Advertisement

ಕಾರ್ಯಕರ್ತರು ಮೈಮರೆಯದಿದ್ದರೆ ಅಧಿಕಾರ ನಮ್ಮದೇ : ಕೆ.ವೆಂಕಟೇಶ್

05:53 PM Jan 02, 2022 | Team Udayavani |

ಪಿರಿಯಾಪಟ್ಟಣ: ಕಾಂಗ್ರೆಸ್ ಕಾರ್ಯಕರ್ತರು ಮೈಮರೆಯದೆ ಒಗ್ಗಟ್ಟಿನಿಂದ ದುಡಿದಲ್ಲಿ ಯಶಸ್ಸು ಖಂಡಿತ ದೊರಕಲಿದೆ ಎಂಬುದಕ್ಕೆ ರಾಜ್ಯ ಹಾಗೂ ತಾಲ್ಲೂಕಿನ ಗ್ರಾ.ಪಂ.ಉಪ ಚುನಾವಣೆಗಳೇ ಸಾಕ್ಷಿ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.

Advertisement

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಇತ್ತಿಚೆಗೆ ಗ್ರಾ.ಪಂ.ಉಪ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ 71 ಸಾವಿರಷ್ಟು ಮತಗಳು ಬಂದಿವೆ ಕಾರ್ಯಕರ್ತರು ಮೈ ಮರೆತದ್ದರಿಂದಲೆ ನಮಗೆ ಸೋಲು ಉಂಟಾಗಿದೆ. ಈಗ ಕಾರ್ಯಕರ್ತರಿಗೆ ಈ ಪರಿಸ್ಥಿತಿ ಅರ್ಥವಾಗಿದೆ, ಅನೇಕ ಕಡೆಗಳಲ್ಲಿ ಸೋಲು ಕಂಡ ಸ್ಥಳದಲ್ಲಿಯೆ ಮತ್ತೆ ಕಾಂಗ್ರೆಸ್ಗೆ ಜಯದೊರಕಿದೆ ಅಲ್ಲದೆ ತಾಲೂಕಿನಲ್ಲಿ ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದಕ್ಕೆ ವಿಧಾನಪರಿಷತ್ತು ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳೆ ಕಾಂಗ್ರೆಸ್ ನ ಜಯಭೇರಿ ಸಾಕ್ಷಿಯಾಗಿವೆ. ಗ್ರಾ.ಪಂ.ಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಅವಕಾಶ ಇದ್ದು ಸಿದ್ದತೆ ಮಾಡಿಕೊಳ್ಳಿ. ವೈಯುಕ್ತಿ ಪ್ರತಿಷ್ಟೆ, ಪರಸ್ಪರ ವೈಮನಸ್ಸುಗಳನ್ನು ಬಿಟ್ಟು ಒಂದಾಗಿ ಪಕ್ಷಕ್ಕಾಗಿ ದುಡಿದಾಗ ಮಾತ್ರ ಮತ್ತೆ ತಾಲೂಕಿನಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

 ಪಕ್ಷಕ್ಕೆ ಸ್ವಾಗತಿಸಿ:

ಪಕ್ಷಕ್ಕೆ ಒಳ್ಳಯೆದಾಗುವುದಾದರೆ ಯಾರನ್ನು ಬೇಕಾದರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಯಾರು ನನ್ನ ಕಷ್ಟದಲ್ಲಿ ನೋವಿನಲ್ಲಿ ಜೋತೆಗಿದ್ಧಾರೆ ಎಂಬ ಅರಿವು ನನಗಿದೆ ಹೊಸಬರು ಪಕ್ಷಕ್ಕೆ ಬಂದಾಕ್ಷಣ ಹಳಬರಿಗೆ ತೊಂದರೆಯಾಗುತ್ತದೆ ಎಂಬ ಮನೋಭಾವ ನಿಮಗೆ ಬೇಡ ಪಕ್ಷದ ಸಂಘಟನೆ ಬಯಸಿ ಬರುವರಿಗೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಅವರನ್ನು ನಮ್ಮೊಂದಿಗೆ ಗೌರವಿಸಿ ಎಂದು ಕಿವಿಮಾತು ಹೇಳಿದರು.

Advertisement

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾದ ಬೆಟ್ಟದಪುರ ಗ್ರಾ.ಪಂ. ಸದಸ್ಯರಾದ ಶಿಲ್ಪಪ್ರಶಾಂತ್, ಹಡಗನಹಳ್ಳಿ ಗ್ರಾ.ಪಂ.ನ ರಾಜನಬೆಳಗುಲಿ ಗ್ರಾಮದ ಆರ್.ಟಿ.ವೆಂಕಟೇಶ್, ಕೊಪ್ಪ ಗ್ರಾಮ ಪಂಚಾಯಿತಿಯ ಕೆ.ಎ.ಕೃಷ್ಣ (ಸುನಿಲ್) ರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ಜಾನ್ಬಾಬು, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಅನಿತಾತೋಟಪ್ಪಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮುತ್ತುರಾಣಿ, ಸರಸ್ವತಿ, ಪುರಸಭಾ ಸದಸ್ಯರಾದ ಮಂಜು, ರವಿ, ಮಾಜಿ ತಾ.ಪಂ.ಸದಸ್ಯ ಐಲಾಪುರ ರಾಮು, ಎಸ್ಸಿಘಟಕದ ಅಧ್ಯಕ್ಷ ಪಿ.ಮಹದೇವ್, ಕಿರನಲ್ಲಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್, ಗ್ರಾ.ಪಂ.ಸದಸ್ಯರಾದ ಮಾಲಂಗಿ ಹರೀಶ್, ಅಕ್ಕಯ್ಯಮ್ಮ, ಮುಖಂಡರಾದ ಪುಟ್ಟರಾಜು, ಭೀಮ, ಸಂತೋಷ್, ರಾಜೇಶ್, ಜೆ.ಮೋಹನ್, ಮುರುಳೀಧರ್, ಮಹೇಂದ್ರ ಕುಮಾರ್ ಮನುಗನಹಳ್ಳಿ ಮಣಿಕಂಠ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next