ಹೊಸದಿಲ್ಲಿ: ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಮುಂದೊಂದು ದಿನ ಬಿಜೆಪಿಗೆ ಸೇರಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“ಸುಕೇಶ್ ಚಂದ್ರಶೇಖರ್ ಬಿಜೆಪಿ ಭಾಷೆಯಲ್ಲಿ ಮಾತನಾಡಲು ಕಲಿಯುತ್ತಿದ್ದಾರೆ. ಬಿಜೆಪಿಯವರು ಕೂಡ ಕೇಜ್ರಿವಾಲ್‌ಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕು ಎಂದು ಹೇಳುತ್ತಿದ್ದರು. ಈಗ ಅವರು ಬಿಜೆಪಿ ಸೇರಲು ತರಬೇತಿ ಪಡೆದಿದ್ದಾರೆ. ಅವರು ಯಾವುದೇ ದಿನ ಬಿಜೆಪಿ ಸೇರಬಹುದು” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಸುಕೇಶ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಬೇಕು. ಕನಿಷ್ಠ ಜನರು ಅವರ ಕಥೆಗಳನ್ನು ಕೇಳಲು, ಅವರನ್ನು ನೋಡಲು ರ್ಯಾಲಿಗಳಿಗೆ ಬರುತ್ತಾರೆ. ಹೀಗಾಗಿಯಾದರೂ ಬಿಜೆಪಿ ರ್ಯಾಲಿಗಳಿಗೆ ಜನ ಸೇರಬಹುದು. ಬಿಜೆಪಿಯವರು ಸುಕೇಶ್ ನನ್ನು ಪಕ್ಷಕ್ಕೆ ಸೇರಿಸಿ, ಪಕ್ಷದ ಮುಖ್ಯಸ್ಥರನ್ನಾಗಿ ಮಾಡಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಬುಡಕಟ್ಟು ಮಹಿಳೆ ರಾಷ್ಟ್ರಪತಿಯಾಗಿದ್ದು ಟಿಎಂಸಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ:ಅರ್ಜುನ್ ಮುಂಡಾ
ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ದೆಹಲಿ ಶಾಲೆಗಳ ಸ್ಟೋರಿಯ ಪ್ರಚಾರಕ್ಕಾಗಿ ತಾನು ಪಿಆರ್ ವ್ಯವಸ್ಥೆ ಮಾಡಿದ್ದೇನೆ ಎಂದು ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದರು. ಈ ಆರೋಪದ ಬಳಿಕ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.