Advertisement

ಉದ್ಯೋಗಗಳೆಲ್ಲ ಎಲ್ಲಿ ಹೋದವು ? ಸರಕಾರಕ್ಕೆ ಕಾಂಗ್ರೆಸ್‌ ಖಡಕ್‌ ಪತ್ರ

11:55 AM Aug 05, 2017 | udayavani editorial |

ಹೊಸದಿಲ್ಲಿ : ಆಳುವ ಎನ್‌ಡಿಎ ಸರಕಾರವನ್ನು ಛೇಡಿಸುವ ರೀತಿಯಲ್ಲಿ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರಿಗೆ ಕಟುವಾದ ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್‌ ಪಕ್ಷ, “ಉದ್ಯೋಗಗಳು ಎಲ್ಲಿವೆ ಜೇತ್ಲಿಯವರೇ?’ ಎಂದು ನೇರ ಪ್ರಶ್ನೆಯನ್ನು ಕೇಳಿದೆ. 

Advertisement

“ನೋಟು ಅಪನಗದೀಕರಣದ ಕ್ರಮವು ಬಡವರ ಮೇಲೆ ನಡೆಸಿರುವ ಸರ್ಜಿಕಲ್‌ ದಾಳಿಯಾಗಿದೆ; ದೇಶದಲ್ಲಿನ ಉದ್ಯೋಗಳೆಲ್ಲ ನಷ್ಟವಾಗಿವೆ; ಈ ರೀತಿಯ ಆರ್ಥಿಕ ದುಸ್ಥಿತಿಯನ್ನು ತಂದಿಟ್ಟಿರುವ ಸರಕಾರದ ನೊಗ ಹೊರುತ್ತಿರುವ ನಿಮಗೆ ಏನನ್ನಿಸುತ್ತಿದೆ?’ ಎಂದು ಕಾಂಗ್ರೆಸ್‌ ಜೇತ್ಲಿಯನ್ನು ಪ್ರಶ್ನಿಸಿದೆ.

“ನಿಮ್ಮ ಸರಕಾರದ ಆಡಳಿತೆಯ ಮೊದಲ ವರ್ಷದಲ್ಲಿ  1.6 ಕೋಟಿ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ; ನಿಮ್ಮಲ್ಲಿ ಅರ್ಧದಷ್ಟು ಜನರು ಹಣಕಾಸು ಸಚಿವರಾಗಿದ್ದಾರೆ ಎಂಬುದು ಕಾರ್ಮಿಕ ಇಲಾಖೆಯ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.’

“ನೋಟು ಅಪನಗದೀಕರಿಸುವ ನಿಮ್ಮ ನಿರ್ಧಾರದ ನೇರ ಪರಿಣಾಮವಾಗಿ 15 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ಸಮೀಕ್ಷೆ ಹೇಳುತ್ತದೆ. ನಿಮ್ಮ ಅಘೋಷಿ ಹಣಕಾಸು ತುರ್ತು ಪರಿಸ್ಥಿತಿಯು ಬಡವರ ವಿರುದ್ಧದ ಸರ್ಜಿಕಲ್‌ ದಾಳಿ ಆಗಿದೆ’ ಎಂದು ಕಾಂಗ್ರೆಸ್‌ ತನ್ನ ಪತ್ರದಲ್ಲಿ ಸರಕಾರವನ್ನು ದೂಷಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next