Advertisement

ಇಂಧನ ನೀತಿಗೆ ಒಪ್ಪಿಗೆ; ರಾಜ್ಯ ಸಚಿವ ಸಂಪುಟ ತೀರ್ಮಾನ, ದಕ್ಷಿಣ ಭಾರತದಲ್ಲಿ ಮೊದಲ ರಾಜ್ಯ

02:59 AM Mar 31, 2022 | Team Udayavani |

ಬೆಂಗಳೂರು: ರಾಜ್ಯದ ನವೀಕರಿಸಬಹುದಾದ ಇಂಧನ ನೀತಿ 2022-27ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರಗಿದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅನುಮೋದನೆ ನೀಡಲಾಗಿದ್ದು, ರಾಜ್ಯದಲ್ಲಿ 2009ರಿಂದ ನವೀಕರಿಸಬಹುದಾದ ಇಂಧನ ನೀತಿಯನ್ನು ಜಾರಿಗೊಳಿಸಲಾಗಿದೆ. ವಿಶೇಷವೆಂದರೆ, ದಕ್ಷಿಣ ಭಾರತದಲ್ಲಿ ಈ ನೀತಿ ಜಾರಿ ಮಾಡಿದ ಮೊದಲ ರಾಜ್ಯವಾಗಿದೆ.
ರಾಜ್ಯ ಸರಕಾರ 2014ರಿಂದ 21ರ ವರೆಗೆ ಪ್ರತ್ಯೇಕ ಸೌರ ನೀತಿಯನ್ನು ಜಾರಿಗೊಳಿಸಿ 6 ಸಾವಿರ ಮೆ.ವ್ಯಾ.ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದ ಲಾಗಿತ್ತು. ಡಿಸೆಂಬರ್‌ 2021ರ ಹೊತ್ತಿಗೆ 7,523 ಮೆ. ವ್ಯಾ. ಸೌರ ವಿದ್ಯುತ್‌ ಉತ್ಪಾದಿಸಿ ಗುರಿ ಮೀರಿ ಸಾಧನೆ ಮಾಡಲಾಗಿದೆ.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳ ಮಾಡುವ ಉದ್ದೇಶದಿಂದ 2022-27ಕ್ಕೆ ಹೊಸ ನೀತಿ ರೂಪಿಸ ಲಾಗಿದೆ. ಸೌರ ಮತ್ತು ಪವನ ವಿದ್ಯುತ್‌ ಅತ್ಯಂತ ಕಡಿಮೆ ದರದಲ್ಲಿ ಉತ್ಪಾದನೆಯಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ವಿದ್ಯುತ್‌ ಉತ್ಪಾದನ ಸಾಮರ್ಥ್ಯವನ್ನು ಹಂತ ಹಂತವಾಗಿ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನ ಸಾಮರ್ಥ್ಯದೊಂದಿಗೆ ಬದಲಾಯಿಸಲು ಪ್ರಯತ್ನ ನಡೆಸಲು ಸರಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಇಂಧನ ನೀತಿಯ ಪ್ರಮುಖ ಅಂಶಗಳು
01ಹಗಲು ರಾತ್ರಿ ವಿದ್ಯುತ್‌ ಸರಬರಾಜಿಗೆ ಉಷ್ಣ ವಿದ್ಯುತ್‌ನೊಂದಿಗೆ ನವೀಕರಿಸಬಹುದಾದ ಇಂಧನ ಸೇರಿಸುವುದು.
02ಭವಿಷ್ಯದಲ್ಲಿ ರಾಜ್ಯದಲ್ಲಿ ಹೆಚ್ಚಿನ ನವೀಕರಿಸ ಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ.
03ಹೊರ ರಾಜ್ಯಗಳಿಂದ ಬೇಡಿಕೆ ಇರುವುದರಿಂದ ಕರ್ನಾಟಕವನ್ನು ನವೀಕರಿಸುವ ಇಂಧನಗಳ ಹೂಡಿಕೆಯ ಆಕರ್ಷಣೀಯ ತಾಣ ಮಾಡುವುದು.
042030ರ ವೇಳೆಗೆ 500 ಗಿಗಾ ವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನೆ.
05ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿ ಪಡಿಸುವುದು.
06ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಂಡವಾಳ ಆಕರ್ಷಿಸುವುದು.
07ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಪಾರ್ಕ್‌ಗಳ ಸ್ಥಾಪನೆ.
08ಪ್ರಸರಣ ಮತ್ತು ಹಸಿರು ಇಂಧನ ಕಾರಿಡಾರ್‌ನಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಉತ್ತೇಜನ.
09ಪ್ರಸರಣೆ ಮತ್ತು ವಿತರಣ ನಷ್ಟ ಕಡಿಮೆ ಮಾಡಲು ಕೃಷಿ ಮಾರ್ಗ ಮತ್ತು ಪಂಪ್‌ಸೆಟ್ಟುಗಳ ಸೌರೀಕರಣ ವ್ಯವಸ್ಥೆ ಅಭಿವೃದ್ಧಿಪಡಿಸುವುದು.
10ಸಾರಿಗೆ ವಲಯದಲ್ಲಿಸ್ವಚ್ಛ ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜಿಸುವುದು

ಇತರ ತೀರ್ಮಾನಗಳು
01. ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 114 ಜೀವಾವಧಿ ಶಿûಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೆ ಒಪ್ಪಿಗೆ.
02. 2022-23ನೇ ಸಾಲಿಗೆ ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಕ್ಕೆ 102 ಕೋಟಿ ರೂ. ವೆಚ್ಚದಲ್ಲಿ ಕೈಪಿಡಿ ಒದಗಿಸಲು ಒಪ್ಪಿಗೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next