ಶಿಕಾರಿಪುರ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗೆಲ್ಲದಂತೆ ವಾಮಾಚಾರ ನಡೆಸಲಾಗಿತ್ತು ಎಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ಸರ್ವೆನಂಬರ್ 36 ರಲ್ಲಿರುವ ಯಡಿಯೂರಪ್ಪನವರ ಅಡಿಕೆ ತೋಟದಲ್ಲಿ ಕಾಡು ಪ್ರಾಣಿಯನ್ನ ಕೊಂದು ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್.ಕೆ.ರಮೇಶ್ ದೂರು ದಾಖಲಿಸಿದ್ದಾರೆ.
ಶಿಕಾರಿಪುರದ ಚುನಾವಣೆ ಹಿನ್ನಲೆಯಲ್ಲಿ ಮತದಾನ ನಡೆದ ನಡೆದ ಮೇ.11 ರಂದು ಈ ವಾಮಾಚಾರ ನಡೆದಿರುವ ಬಗ್ಗೆ ರಮೇಶ್ ಗಮನಕ್ಕೆ ಬಂದಿದೆ. ಮೇ.12 ರಂದು ದೂರು ದಾಖಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಸಹ ಸ್ಪಷ್ಟನೆ ನೀಡಿದ್ದು, ಪುನುಗು ಬೆಕ್ಕನ್ನ ಹೂತು ಹಾಕಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊಳ್ಳೇಗಾಲದಂತಹ ಭಾಗಗಳಲ್ಲಿ ಈ ಬೆಕ್ಕುಗಳು ಪತ್ತೆಯಾಗಿವೆ ಎಂದರು.
ವಿಜಯೇಂದ್ರ ಅವರು ಚೊಚ್ಚಲ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಎಸ್ ಪಿ ನಾಗರಾಜಗೌಡ ವಿರುದ್ಧ 11,008 ಮತಗಳ ಅಂತರದಿಂದ ಜಯ ಗಳಿಸಿ ಶಾಸಕರಾಗಿದ್ದಾರೆ.