ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸಕ್ಕೆ ಭದ್ರತೆಗೆ ನಿಯೋಜನೆಗೊಂಡು ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳು ಆಟೋ ಚಾಲಕನಿಂದ ಲಂಚ ಪಡೆದು ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮತ್ತೂಂದೆಡೆ ಗಾಂಜಾ ಪ್ರಕರಣದ ಪ್ರಮುಖ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಕೋರಮಂಗಲ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್ ಮತ್ತು ಸಂತೋಷ್ ಬಂಧಿತರು. ಆರೋಪಿತ ಕಾನ್‌ಸ್ಟೇಬಲ್‌ಗಳು ಕೆಲ ದಿನಗಳ ಹಿಂದೆ ಗಾಂಜಾ ತುಂಬಿದ್ದ ಸಿಗರೇಟ್ ಸೇವಿಸುತ್ತಿದ್ದ ಆಟೋ ಚಾಲಕನ ಇಲಿಯಾಸ್‌ನನ್ನು ಬೆದರಿಸಿ ಒಂದು ಲಕ್ಷ ರೂ.ಗೆಬೇಡಿಕೆಯಿಟ್ಟು 5 ಸಾವಿರ ರೂ. ಲಂಚ ಪಡೆದ್ದರು. ಈಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಿಸಿಬಿಗೆ ವರ್ಗಾವಣೆಯಾದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಸದ್ಯ ಅಮಾನತುಗೊಂಡಿರುವ ಸಂತೋಷ್ ಹಾಗೂ ಶಿವಕುಮಾರ್ ಈ ಮೊದಲು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ 2021 ಅ.25ರಂದು ಆಡುಗೋಡಿ ನಿವಾಸಿಆಟೋ ಚಾಲಕ ಇಲಿಯಾಸ್ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಸ್ನೇಹಿತ ಸೈಯದ್ ಜತೆ ಗಾಂಜಾ ಸೇವನೆ ಮಾಡುತ್ತಿದ್ದ. ಆ ವೇಳೆ ಕರ್ತವ್ಯನಿರತ ಶಿವಕುಮಾರ್ ಮತ್ತು ಸಂತೋಷ್ ದಾಳಿ ನಡೆಸಿ ಇಬ್ಬರನ್ನು ಹಿಡಿದು, ಗಾಂಜಾ ತುಂಬಿದ್ದ ಸಿಗರೇಟ್ ವಶಕ್ಕೆ ಪಡೆದಿದ್ದರು. ಅಷ್ಟೇ ಅಲ್ಲದೇ, ಒಂದು ಲಕ್ಷ ರೂ. ಕೊಟ್ಟರೆ ಪ್ರಕರಣ ದಾಖಲಿಸುವುದಿಲ್ಲ ಎಂದು ಲಂಚಕ್ಕೆಬೇಡಿಕೆ ಇಟ್ಟಿದ್ದರು. ಅದಕ್ಕೆ ಹೆದರಿದ ಇಲಿಯಾಸ್ ಐದು ಸಾವಿರ ರೂ. ಕೊಟ್ಟು ಪರಾರಿಯಾಗಿದ್ದ.
ಆದರೆ, ಇದೀಗ ಇಬ್ಬರು ಕಾನ್‌ಸ್ಟೇಬಲ್‌ಗಳ ವಿರುದ್ಧ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸ್ನೇಹಿತರ ಸಹಾಯ ಪಡೆದು ದೂರು ನೀಡುತ್ತಿದ್ದೇನೆ. ಈ ಮೊದಲುದೂರು ನೀಡಬೇಕಿತ್ತು. ಆದರೆ, ಕಾನ್‌ಸ್ಟೇಬಲ್‌ಗಳು ಇಲ್ಲದಿರುವ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಾರೆಎಂಬ ಭಯದಲ್ಲಿ ದೂರು ನೀಡಿರಲಿಲ್ಲ. ಇದೀಗ ಅವರೇ ಡ್ರಗ್ಸ್ ಪ್ರಕರಣದ ಆರೋಪಿಗಳಾಗಿರುವುದರಿಂದ ದೂರು ನೀಡಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸರು ಹೇಳಿದರು.
ಇಬ್ಬರು ಪೆಡ್ಲರ್‌ಗಳು ವಶಕ್ಕೆ: ಮತ್ತೂಂದೆಡೆ ಡ್ರಗ್ಸ್ ಪ್ರರಕಣದ ಪ್ರಮುಖ ಆರೋಪಿಗಳಾದ ಅಖೀಲ್ ರಾಜ್ ಮತ್ತು ಅಮ್ಜದ್ ಖಾನ್‌ನನ್ನು ಸಿಸಿಬಿ ಪೊಲೀಸರುಮತ್ತೂಮ್ಮೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.ಎಷ್ಟು ದಿನಗಳಿಂದ ಕಾನ್‌ಸ್ಟೇಬಲ್‌ಗಳ ಜತೆ ವ್ಯವಹಾರನಡೆಸುತ್ತಿದ್ದಿರಾ? ಗಾಂಜಾ ದಂಧೆಯ ರೂವಾರಿಗಳು ಯಾರು? ಇನ್ನು ಯಾರೆಲ್ಲ ಸಂಪರ್ಕದಲ್ಲಿದ್ದಾರೆ?ಎಂಬೆಲ್ಲ ವಿಚಾರಣೆ ನಡೆಯುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.