Advertisement

Modi, ನನ್ನ ಟೀಕೆಗೆ ಸಂತೋಷ್‌ ಲಾಡ್‌ಗೆ ಕಾಂಗ್ರೆಸ್‌ ಟಾರ್ಗೆಟ್‌: ಪ್ರಹ್ಲಾದ್‌ ಜೋಷಿ

12:43 AM Feb 25, 2024 | Team Udayavani |

ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ ಲಾಡ್‌ ಪಕ್ಷ ನೀಡಿರುವ ಟಾರ್ಗೆಟ್‌ ತಲುಪುವಲ್ಲಿ ಮುಳುಗಿದ್ದಾರೆ. ವಾರಕ್ಕೆ ಮೂರು ದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಉಳಿದ ದಿನಗಳಲ್ಲಿ ನನ್ನನ್ನು ಬಯ್ಯುವುದು ಅವರಿಗೆ ನೀಡಿರುವ ಟಾರ್ಗೆಟ್‌. ಅವರ ಚಿಲ್ಲರೆ ಹಾಗೂ ಬಾಲಿಶ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ತಿರುಗೇಟು ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಡ್‌ ಮಾತನಾಡುವ ವಿಚಾರಗಳನ್ನು ಕೇಳಿದರೆ ಒಂದಕ್ಕಾದರೂ ಪ್ರತಿಕ್ರಿಯೆ ನೀಡಬೇಕು ಎನ್ನಿಸುವುದಿಲ್ಲ. ಪುಲ್ವಾಮಾ ದಾಳಿ ನಡೆದು ಈಗಾಗಲೇ ಒಂದು ಚುನಾವಣೆ ಮುಗಿದಿದೆ. ಈಗ ಅದರ ಬಗ್ಗೆ ಮಾತನಾಡುತ್ತಾರೆ. ಮುಗಿದು ಹೋದ ವಿಚಾರಗಳನ್ನು ಮಾತನಾಡುತ್ತಿದ್ದರೆ ಪ್ರತಿಕ್ರಿಯೆ ನೀಡುವುದಾದರೆ ಹೇಗೆ? ಇವರ ಹೇಳಿಕೆಗಳನ್ನು ಕೇಳಿದರೆ ಕಳೆದ 10 ವರ್ಷಗಳಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎನ್ನುವಂತಿದೆ. ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ಯಾವೆಲ್ಲ ಬದಲಾವಣೆಯಾಗಿದೆ ಎಂಬುದು ಗೊತ್ತಿದೆ ಎಂದರು.

ರಾಜ್ಯ ಸರಕಾರ ಕಳೆದ 7 ತಿಂಗಳಲ್ಲಿ 1.90 ಲಕ್ಷ ಕೋಟಿ ರೂ. ಸಾಲ ಮಾಡಿ ರಾಜ್ಯವನ್ನು ಅಧೋಗತಿಗೆ ಇಳಿಸುತ್ತಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಸಾಲವನ್ನು ಯಾವ ಸರಕಾರವೂ ಮಾಡಿರಲಿಲ್ಲ. ಒಂದೆಡೆ ಜನರ ಮೇಲೆ ಸಾಲದ ಹೊರೆ ಹೆಚ್ಚಿಸುತ್ತಿದೆ. ಇನ್ನೊಂದೆಡೆ ಪ್ರತಿಯೊಂದು ಕಾಮಗಾರಿಗಳಲ್ಲಿ ಶೇ.50 ಪರ್ಸಂಟೇಜ್‌ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವರಾದ ವಿ.ಸೋಮಣ್ಣ ಹಾಗೂ ಮಾಧುಸ್ವಾಮಿ ನಮ್ಮೊಂದಿಗೆ ಮಾತನಾಡಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್‌ ನೀಡಿದರೂ ಗೆಲ್ಲಿಸುವುದಾಗಿ ಅವರು ತಿಳಿಸಿದ್ದಾರೆ ಎಂದರು.

ಹುಂಡಿಗೆ ಸರಕಾರ ಕನ್ನ
ರಾಜ್ಯ ಕಾಂಗ್ರೆಸ್‌ ಹಿಂದೂ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕಿದೆ. ಆ ಪಾಪ ಇವರಿಗೆ ಸುತ್ತಿಕೊಳ್ಳಲಿದೆ. ರಾಜ್ಯ ಸರಕಾರದ ಈ ನಡೆ ಬಗ್ಗೆ ಬೇರೆ ರಾಜ್ಯದ ರಾಜಕೀಯ ನಾಯಕರು, ಮಾಧ್ಯಮದವರು ಪ್ರಶ್ನಿಸುತ್ತಿದ್ದಾರೆ. ಇಂತಹ ಅವಮಾನಕಾರಿ ಪರಿಸ್ಥಿತಿಗೆ ರಾಜ್ಯವನ್ನು ತಂದಿಟ್ಟಿದ್ದಾರೆ. ಹಿಂದೂ ವಿರೋಧಿ ನಿಲುವನ್ನು ರಾಜ್ಯ ಸರಕಾರ ಬದಲಿಸಿಕೊಳ್ಳಬೇಕು. ಇಲ್ಲವಾದರೆ ಈ ಹಿಂದೆ ನಡೆದ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಹೋರಾಟಕ್ಕೂ ಬೃಹತ್‌ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜೋಷಿ ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next