ನಂಜನಗೂಡು: ಈ ಬಾರಿ ನಂಜನಗೂಡು ನಗರಸಭೆಯ ಅಧಿಕಾರವನ್ನು ಕಾಂಗ್ರೆಸ್ ಪಕ್ಷವೇ ಹಿಡಿಯಲಿದೆ ಎಂದು ಸಂಸದ ಆರ್ಯ ದ್ರುವನಾರಾಯಣ ತಿಳಿಸಿದರು.
ಶನಿವಾರ ನಂಜನಗೂಡಿಗೆ ಆಗಮಿಸಿದ ಅವರು ಮಾಜಿ ಶಾಸಕ ಕಳಲೆ ಕೇಶವಮೂರ್ತಿಯವರೊಂದಿಗೆ ತಮ್ಮನ್ನು ಭೇಟಿ ಮಾಡಿದ ನಗರಸಭಾ ಚುನಾವಣೆಯ ಆಕಾಂಕ್ಷಿಗಳನ್ನು ಕುರಿತು ಮಾತನಾಡಿದರು.
ಕೆಲವು ತಿಂಗಳುಗಳ ಹಿಂದೆಯೇ ಎಲ್ಲಾ 31 ವಾರ್ಡುಗಳಲ್ಲೂ ಸಭೆ ನಡೆಸಿ ಚುನಾವಣೆಗಾಗಿ ಪಕ್ಷವನ್ನು ಕೇಶವ ಮೂರ್ತಿ ಸಿದ್ಧಗೊಳಿಸಿದ್ದು ಅರ್ಜಿಸಲ್ಲಿಸಿದವರಲ್ಲಿ ಗೆಲವಿನ ಆಧಾರವನ್ನು ಗಣನೆಗೆ ತೆಗೆದುಕೊಂಡು ಟಿಕೆಟ್ ನೀಡಲಾಗುವುದು ಎಂದು ಹೇಳಿದರು.
ಪಕ್ಷದ ವರಿಷ್ಠರು ಈ ಚುನಾವಣೆಯಲ್ಲೂ ಹೊಂದಾಣಿಕೆ (ಜೆಡಿಎಸ್ ನೊಂದಿಗೆ )ಮಾಡಿಕೊಳ್ಳಿ ಎಂದರೆ ಅದನ್ನು ಪಾಲಿಸಬೇಕಾಗುತ್ತದೆ ಇಲ್ಲವಾದಲ್ಲಿ 31 ಕ್ಕೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಲ್ಲ ಸಿದ್ಧತೆ ನಡೆದಿದೆ ಎಂದು ಹೇಳಿದರು.
ಪಕ್ಷದಿಂದ ಒಂದೆರಡು ದಿನಗಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಪಡೆದು ಅದನ್ನು ವರಿಷ್ಠರಿಗೆ ಕಳಿಸಲಾಗುವದು ಏಂದ ಮಾಜಿ ಶಾಸಕ ಕೇಶವ ಮೂರ್ತಿ ಪಕ್ಷ ನಿಗದಿ ಪಡಿಸಿದ ಶುಲ್ಕ ನೀಡಿ ಆಕಾಂಕ್ಷಿಗಳು ಅರ್ಜಿ ಪಡೆಯಬೇಕು ಎಂದು ತಿಳಿಸಿದರು.
ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಬಹಳಷ್ಟಿದ್ದು ಎಲರಿಗೂ ಟಿಕೆಟ್ ನೀಡಲು ಸಾಧ್ಯವಲ್ಲ ಆದರೆ ಎಲ್ಲರೂ ಅರ್ಜಿ ಸಲ್ಲಿಸಬಹುದು ಎಂದು ಕೇಶವಮೂರ್ತಿ ಸ್ಪಷ್ಟ ಪಡಿಸಿದರು.