Advertisement
ಲೋಕಸಭಾ ಚುನಾವಣೆಗೆ ಮುನ್ನವೇ ವಿಧಾನಸಭಾ ಚುನಾವಣೆ ಬರುವುದಾದರೂ ಲೋಕಸಭಾ ಕ್ಷೇತ್ರದಲ್ಲಿಯೇ ಕಂಪನ ಶುರುವಾಗಿದೆ. ಕಾರಣವೆಂದರೆ ಹಾಲಿ ಇರುವ ಸಂಸದರಿಗೆ ಲೋಕಸಭೆಗಿಂತ ವಿಧಾನಸಭೆ ಮೇಲೆ ಹೆಚ್ಚಿನ ಆಸಕ್ತಿ ಇದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹಿಂದಿನ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ರಾಜಕೀಯ ಬಿರುಗಾಳಿ ನಿಗದಿತ ಅವಧಿಗೆ ಮುನ್ನವೇ ಬೀಸುತ್ತಿದೆ.
Related Articles
Advertisement
ಏತನ್ಮಧ್ಯೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೆಸರು ತೇಲಿಬಂದ ಶೃಂಗೇರಿ ಮೂಲದ ಡಾ| ಆರತಿ ಕೃಷ್ಣ ಸೋಮವಾರ ಅನಿವಾಸಿ ಭಾರತೀಯರ ವೇದಿಕೆ ರಾಜ್ಯ ಉಪಾಧ್ಯಕ್ಷರ ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ಪತ್ರ ಕರ್ತರ ಪ್ರಶ್ನೆಗಳಿಗೆ ತುಸು ರಾಜಕೀಯ ಮಾತುಗಳನ್ನೂ ತೇಲಿಬಿಟ್ಟರು.
“ನನ್ನ ಮನೆಯ ಸದಸ್ಯರು ಅಮೆರಿಕದಲ್ಲಿದ್ದಾರೆ. ನಾನಿನ್ನೂ ಇಲ್ಲಿ ನೆಲೆಸಲು ಚಿಂತನೆ ನಡೆಸಿಲ್ಲ. ಅವಕಾಶ ಸಿಕ್ಕಿದರೆ ನೋಡೋಣ’ ಎಂದರು. ಆರತಿ ಅವರು ಸಕ್ರಿಯ ರಾಜಕೀಯ ಒಪ್ಪಲೂ ಇಲ್ಲ, ನಿರಾಕರಿಸಲೂ ಇಲ್ಲ.
ರಿಸ್ಕ್ ತೆಗೆದುಕೊಳ್ಳುವವರಾರು?ಏತನ್ಮಧ್ಯೆ ಲೋಕಸಭಾ ಚುನಾವಣೆಯ “ಲಾಟರಿ’ ಟಿಕೆಟ್‌ನ್ನು ಯಾರು ಕೊಳ್ಳುತ್ತಾರೆ ಎನ್ನುವುದು ಕುತೂಹಲ. ಈ ಚುನಾವಣೆ ಮುನ್ನವೇ ವಿಧಾನಸಭಾ ಚುನಾವಣೆ ಬರುವುದರಿಂದ ಹಾಲಿ ಸಂಸದರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆದ್ದ ಬಳಿಕವಾದರೂ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ. ಇದರ ಅವಧಿ ಕೇವಲ ಒಂದು ವರ್ಷದ್ದಾಗಿರುತ್ತದೆ. ಈ “ಲಾಟರಿ’ ಹಾರಿದರೂ ಒಂದು ವರ್ಷದ ಅವಧಿಯದ್ದು. ಸೋತರೆ ಇನ್ನಷ್ಟು ಭಯಾನಕ. ಇದಕ್ಕಾಗಿ ಯಾರು ರಿಸ್ಕ್ ತೆಗೆದುಕೊಳ್ಳುತ್ತಾರೆ? ಗೆಲ್ಲುವ ಕುದುರೆಯಾದರೂ ಕುದುರೆ ಏರಲು ಹಲವರು ತಯಾರಿರುತ್ತಾರೆ. ಸೋಲುವ ಕುದುರೆಯಾದರೆ ಯಾರು ತಯಾರು ಇರುತ್ತಾರೆ. ಸೋಲುವ ಕುದುರೆಗೆ ಮತ್ತೆ ಬರುವ ಮಹಾಚುನಾವಣೆಯಲ್ಲಿ ಟಿಕೆಟ್ ಖಾತ್ರಿ ಕೊಟ್ಟರೆ ಮಾತ್ರ ಅದು ರಿಸ್ಕ್ ಎದುರಿಸಲು ಸಿದ್ಧವಾಗಬಹುದು. ಈಗ ಬಿಜೆಪಿ ವರಿಷ್ಠರು ಹಿಂದಿನಂತಲ್ಲ. ರಾಜ್ಯದ ನಾಯಕರನ್ನು ಏಮಾರಿಸಿದಂತೆ ಕೇಂದ್ರದ ನಾಯಕರನ್ನು ಏಮಾರಿಸಲು ಆಗುತ್ತಿಲ್ಲ ಎಂಬುದೂ ಸತ್ಯ. ಇಂತಹ ಸಂದರ್ಭ ಉಪಚುನಾವಣೆಗೆ ವರಿಷ್ಠರು ಒಲವು ತೋರಿಸದೆಯೂ ಹೋಗಬಹುದು.