Advertisement
ಪ್ರತಿ ವಾರ್ಡ್‌ಗಳಲ್ಲಿ ಅಚ್ಚುಕಟ್ಟಿನ ಪ್ರಚಾರ ಕೈಗೊಂಡಿರುವುದು ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿರುವ ಜೊತೆಗೆ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಯವರನ್ನು ಈ ಬಾರಿ ಗೆಲ್ಲಿಸಬೇಕೆನ್ನುವ ಅನುಕಂಪ ಎದ್ದು ಕಾಣುತ್ತಿದೆ.
Related Articles
Advertisement
ಬೈಂದೂರು ಕ್ಷೇತ್ರದಲ್ಲಿ ಸೋಶಿಯಲ್ ಮೀಡಿಯಾ ವಾರ್ ತಾರಕಕ್ಕೇರಿದೆ.ಜನಸಾಮಾನ್ಯರು ಮತ್ತು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಗೋಪಾಲ ಪೂಜಾರಿಯವರು ವಯಕ್ತಿಕ ದೇಣಿಗೆ ನೀಡಿ ಅಭಿವೃದ್ದಿಪಡಿಸಿದಷ್ಟು ದೈವ,ದೇವಸ್ಥಾನಗಳಿಗೆ ನೀವು ಇನ್ನೂ ಬೇಟಿ ಕೂಡ ನೀಡಿಲ್ಲ. ಚುನಾವಣೆಯಲ್ಲಿ ಯಾವ ನೈತಿಕತೆಯಲ್ಲಿ ಮತ ಕೇಳುತ್ತೀರಿ.ಕೋವಿಡ್ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದಲ್ಲಿ ನೀವು ಎಲ್ಲೂ ಕೂಡ ನೆರವಿಗೆ ಬಂದಿಲ್ಲ. ಬೈಂದೂರಿನ ವಿವಿಧ ಕಡೆ ಜಲಾವೃತಗೊಂಡಾಗ, ತಾಲೂಕು ಹೋರಾಟ ಸೇರಿದಂತೆ ಕನಿಷ್ಟ ಪಕ್ಷ ಗ್ರಾ.ಪಂ ಚುನಾವಣೆಯಲ್ಲೂ ಕೂಡ ಭಾಗವಹಿಸದ ನೀವು ಕಳೆದ ಐದು ವರ್ಷಗಳಲ್ಲಿ ಬೈಂದೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆಗಳೇನು ಎಂದು ಜನರಿಗೆ ತಿಳಿಸಲಿ ಎನ್ನುವುದು ಮುಖಂಡರ ಅಭಿಪ್ರಾಯವಾಗಿದೆ.
ಕಾರ್ಯಕರ್ತರೆ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು:
ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರ,ರಾಜ್ಯ ನಾಯಕರು,ಸಿನಿಮಾ ತಾರೆಯರು ಸೇರಿ ಅನೇಕ ಸ್ಟಾರ್ ಪ್ರಚಾರಕರು ಬಂದಿದ್ದಾರೆ.ಆದರೆ ಬೈಂದೂರು ಕ್ಷೇತ್ರದ ಮನೆ ಮಗನಾದ ನನ್ನ ಬಗ್ಗೆ ಕ್ಷೇತ್ರದ ಜನರ ಪ್ರೀತಿಯ ಶ್ರೀರಕ್ಷೆಯಿದೆ.ನಮ್ಮ ಕಾರ್ಯಕರ್ತರೆ ಪಕ್ಷದ ಪಾಲಿನ ಸ್ಟಾರ್ ಪ್ರಚಾರಕರು. ಕಳೆದ ಚುನಾವಣೆಯಲ್ಲಿ ಸುತ್ತಾಡಲು ಕಷ್ಟವಿರಲಿಲ್ಲ.ಆದರೆ ಈ ಚುನಾವಣೆಯಲ್ಲಿ ಜಾಸ್ತಿ ನಡೆದಾಡಬಾರದು ಎಂದು ವೈದ್ಯರು ಹೇಳಿದರೂ ಕೂಡ ಗೋಪಾಲ ಪೂಜಾರಿಯವರು ಆರು ತಿಂಗಳಿನಿಂದ ಪ್ರಚಾರ ಕೈಗೊಂಡು ಐದು ಸಾವಿರ ಕಿ.ಮೀ ಅಧಿಕ ನಡೆದಿದ್ದಾರೆ. 246 ಬೂತ್‌ಗಳಲ್ಲಿ ಸಭೆ ನಡೆಸಿ ಮತದಾರರ ಮನದಾಳದ ಪ್ರೀತಿ ವಿಶ್ವಾಸಗಳಿಸಿದ್ದಾರೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಹೇಳಿದ್ದಾರೆ.
ಕೆ.ಗೋಪಾಲ ಪೂಜಾರಿಯವರಿಗೆ ಮೀನುಗಾರರ ವಿಶೇಷ ಒಲವು:
ಕಳೆದ ಐದು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ಮೀನುಗಾರರ ಬಹುತೇಕ ಯೋಜನೆಗಳು ಭರವಸೆಯಾಗಿಯೆ ಉಳಿದಿದೆ.ಸೀಮೆಎಣ್ಣೆ ಸೇರಿದಂತೆ ಬಂದರುಗಳ ನಿರ್ಲಕ್ಷದಿಂದ ಕರಾವಳಿ ಭಾಗದ ಮೀನುಗಾರರು ಸಂಕಷ್ಟದಲ್ಲಿದ್ದಾರೆ.ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಬಿಜೆಪಿ ಅವಧಿಯಲ್ಲಿ ತಟಸ್ಥಗೊಂಡಿದೆ.
ಹೀಗಾಗಿ ಗಂಗೊಳ್ಳಿ, ಮರವಂತೆ, ಕೊಡೇರಿ, ಅಳ್ವೆಗದ್ದೆ ಮೀನುಗಾರಿಕಾ ಬಂದರುಗಳನ್ನು ಆಯ್ಕೆಯಾದ ಮೊದಲ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸುತ್ತಾರೆ. ಕಾಂಗ್ರೇಸ್ ಪ್ರಣಾಳಿಕೆ ಪ್ರಕಾರ ಮೀನುಗಾರರಿಗೆ ಪ್ರತಿ ಲೀಟರ್ ಡಿಸೇಲ್‌ಗೆ 25 ರೂಪಾಯಿ ಸಬ್ಸಿಡಿ ತಿಂಗಳಿಗೆ 500 ಲೀಟರ್ ಸೀಮೆಎಣ್ಣೆ 94/ಸಿ ಯೋಜನೆ,ಅಕ್ರಮ -ಸಕ್ರಮ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳು ಈ ಬಾರಿ ಕರಾವಳಿ ಭಾಗದ ಮೀನುಗಾರರಿಗೆ ಭರವಸೆ ಕೊಟ್ಟಿದೆ.ಮತದಾರರು ಗೋಪಾಲ ಪೂಜಾರಿ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಹೇಳಿದ್ದಾರೆ.
ಪ್ರತಿ ಜಿ.ಪಂ ವ್ಯಾಪ್ತಿಯಲ್ಲಿ ಗೋಶಾಲೆ:
ಧರ್ಮಜಾಗೃತಿ ಸೇರಿದಂತೆ ಅಭಿವೃದ್ದಿ ಬಗ್ಗೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದೆ. ಜಾತ್ಯಾತೀತ ತತ್ವದೊಂದಿಗೆ ಸರ್ವರನ್ನು ಪ್ರೀತಿಯಿಂದ ಮುನ್ನೆಡೆಸುವ ಜೊತೆಗೆ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಶು ಆಸ್ಪತ್ರೆಗೆ ಸ್ವಂತ ಸ್ಥಳ ಮೀಸಲಿರಿಸಲಾಗಿದೆ ಹಾಗೂ ಅದರಲ್ಲಿ ಕಟ್ಟಡ ಕೂಡ ನಿರ್ಮಾಣವಾಗಿದೆ.ಎಲ್ಲಾ ಗ್ರಾಮದಲ್ಲಿ ಪಶು ಆಸ್ಪತ್ರೆ ಸೇವೆಯ ಜೊತೆಗೆ ಪ್ರತಿ ಜಿ.ಪಂ ವ್ಯಾಪ್ತಿಯಲ್ಲಿ ಗೋಶಾಲೆ ಆರಂಭಿಸುವ ಯೋಜನೆಯಿದೆ ಎಂದು ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಬಿಜೆಪಿ ಸುಕುಮಾರ ಶೆಟ್ಟಿಯವರನ್ನು ನಿರ್ಲಕ್ಷಿಸಿದ ಬಿಜೆಪಿ:
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ ಬೈಂದೂರು ಕ್ಷೇತ್ರ ವ್ಯಾಪ್ತಿ ಕಾಂಗ್ರೆಸ್ ಪರ ವ್ಯಾಪಕ ಬೆಂಬಲವಿದೆ. ಬಿಜೆಪಿಯಲ್ಲಿ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಹೊಂದಿದೆ. ಬೆಂಗಳೂರಿನಲ್ಲಿ ಕುಳಿತ ಆರ್.ಎಸ್.ಎಸ್ ನಾಯಕರು ಕಷ್ಟಪಟ್ಟು ಪಕ್ಷ ಕಟ್ಟಿದ ನಾಯಕರನ್ನು ಕಂಟ್ರೋಲ್ ಮಾಡುವ ವ್ಯವಸ್ಥೆಯಿದೆ. ಕಾರ್ಯಕರ್ತರ ಶ್ರಮಕ್ಕೆ ಬೆಲೆಯಿಲ್ಲಾ. ಚುನಾವಣೆ ಮುಗಿದ ಬಳಿಕ ಸ್ಥಳೀಯ ನಾಯಕರು ಅತಂತ್ರ. ಹೀಗಾಗಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.