Advertisement

99 ಸ್ಥಾನ ಗೆದ್ದಿರುವ ಕಾಂಗ್ರೆಸ್‌ಗೆ ಮತ್ತೆ ಶೂನ್ಯ ಸೀಟು: ಕೇಂದ್ರ ಸಚಿವ ಲಲನ್‌ ಸಿಂಗ್‌

01:58 AM Jul 27, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದ ಲೋಕಸಭೆ ಚುನಾವಣೆಯ ಫ‌ಲಿತಾಂಶವನ್ನು “ಹಾವು ಏಣಿ’ ಆಟಕ್ಕೆ ಹೋಲಿಸಿರುವ ಜೆಡಿಯು ನಾಯಕರೂ ಆಗಿರುವ, ಕೇಂದ್ರ ಸಚಿವ ಲಲನ್‌ ಸಿಂಗ್‌, ಕಾಂಗ್ರೆಸ್‌ಗೆ ಮುಂದೆ ಶೂನ್ಯ ಫ‌ಲಿತಾಂಶ ದೊರೆಯಲಿದೆ ಎಂದಿದ್ದಾರೆ.

Advertisement

ಹಾವು ಏಣಿ ಆಟದಲ್ಲಿ 99 ಬಹಳ ಕೆಟ್ಟದ್ದು. ಯಾಕೆಂದರೆ 99ಕ್ಕೆ ಬರುತ್ತಿದ್ದಂತೆ ಹಾವು ಕಚ್ಚಿ, ಮತ್ತೆ ಶೂನ್ಯಕ್ಕೆ ಇಳಿಯಬೇಕಾಗುತ್ತದೆ. ಅದೇ ರೀತಿ, ಕಾಂಗ್ರೆಸ್‌ ಕೂಡ ಶೂನ್ಯಕ್ಕೆ ಮತ್ತೆ ಕುಸಿಯಲಿದೆ ಎಂದು ವ್ಯಂಗ್ಯವಾಡಿದರು. ಗೌರವ್‌ ಗೋಗೋಯಿ ಹಾವು ಏಣಿ ಆಟ ಆಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಲೋಕಸಭೆಯಲ್ಲಿ ಲಲನ್‌ ಸಿಂಗ್‌ ಕಾಲೆಳೆದರು. ಜತೆಗೆ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ “ಐಎನ್‌ಡಿಐಎ ಕೂಟ’ವನ್ನು ರಣಹದ್ದಿಗೆ ಹೋಲಿಸಿ ಲಲನ್‌ ಸಿಂಗ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next