ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡಣೆ ಕುರಿತು ಕಾಂಗ್ರೆಸ್ ಆಕ್ರೋಶ ಹೊರ ಹಾಕಿದ್ದು, ಬಿಜೆಪಿ ತಮಗೆ ಬೇಕಾದಂತೆ ಮಾಡಿಕೊಂಡಿದೆ ಎಂದು ಶನಿವಾರ ಆರೋಪಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯರಾದ, ಮಾಜಿಮೇಯರ್ ಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡಿದ್ದರ ಕುರಿತು ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಬಂದಿದ್ದವು.ವಿಂಗಡಣೆ ಅವೈಜ್ಞಾನಿಕವಾಗಿ ಮಾಡಲಾಗಿದೆ. ಹಲವು ಕ್ಷೇತ್ರಗಳಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ. ನನ್ನ ಕ್ಷೇತ್ರದಲ್ಲೂ ವಾರ್ಡ್ ವಿಂಗಡಣೆಯಾಗಿದೆ. ಜಯನಗರದಲ್ಲೂ ವಾರ್ಡ್ ವಿಂಗಡಣೆಯಾಗಿದೆ. ಸರಿಯಾದ ಮಾದರಿಯಲ್ಲಿ ವಾರ್ಡ್ ವಿಂಗಡಿಸಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
35 ಸಾವಿರಕ್ಕೆ ಅನುಗುಣವಾಗಿ ಮಾಡಿದ್ದಾರೆ, ಕೆಲವು ಕಡೆ 39 ಸಾವಿರ ಜನಸಂಖ್ಯೆಯಿದೆ. ಬಿಜೆಪಿ ಶಾಸಕರಿರುವ ಕಡೆ 20 ಕ್ಕೆ ಮಾಡಿಕೊಂಡಿದ್ದಾರೆ. ವಾರ್ಡ್ ಗಳಿಗೆ ಹೆಸರು ಬದಲಾವಣೆ ಮಾಡಿದ್ದಾರೆ.ಹೆಸರು ಬದಲಾಯಿಸುವುದು ಸರ್ಕಾರಕ್ಕಿದೆ. ಆದರೆ ವಾರ್ಡ್ ವಿಂಗಡಿಸಿದವರೆ ಹೆಸರು ಬದಲಾವಣೆ ಮಾಡಿದ್ದಾರೆ, ಬಿಜೆಪಿ ಅನ್ಯಾಯ,ದುರಾಚಾರ ಎಲ್ಲವೂ ಗೊತ್ತಿದೆ.ಜನರಿಗೆ ದುರಾಚಾರದ ಬಗ್ಗೆ ಗೊತ್ತಿದೆ. ಹಿಂದೆಯೂ ವಾರ್ಡ್ ವಿಂಗಡೆಯಾಗಿತ್ತು. ಆಗ ವೈಜ್ಙಾನಿಕವಾಗಿ ಮಾಡಲಾಗುತ್ತಿತ್ತು. ಅಧಿಕಾರಿಗಳು ಚರ್ಚಿಸಿ ಪರಿಶೀಲಿಸಿ ಮಾಡುತ್ತಿದ್ದರು.ಕಂದಾಯ ,ಜಂಟಿ ಆಯುಕ್ತರು ಎಲ್ಲರೂ ಇರುತ್ತಿದ್ದರು. ಆದರೆ ಈ ಭಾರಿ ಆ ರೀತಿಯಾಗಿ ವಾರ್ಡ್ ವಿಂಗಡಿಸಿಲ್ಲ. ಬಿಜೆಪಿ ಸಂಸದರ ಕಚೇರಿಗಳಲ್ಲಿ ಆಗಿದೆ, ಕೇಶವ ಕೃಪಾದಲ್ಲಿ ಕುಳಿತು ವಾರ್ಡ್ ವಿಂಗಡಿಸಿದ್ದಾರೆ. ತಮಗೆ ಬೇಕಾದಂತೆ ಅವರು ವಿಂಗಡಿಸಿದ್ದಾರೆ. ಆಯುಕ್ತರು ಒಂದೇ ಒಂದು ಸಭೆ ನಡೆಸಿಲ್ಲ. ಎಲ್ಲ ಸರಿಯಾಗಿದೆ ಎಂದು ಸಮರ್ಥನೆ ಮಾಡುತ್ತಿದ್ದಾರೆ, ನಾಮಕಾವಸ್ಥೆಗೆ ಆಕ್ಷೇಪಣೆಗೆ ಅವಕಾಶ ಕೊಟ್ಟಿದ್ದರು. ಆದರೆ ತಮಗೆ ಬೇಕಾದಂತೆ ಮಾಡಿಕೊಂಡಿದ್ದಾರೆ. ಜನರಿಗೆ ಅನಾನುಕೂಲವಾಗುವಂತೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲದಂತೆ ಮಾಡಿಟ್ಟಿದ್ದಾರೆ. ಅವರಿಗೆ ಮಾತ್ರ ಅನುಕೂಲವಾಗುವಂತೆ ಮಾಡಿದ್ದಾರೆ. ಆದರೆ ಜನರಿಗೆ ಎಲ್ಲವೂ ಗೊತ್ತಿದೆ, 20% ನ್ಯೂಟ್ರಲ್ ಮತದಾರರು ಇದ್ದಾರೆ. ಅವರು ಯಾರಿಗೆ ಮತ ಹಾಕುತ್ತಾರೋ ಅವರು ಗೆಲ್ಲುತ್ತಾರೆ. ಹಾಗಾಗಿ ಅವರು ಏನು ಮಾಡಿದರೂ ಗೆಲ್ಲುವುದು ಕಷ್ಟ.ಅದನ್ನ ಚುನಾವಣೆ ಬಂದಾಗ ಮಾತನಾಡುತ್ತೇನೆ ಎಂದರು.
ನಗರೋತ್ಥಾನ ಯೋಜನೆ ಅನುದಾನ ಸರಿಪಡಿಸುವ ಕೆಲಸ , 28 ಕ್ಷೇತ್ರ ಅಭಿವೃದ್ಧಿಯಾದರೆ ಬೆಂಗಳೂರು ಅಭಿವೃದ್ಧಿ ಆಗುತ್ತದೆ. ಇವರು ಬಿಜೆಪಿ ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಾರೆ. ಕಾಂಗ್ರೆಸ್,ಜೆಡಿಎಸ್ ಕ್ಷೇತ್ರಗಳಿಗೆ ಕೊಡುವುದಿಲ್ಲ. ನೀವು ನಮಗೆ ದುಡ್ಡು ಕೊಡೋದು ಬೇಡ ಬಿಡಿ, ಆದರೆ ಬೆಂಗಳೂರು ಅಭಿವೃದ್ಧಿ ಅಂತ ಹೇಳಬೇಡಿ. ಬಿಜೆಪಿ ಶಾಸಕರ ಅಭಿವೃದ್ಧಿ ಅಂತ ಹೇಳಿಕೊಳ್ಳಿ. ಬರಿ 15 ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿಯಾದರೆ ಸಾಲುವುದಿಲ್ಲ, ಬೆಂಗಳೂರಿನ 28 ಕ್ಷೇತ್ರಗಳ ಅಭಿವೃದ್ಧಿಯಾಗಬೇಕು ಎಂದರು.
ಪಿಎಸ್ ಐ ನೇಮಕಾತಿ ಹಗರಣ ವಿಚಾರಕ್ಕೆ ಸಂಬಂಧಿಸಿ, ನಾವು ಅಧಿಕಾರ ಕಳೆದುಕೊಂಡು 4 ವರ್ಷ ಆಯ್ತು. ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಆಯ್ತು. ಆಗ ಅವರಿಗೆ ನಾಲಿಗೆಗೆ ಹಗ್ಗ ಕಟ್ಟಿದ್ವಾ? ಬಾಯಿಗೆ ಬೀಗ ಹಾಕಿದ್ವಾ? ಆಗ ಯಾಕೆ ಸುಮ್ಮನಾಗಿದ್ದರು. ಈಗ ಅವರ ಮೇಲೆ ಆರೋಪ ಬಂತಲ್ಲ, ಅದಕ್ಕೆ ನಮ್ಮ ಕಡೆ ತೋರಿಸ್ತಾರೆ. ಆಗ ಏನು ಕಡ್ಲೆಕಾಯಿ, ಕಡ್ಲೆಪು ರಿತಿನ್ನುತ್ತಿದ್ರಾ? ವಿರೋಧ ಪಕ್ಷದಲ್ಲಿ ಬಿಜೆಪಿಯವರು ಇದ್ದರಲ್ಲಾ? ಅವತ್ತು ಸದನದಲ್ಲಿ ಮಾತನಾಡಬಹುದಿತ್ತು. ಕೋರ್ಟ್ ಗೆ ಹೋಗಬಹುದಿತ್ತು. ಲೋಕಾಯುಕ್ತಕ್ಕೆ ದೂರು ಕೊಡಬೇಕಿತ್ತು. ಆಗ ಸುಮ್ಮನಿದ್ದು ಈಗ ಮಾತನಾಡುತ್ತಾರೆ. ತನಿಖೆಯನ್ನ ಮಾಡಿ, ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.