Advertisement
ಈ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)ಯ ಬಗ್ಗೆ ಮುಸ್ಲಿಮರು ಪ್ರತಿಭಟನೆ ನಡೆಸುವ ಮೂಲಕ ದೇಶದ ಜನರ ದಿಕ್ಕುತಪ್ಪಿಸಿದ್ದರು. ಆದರೆ ಆ ಹೋರಾಟ ಯಶಸ್ವಿಯಾಗಲಿಲ್ಲ. ಆದರೆ ಇದೀಗ ನೂತನ ಕಾಯ್ದೆಯಿಂದ ತಮಗೆ ನಷ್ಟವಾಗುತ್ತದೆ ಎಂದು ರೈತರು ಹೋರಾಟಕ್ಕಿಳಿದಿದ್ದಾರೆ ಎಂದು ದೂರಿದರು.
Related Articles
Advertisement
ರೈತರ ಪ್ರತಿಭಟನೆ ಹಿಂದೆ ಎರಡು ದೇಶಗಳ ಕೈವಾಡ ಇದೆ ಎಂಬ ಬಗ್ಗೆ ವಿಸ್ತ್ರತವಾಗಿ ಯಾವುದೇ ವಿವರಣೆಯನ್ನು ಸಚಿವ ದಾನ್ವೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಸರ್ಕಾರ ಗೋಧಿಯನ್ನು ಕಿಲೋಗೆ 24 ರೂ. ಹಾಗೂ ಅಕ್ಕಿಯನ್ನು ಕಿಲೋಗೆ 34ರೂಪಾಯಿಯಂತೆ ಖರೀದಿಸಿ. ಜನರಿಗೆ ಗೋಧಿಯನ್ನು 2 ರೂಪಾಯಿಗೆ, ಅಕ್ಕಿಯನ್ನು 3 ರೂಪಾಯಿಗೆ ನೀಡುತ್ತಿದೆ. ಕೇಂದ್ರ ಸರ್ಕಾರ ಇದಕ್ಕಾಗಿ 1.75 ಲಕ್ಷ ಕೋಟಿ ಸಬ್ಸಿಡಿ ನೀಡುತ್ತಿದೆ. ಸರ್ಕಾರ ರೈತರ ಹಿತಕ್ಕಾಗಿ ಹಣವನ್ನು ವ್ಯಯಿಸುತ್ತಿದೆ ಎಂದು ಸಚಿವ ದಾನ್ವೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಪ್ರಧಾನಿ ಹಾಗೂ ಅವರು ಯಾವತ್ತೂ ರೈತ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ದಾನ್ವೆ ಈ ಸಂದರ್ಭದಲ್ಲಿ ಹೇಳಿದರು.