Advertisement

250 ಗ್ರಾಮಗಳಿಗೆ ನಿರಂತರ ವಿದ್ಯುತ್‌: ಶಾಸಕ

02:57 PM Dec 21, 2017 | Team Udayavani |

ಮಾಲೂರು: ತಾಲೂಕಿನ 250 ಗ್ರಾಮಗಳಿಗೆ ನಿರಂತರವಾಗಿ ಮೂರು ಪೇಸ್‌ಗಳಲ್ಲಿ ವಿದ್ಯುತ್‌ ಪೂರೈಸುವ 14.96 ಕೋಟಿ ರೂ.ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಎಸ್‌. ಮಂಜುನಾಥಗೌಡ ತಿಳಿಸಿದರು. ಪಟ್ಟಣದ ಬೆಸ್ಕಾಂನ 255 ಕೆ.ವಿ. ಉಪ ಕೇಂದ್ರದಲ್ಲಿ ತಾಲೂಕಿನ ಚೊಕ್ಕಂಡಹಳ್ಳಿ ಪೀಡರ್‌ ಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ 250 ಹಳ್ಳಿಗಳಿಗೆ ನಿರಂತರವಾಗಿ ದಿನದ 24 ತಾಸುಗಳ ಕಾಲ 3 ಪೇಸ್‌ ವಿದ್ಯುತ್‌ ಪೂರೈಸುವ ನಿಟ್ಟಿನಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮೂರನೇ ಹಂತದ ಕಾಮಗಾರಿ ಆರಂಭವಾಗಿರುವ ಚೊಕ್ಕಂಡಹಳ್ಳಿಯ ಪೀಡರ್‌ ಅನ್ನು 5.91 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದೆ ಎಂದರು. 

Advertisement

ಚೊಕ್ಕಂಡಹಳ್ಳಿ ಪೀಡರ್‌ ವ್ಯಾಪ್ತಿಯ ಹಳ್ಳಿಗಳಾದ ಹಾರೋಹಳ್ಳಿ, ಅಬ್ಬೇನಹಳ್ಳಿ, ತಂಬಿಹಳ್ಳಿ, ಕಂಬೀಪುರ, ಸುಣ್ಣಕಲ್ಲು, ಬಾರ್ಲಿ, ಕಣವೇನಹಳ್ಳಿ, ಕೊರಚನೂರು, ಚೊಕ್ಕಂಡಹಳ್ಳಿ, ಮಡಿವಾಳ, ಹೆಡಗಿನಬೆಲೆ, ಬೆಳ್ಳಾವಿ, ದಿನ್ನೂರು, ಇರಬನಹಳ್ಳಿ, ಹನುಮನಾಯಕನಹಳ್ಳಿ, ಯಶವಂತಪುರ, ಕಾಡದೇನಹಳ್ಳಿ ಲಕ್ಕೇನಹಳ್ಳಿ, ನಲ್ಲಪ್ಪನಹಳ್ಳಿ, ಪಿಚ್ಚಗುಂಟ್ರಹಳ್ಳಿ ಸೇರಿದಂತೆ ಒಟ್ಟು 20 ಗ್ರಾಮಗಳಿಗೆ ದಿನದ 24 ತಾಸುಗಳ ಕಾಲ 3 ಪೇಸ್‌ನಲ್ಲಿ ಗೃಹ ಬಳಕೆ, ಅಂಗಡಿ, ಸಣ್ಣ ಕೈಗಾರಿಕೆ, ಫ್ಲೋರ್‌ಮಿಲ್‌, ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ನಿರಂತರವಾಗಿ ವಿದ್ಯುತ್‌ ಪೂರೈಸಲಾಗುವುದು ಎಂದರು. ಸಂದರ್ಭದಲ್ಲಿ ಜಿಪಂ ಸದಸ್ಯೆ ಗೀತಮ್ಮ, ಪುರಸಭಾಧ್ಯಕ್ಷ ರಾಮಮೂರ್ತಿ, ಸದಸ್ಯ ಮುರಳೀಧರ, ತಾಪಂ ಸದಸ್ಯ ಶ್ರೀನಾಥ್‌, ಸದಾನಂದ, ಎಪಿಎಂಸಿ ಸದಸ್ಯ ಚಂದ್ರಶೇಖರ್‌, ತೊರ್ನಹಳ್ಳಿ ಗ್ರಾಪಂ ಉಪಾಧ್ಯಕ್ಷ ಕೃಷ್ಣಪ್ಪ, ಜೆಡಿಎಸ್‌ ನಗರಾಧ್ಯಕ್ಷ ಟಿ.ರಾಮಚಂದ್ರ, ವಕೀಲ ಅಂಜಿನಪ್ಪ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿ.ಚಲಪತಿ, ಕಾರ್ಯನಿರ್ವಹಕ ಎಂಜಿನಿಯರ್‌ ಕಾಂತರೆಡ್ಡಿ, ಉಪಕೇಂದ್ರದ ಇಇ ಪ್ರಕಾಶ್‌, ಕಾಮಗಾರಿ ಇಇ ವೆಂಕಟೇಶಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next