Advertisement

ಸಂವಿಧಾನ ಪಾಠ ಕಡ್ಡಾಯ?

11:03 AM Dec 01, 2017 | Team Udayavani |

ಹೊಸದಿಲ್ಲಿ: ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಮಾನವೀಯತೆ, ನಿರ್ವಹಣೆ ಮತ್ತು ಸಮಾಜ ವಿಜ್ಞಾನ, ಪರಿಸರ ವಿಜ್ಞಾನ, ಭಾರತೀಯ ಸಂವಿಧಾನ ಹಾಗೂ ಭಾರತೀಯ ಸಾಂಪ್ರದಾಯಿಕ ವಿಚಾರಗಳ ಮೂಲತತ್ವ ಕುರಿತಾಗಿಯೂ ಶಿಕ್ಷಣ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಇದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಐಐಟಿ ಹಾಗೂ ಎನ್‌ಐಟಿ ವಿದ್ಯಾರ್ಥಿಗಳಿಗೆ ಮಾತ್ರ ಈ ಶಿಕ್ಷಣಗಳಿಂದ ವಿನಾಯಿತಿ ನೀಡಲಾಗಿದೆ!

Advertisement

ಅಚ್ಚರಿಯಾದರೂ ಇದು ಸತ್ಯ. ಮಾದರಿ ಪಠ್ಯಕ್ರಮದ ಭಾಗವಾಗಿರುವುದರಿಂದ ಪಾಠ ಮಾಡಲೇಬೇಕೆಂದು ಹೇಳಲಾಗಿದೆ. ಅಖೀಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಐಸಿಟಿಇ) ಹಾಗೂ ತಾಂತ್ರಿಕ ಶಿಕ್ಷಣ ನಿರ್ವಹಣ ಮಂಡಳಿ ಈ ಸಂಬಂಧ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಅಲ್ಲದೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾ ಲಯ ಇದಕ್ಕೆ ಒಪ್ಪಿಗೆ ನೀಡಿದೆ. ಇದರ ಪ್ರಕಾರ ದೇಶದ 3,000ಕ್ಕೂ ಹೆಚ್ಚು ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು ಇದನ್ನು ಅಳವಡಿಸಿಕೊಳ್ಳ ಬೇಕಾ ಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಖರಗ್‌ಪುರ್‌ ಐಐಟಿ ಪ್ರಾಧ್ಯಾಪಕಿ ಇಂದ್ರಾನಿಲ್‌ ಮನ್ನಾ, “”ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ಏನನ್ನಾದರೂ ಬದಲಾವಣೆ ಬಯಸಬೇ ಕೆಂದರೆ ಈ ಶಿಕ್ಷಣದ ಆವಶ್ಯಕತೆ ಇದೆ. ಅಲ್ಲದೆ, ಇದು ವಿದ್ಯಾರ್ಥಿಗಳಿಗೂ ಪ್ರಯೋಜನಕಾರಿ ಯಾಗಿದೆ. ಮಾನವೀಯತೆ, ನಿರ್ವಹಣೆ ಮತ್ತು ಸಮಾಜ ವಿಜ್ಞಾನ, ಪರಿಸರ ವಿಜ್ಞಾನ, ಭಾರತೀಯ ಸಂವಿಧಾನ ಶಿಕ್ಷಣಗಳು ಎಂಜಿನಿ ಯರಿಂಗ್‌ ವಿದ್ಯಾರ್ಥಿಗಳಿಗೆ ಕಲಿಸದೇ ಇದ್ದಲ್ಲಿ ಅವರಿಗೆ ಪೂರ್ಣ ಶಿಕ್ಷಣ ಸಿಕ್ಕಿದಂತಾಗುವುದಿಲ್ಲ. ಈ ನಿಟ್ಟಿನಲ್ಲಿ ಈ ಶಿಕ್ಷಣ ಪಾಠಗಳ ಅಗತ್ಯತೆ ಇದ್ದೇ ಇದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next