ಸಂಸ್ಥೆಯು ದೇಶದಲ್ಲಿ ಸುಮಾರು 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದೆ. ಇಗ್ಗೊàಡ್ಲು ಗ್ರಾಮದಲ್ಲಿ 25 ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಿಸುತ್ತದೆ. ಎನ್‌ಜಿಒಗಳು ಸಹಕಾರ ನೀಡಿದೆ ಎಂದು ತಿಳಿಸಿದರು. ಸೋಮವಾರಪೇಟೆ ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್, ನಿರಾಶ್ರಿತರಾದ ಪಾಂಚಾಲಿ, ಶೋಭಾ, ಟಿ.ರಘು ಹಾಗೂ ಇತರ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಚೆಕ್ ತರಿಸಲಾಯಿತು. ರೋಟರಿ ಹ್ಯಾಬಿಟೇಟ್ ಸಂಸ್ಥೆ ಕಾರ್ಯದರ್ಶಿ ಕೃಷ್ಣ ಶೆಟ್ಟಿ, ಮಾದಾಪುರ ಪಿಡಿಒ ಸಂತೋಷ್ ಕುಮಾರ್, ಸಾರ್ವಜನಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.