ಹಳ್ಳಿಯಲ್ಲಿ ನಿರ್ಮಿಸಿದ್ದೇ ನಮ್ಮ ಸರ್ಕಾರ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
Advertisement
ಸಮೀಪದ ಯಾದವಾಡ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾನು ಸಚಿವನಾದ ಮೇಲೆ ಇಂದು ಎಲ್ಲಾ ಹಳ್ಳಿಗಳಲ್ಲಿ ಶೌಚಾಲಯಗಳು ತಲೆ ಎತ್ತುವಂತೆ ಮಾಡಿದ್ದೇನೆ’ ಎಂದರು. ರಾಜ್ಯವನ್ನು ಬಯಲು ಶೌಚ ಮುಕ್ತ ಮಾಡಲು ಮೇಲಿಂದ ಮೇಲೆ ಕೇಳಿದಷ್ಟು ಅನುದಾನವನ್ನು ಕೇಂದ್ರ ನೀಡುತ್ತಿದೆ. ಇಲ್ಲಿ ಪಕ್ಷಭೇದ ಮರೆತು ಉತ್ತಮ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ ಶೌಚಾಲಯ ಕ್ರಾಂತಿಯಾಗಲು ಅಗತ್ಯ ಹಣಕಾಸು ನೆರವು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.