ತೀರ್ಥಹಳ್ಳಿ : ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರೂರಾದ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಗುರುವಾರ ನೆಡೆದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿಯನ್ನು ಬಾರಿಸಿದ್ದಾರೆ.
ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಶಬನಂ ಹಾಗೂ ಜಯಪ್ರಕಾಶ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಜ್ಯೋತಿ ಮೋಹನ್ ಹಾಗೂ ರವೀಶ್ ( ಬಾಬೀ ) ನಾಮಪತ್ರ ಸಲ್ಲಿಸಿದ್ದರು.
ಆಪರೇಷನ್ ಕಮಲದ ಬಗ್ಗೆ ತೀರ್ಥಹಳ್ಳಿಯಲ್ಲಿ ಬಾರಿ ಚರ್ಚೆ ನೆಡೆದಿದ್ದರೂ, ಗುರುವಾರ ಬೆಳಿಗ್ಗೆ ಪಟ್ಟಣ ಪಂಚಾಯತಿ ಸದಸ್ಯ ಸಂದೇಶ್ ಜವಳಿ ಮಾತನಾಡಿ ”ನಾವು ಆಪರೇಷನ್ ಮಾಡುವುದಿಲ್ಲ. ಕಾಂಗ್ರೆಸ್ ನವರು ರೆಸಾರ್ಟ್ ರಾಜಕೀಯ ಮಾಡುವುದರ ಮೂಲಕ ಕೀಳು ರಾಜಕೀಯ ಮಾಡಿದ್ದಾರೆ ನಾವು ಇಲ್ಲಿಯವರೆಗೆ 25:ವರ್ಷ ಆಡಳಿತ ನೆಡೆಸಿದ್ದೇವೆ ಈ ಬಾರಿ ಅವರಿಗೆ ಜನರೇ ಅವಕಾಶ ನೀಡಿದ್ದಾರೆ ಕಾದು ನೋಡೋಣ” ಎಂದು ಹೇಳಿದರು.
ಇನ್ನು ಮತ ಎಣಿಕೆಯಲ್ಲಿ 9 ಸ್ಥಾನ ಪಡೆದು ಅಧ್ಯಕ್ಷರಾಗಿ ಶಬನಂ ಹಾಗೂ ಉಪಾಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಶಬನಂ ಪಟ್ಟಣದ ಗಾಂಧಿ ನಗರ ವಾರ್ಡ್ ನಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್. ಎಂ. ಮಂಜುನಾಥ ಗೌಡರು, ಸುಂದರೇಶ್ ಹಾಗೂ ಕಾಂಗ್ರೆಸ್ ನ ಪಟ್ಟಣ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.