Advertisement

Congress Guarantee: ಗೃಹಲಕ್ಷ್ಮಿರೀಲ್ಸ್‌ ಮಾಡಿ 1 ಲಕ್ಷ ರೂ.ಗೆಲ್ಲಿ: ಸಚಿವೆ ಹೆಬ್ಬಾಳ್ಕರ್‌

11:38 PM Sep 01, 2024 | Team Udayavani |

ಬೆಳಗಾವಿ: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಫಲಾನುಭವಿಗಳಾದ ಮನೆ ಯಜಮಾನಿಯರು ಈಗ ರೀಲ್ಸ್‌ ಮಾಡಿ 1 ಲಕ್ಷ ರೂ. ನಗದು ಬಹುಮಾನ ಗೆಲ್ಲಬಹುದು!

Advertisement

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು 1 ವರ್ಷವಾಗಿದೆ. ಒಂದು ವರ್ಷದ ಅವಧಿಯಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಾದ ಮಹಿಳೆಯರು ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಯಾಗಿದೆ ಎನ್ನುವುದನ್ನು ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ಗಳಲ್ಲಿ ಶೇರ್‌ ಮಾಡಬೇಕು.

ಅತೀ ಹೆಚ್ಚು ವೀವರ್ಸ್‌ ಬಂದ ಯಜಮಾನಿಯರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಬಹುಮಾನ ನೀಡಲಾಗುವುದು. ಸೆ. 30ರ ವರೆಗೆ ರೀಲ್ಸ್‌ಗಳನ್ನು ಹಂಚಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.