Advertisement

ಸಂವಿಧಾನ ಸಂರಕ್ಷಣಾ ಸಮಾವೇಶ ನಾಳೆ

01:37 PM Apr 23, 2022 | Team Udayavani |

ಕೊಪ್ಪಳ: ಕುಷ್ಟಗಿ ಪಟ್ಟಣದಲ್ಲಿ ಏ.24 ರಂದು ಬೆಳಗ್ಗೆ 11ಕ್ಕೆ ಸಂವಿಧಾನ ಸಂರಕ್ಷಣಾ ವೇದಿಕೆಯಿಂದ ಸಂವಿಧಾನ ಸಂರಕ್ಷಣಾ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ವಿಚಾರವಾದಿಗಳು, ಎಲ್ಲ ಪಕ್ಷಗಳ ನಾಯಕರು ಆಗಮಿಸಲಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ನಾಪೂರ ಹೇಳಿದರು.

Advertisement

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಂವಿಧಾನ ಸಂರಕ್ಷಣಾ ವೇದಿಕೆ ಕುಷ್ಟಗಿಯಲ್ಲಿ ಸಮಾವೇಶ ಮಾಡಲು ಸಿದ್ಧತೆ ನಡೆಸಿ ನಮ್ಮ ಸಹಕಾರ ಕೇಳಿತ್ತು. ಹಾಗಾಗಿ ನಾವು ಅವರಿಗೆ ಸಮಾವೇಶ ನಡೆಸಲು ಸಹಕಾರ ಕೊಡುತ್ತಿದ್ದೇವೆ. ಇದು ಕಾಂಗ್ರೆಸ್‌ ಆಯೋಜಿತ ಕಾರ್ಯಕ್ರಮವಲ್ಲ. ಎಲ್ಲ ವಿಚಾರವಾದಿಗಳು, ವಿವಿಧ ಪಕ್ಷಗಳ ಮುಖಂಡರು ಆಗಮಿಸಲಿದ್ದಾರೆ. ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದೆ ಎಂದರು.

ಇಂದು ದೇಶದಲ್ಲಿ ಸಂವಿಧಾನ ಅಪಾಯದಲ್ಲಿರುವುದು ಎಲ್ಲಡೆಯೂ ಕಾಣಲಾಗುತ್ತಿದೆ. ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ಇಂದು ಭಾರತಕ್ಕೆ ಕೊಟ್ಟಿರುವ ದೊಡ್ಡ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವಂತಹ ಮಾತುಗಳನ್ನು ನಾವು ಕೇಳುತ್ತಿದ್ದೇವೆ. ಇದರಿಂದ ಶೋಷಿತರ, ನೊಂದವರ, ಬಡ ವರ್ಗವು ತುಂಬ ಅನ್ಯಾಯಕ್ಕೆ ಒಳಗಾಗಲಿದೆ. ಸಂವಿಧಾನ ರಕ್ಷಣೆ ಮಾಡುವ ಅಗತ್ಯವಿದೆ. ಹೀಗಾಗಿ ಇಂತಹ ಸಮಾವೇಶ ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಈ ಸಮಾವೇಶಕ್ಕೆ ವಿವಿಧ ಮಠಾಧೀಶರು, ಮಾಜಿ ಸಿಎಂ ಸಿದ್ದರಾಮಯ್ಯ, ಸತೀಶ ಜಾರಕಿಹೊಳೆ, ಎಚ್‌.ಸಿ. ಮಹಾದೇವಪ್ಪ, ಶಿವನಗೌಡ ನಾಯಕ್‌, ಆರ್‌.ಮಾನಸಯ್ಯ, ಡಾ| ಎಚ್‌.ಎಸ್‌. ಅನುಪಮಾ, ಜಿಲ್ಲೆಯ ಸಚಿವ ಹಾಲಪ್ಪ ಆಚಾರ್‌, ಸಂಸದ ಸಂಗಣ್ಣ ಕರಡಿ, ಬಿ.ಕೆ. ಹರಿಪ್ರಸಾದ್‌, ಪ್ರಿಯಾಂಕ ಖರ್ಗೆ, ಮಾರಸಂದ್ರ ಮುನಿಯಪ್ಪನವರ, ಸಲೀಂ ಅಹ್ಮದ್‌, ಪುಟ್ಟರಂಗಶೆಟ್ಟಿ, ಆರ್‌.ಬಿ. ತಿಮ್ಮಾಪು‌ರಜಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಜಿಲ್ಲೆ ಎಲ್ಲ ಜನಪ್ರತಿನಿಧಿಳು, ಚಿಂತಕರು, ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಾವೇಶದಲ್ಲಿ ವಿಜಯಪುರ, ರಾಯಚೂರು, ಕೊಪ್ಪಳ ಜಿಲ್ಲೆಯ 20-30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಲ್ಲ ವ್ಯವಸ್ಥೆಯನ್ನು ವೇದಿಕೆಯೇ ನಿರ್ವಹಣೆ ಮಾಡುತ್ತಿದೆ. ನಾವು ಕ್ಷೇತ್ರದ ಶಾಸಕರಾಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಹಕಾರ ನೀಡುತ್ತಿದ್ದೇವೆ. ಇದಕ್ಕೆ ನೆಮ್ಮೆಲ್ಲ ಹಿರಿಯ ನಾಯಕರ ಗಮನಕ್ಕೂ ತರಲಾಗಿದೆ. ಅಲ್ಲದೇ ಅವರೇ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ನಾವು ಉಪಸ್ಥಿತರಿರಬೇಕಾಗುತ್ತದೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಹನುಮೇಶ ಕಡೆಮನಿ, ಬಾಲಚಂದ್ರನ್‌ ಸೇರಿದಂತೆ ಇತರರು ಉಪಸ್ಥಿತರಿರುವರು.

ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ತಾರೆ: ಬಯ್ಯಾಪೂರ

ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರು ಗೆಲ್ಲಲಿದ್ದಾರೆ. ಅವರು ಕೊಪ್ಪಳಕ್ಕೆ ಬರಲಿ, ಕುಷ್ಟಗಿ ಕ್ಷೇತ್ರಕ್ಕೆ ಬಂದರೂ ನಾನು ಕ್ಷೇತ್ರವನ್ನು ಬಿಟ್ಟು ಕೊಡಲಿದ್ದೇನೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಹೇಳಿದರು. ಸಿದ್ದರಾಮಯ್ಯ ಅವರನ್ನು ರಾಜ್ಯದೆಲ್ಲೆಡೆಯೂ ಆಹ್ವಾನಿಸುತ್ತಿದ್ದಾರೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಕ್ಷೇತ್ರವನ್ನು ಬಿಟ್ಟು ಕೊಡಲು ನಾವು ಸದಾ ಸಿದ್ದನಿದ್ದೇನೆ. ಈ ಹಿಂದೆ ಅವರು ಇಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗಿನಿಂದಲೂ ಜಿಲ್ಲೆಯ ಜನರೊಂದಿಗೆ ಅವರು ಒಡನಾಟ ಹೊಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next