Advertisement

9, 10ನೇ ತರಗತಿ ಮುಂದುವರಿದ ಶಿಕ್ಷಣ ಎಂದು ಪರಿಗಣಿಸಿ

10:01 PM Nov 22, 2022 | Team Udayavani |

ಬೆಂಗಳೂರು: 9 ಮತ್ತು 10ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರಿದ ಶಿಕ್ಷಣ ಎಂದು ಪರಿಗಣಿಸಲು ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಉಪ ನಿರ್ದೇಶಕರಿಗೆ ಸೂಚನೆ ಕೊಟ್ಟಿದೆ.

Advertisement

1 ರಿಂದ 8 ಅಥವಾ 6ರಿಂದ 8ನೇ ತರಗತಿ ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಮುಂದುವರಿದ ಶಾಲೆ ಎಂದು ಪರಿಗಣಿಸಬೇಕಾಗಿದೆ. ಅದರನ್ವಯ ನೋಂದಣಿ ನಿಯಮಗಳ ಅನುಸಾರ ಕ್ರವ ವಹಿಸಬೇಕು. ಇದಕ್ಕೆ ಅವಶ್ಯ ತಿದ್ದುಪಡಿ ತರಲಾಗಿದೆ.

ಯಾವುದೇ ಕಾರಣಕ್ಕೂ 9 ಮತ್ತು 10ನೇ ತರಗತಿಯನ್ನು ಹೊಸ ಶಾಲೆ ಎಂದು ಪರಿಗಣಿಸುವಂತಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಇಂತಹ ಶಾಲೆಗಳಿಗೆ ಭದ್ರತಾ ಠೇವಣಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ಮುಂದುವರೆದ ಶಾಲೆಗೆ ನಿಗದಿ ಪಡಿಸಿರುವ ಮೊತ್ತವನ್ನೇ ಮುಂದುವರೆಸಬೇಕು ಎಂದು ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next