Advertisement
ಕೃಷ್ಣಾ ಮೇಲ್ದಂಡೆ ಯೋಜನೆಯ ನಿರಾಶ್ರಿತರ ಪುನರ್ವಸತಿ ಕುರಿತ ಚರ್ಚೆ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದಅವರು, ಈ ಹಿಂದೆ ಕೂಡಗಿ ವಿದ್ಯುತ್ ಸ್ಥಾವರಕ್ಕೆ ಜಮೀನು ಕೊಟ್ಟ ರೈತರಿಗೆ ಪರಿಹಾರ ಕೊಡುವಾಗ ಕಾಯ್ದೆ ಅಡ್ಡಿ ಬಂದಿಲ್ಲ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆ ನಿರಾಶ್ರಿತರಿಗೆ ಪರಿಹಾರ ಕೊಡುವ ವಿಚಾರದಲ್ಲಿ ಕಾಯ್ದೆಗೆ ಅಂಟಿಕೊಳ್ಳುವುದು ಎಷ್ಟು ಸರಿ?ಸಹಮತದ ಸೂತ್ರ ಪಾಲಿಸಿ ಪರಿಹಾರ ನೀಡಲು 2013ರ ಕಾಯ್ದೆಯಲ್ಲಿ ಅವಕಾಶವಿದೆ ಎಂದು ಹೇಳಿದರು.
ಸರ್ಕಾರದ ಕೋಟ್ಯಂತರ ರೂಪಾಯಿ ಯಾರ್ಯಾರೋ ಲೂಟಿ ಮಾಡಿಕೊಂಡು ಹೋಗುತ್ತಾರೆ. ಹೀಗಿರುವಾಗ ನೀರಾವರಿ ಯೋಜನೆಗಳಿಗೆ ತಾವು ತಲೆತಲಾಂತರಗಳಿಂದ ಹೊಂದಿದ್ದ ಜಮೀನು ಕೊಟ್ಟ ರೈತರಿಗೆ ಹೆಚ್ಚು ಹಣ ಕೊಡಲು ಸರ್ಕಾರಕ್ಕೇನು ಸಮಸ್ಯೆ? ಈ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಎಂದು ಆಗ್ರಹಿಸಿದರು.ಅಷ್ಟರಲ್ಲಿ ಎದ್ದುನಿಂತ ಕಾಂಗ್ರೆಸ್ ಸದಸ್ಯರು, ಸರ್ಕಾರದ ಹಣ ಲೂಟಿ ಮಾಡಿದವರು ಹೆಸರು ಬಹಿರಂಗಪಡಿಸಿ ಎಂದಾಗ ಜಟಾಪಟಿ ನಡೆಯಿತು. ಮಧ್ಯಪ್ರವೇಶಿದ ಉಪ ಸಭಾಪತಿ ಮರಿತಿಬ್ಬೇಗೌಡ, 30 ಲಕ್ಷ 40 ಲಕ್ಷ ರೂ. ಪರಿಹಾರ ಕೊಡಿ ಎಂದು 15 ಬಾರಿ ಹೇಳಿ
ದ್ದೀರಿ. ಇನ್ನೆಷ್ಟು ಬಾರಿ ಅದನ್ನೇ ಹೇಳು ತ್ತೀರಾ ಎಂದು ಪ್ರಶ್ನಿಸಿದಾಗ ಆಕ್ರೋಶ ಗೊಂಡ ಈಶ್ವರಪ್ಪ, ರೈತರಿಗೆ ಪರಿಹಾರ
ನೀಡುವಂತೆ 15 ಅಲ್ಲ, ನೂರು ಬಾರಿ ಹೇಳುತ್ತೇನೆ. ಸಭಾಪತಿ ಸ್ಥಾನ ದಲ್ಲಿ ಕುಳಿತು ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.ಆಗ ಈಶ್ವರಪ್ಪ ಮತ್ತು ಉಪಸಭಾಪತಿಗಳ ಮಧ್ಯೆ ಏರುಧ್ವನಿಯಲ್ಲಿ ಮಾತಿನ ವಿನಿಮಯವಾಯಿತು.