Advertisement

ಉದಯಪುರದ ರೀತಿ ರಾಜ್ಯದಲ್ಲೂ ಕಾಂಗ್ರೆಸ್ ಚಿಂತನಾ ಶಿಬಿರ : ಡಿ.ಕೆ.ಶಿವಕುಮಾರ್

03:49 PM May 30, 2022 | Team Udayavani |

ಬೆಂಗಳೂರು : ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದ ರೀತಿ ಕರ್ನಾಟಕದಲ್ಲಿ ನವ ಸಂಕಲ್ಪ ಶಿಬಿರವನ್ನು ಕೆಪಿಸಿಸಿ ಆಯೋಜಿಸಿದೆ.ಸುಮಾರು 400 ಜನ ಕಾರ್ಯಕರ್ತ- ಮುಖಂಡರ ಜತೆ  ಸೇರಿ ಚರ್ಚಿಸಿ ಈ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಇದಕ್ಕಾಗಿ ಐವರು ಹಿರಿಯ ನಾಯಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

ಜೂನ್  1,2,3 ರಂದು ಶಿಬಿರ ನಡೆಯುತ್ತದೆ.ಆ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನ ತೆಗೆದುಕೊಳ್ಳಲಾಗುತ್ತದೆ.ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಪಕ್ಷದ ಸಂಘಟನೆ ಬಗ್ಗೆ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ.ಎಂ ಬಿ ಪಾಟೀಲ್ ನೇತೃತ್ವದಲ್ಲಿ ರೈತ ಸಮಿತಿ, ರಾಜಕೀಯ ಬೆಳವಣಿಗೆಗಳು ಮತ್ತು ಚುನಾವಣೆ ಚರ್ಚೆಗೆ ಡಾ.ಜಿ ಪರಮೇಶ್ವರ್ ನೇತೃತ್ವದ ಸಮಿತಿ, ಯುವಕರ ಬಗ್ಗೆ ಕೃಷ್ಣಭೈರೇಗೌಡ ನೇತೃತ್ವದ ಸಮಿತಿ ರಚನೆಯಾಗಿದೆ ಎಂದರು.

ಇದನ್ನೂ ಓದಿ : ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಶಿಬಿರದಲ್ಲಿ 500 ಕೂ ಹೆಚ್ಚು ಜನ ಭಾಗಿಯಾಗುತ್ತಾರೆ.500 ಜನರನ್ನು ಆರು ಭಾಗ ಮಾಡಿ ಚರ್ಚೆಗೆ ಬಿಡುತ್ತೇವೆ. ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಮುಂಚೂಣಿ ಘಟಕಳ ಸದಸ್ಯರು  ಭಾಗಿಯಾಗುತ್ತಾರೆ. ಮುಂದೆ ಪಕ್ಷ ಹೇಗೆ ಕೆಲಸ ಮಾಡುತ್ತದೆ ಅಂತ ಚಿಂತನ ‌ಮಂಥನ ನಡೆಯುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next