Advertisement

Karnataka 20 ಕ್ಕಿಂತ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲ್ಲಬೇಕು: ಸಚಿವ ದಿನೇಶ್ ಗುಂಡೂರಾವ್

06:21 PM Dec 23, 2023 | Team Udayavani |

ನಂಜನಗೂಡು:ಚಾಮರಾಜನಗರ ಮತ್ತು ಮೈಸೂರು 2 ಜಿಲ್ಲೆಯ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿಯನ್ನು ಏರ್ಪಾಡು ಮಾಡಲಾಗಿತ್ತು ಸಭೆಯಲ್ಲಿ ಸುಮಾರು 5೦೦ ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರುಗಳು ಭಾಗವಹಿಸಿದರು.

Advertisement

2024 ಲೋಕಸಭಾ ಚುನಾವಣೆ ಸಂಬಂಧಪಟ್ಟಂತೆ ಕವಲಂದೆ ಗ್ರಾಮದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಜೊತೆಗೂಡಿ ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆ ಆರಂಭದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಮಾಜಿ ಸಚಿವರು ಹಾಲಿ ಶಾಸಕರಾದ ಪುಟ್ಟರಂಗಶೆಟ್ಟಿ ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್ ಆರ್ ಕೃಷ್ಣಮೂರ್ತಿ ಅನಿಲ್ ಚಿಕ್ಕಮಾದು ಸೇರಿದಂತೆ ಎಲ್ಲಾ ಶಾಸಕರು ಮಾತನಾಡಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು ನಾವು ಎಲ್ಲಾ ಶಾಸಕರು ಕೆಲಸ ಮಾಡುತ್ತೇವೆ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಸೋಮಾ‌ಶೇಖರ್ ಮಳವಳ್ಳಿ ಮಾಜಿ ಸಚಿವರು,ಸುನಿಲ್ ಬೋಸ್, ಕಾಗಲವಾಡಿ ಎಂ ಶಿವಣ ಮಾಜಿ ಸಂಸದ, ನಟರಾಜು, ಮುರಳಿ, ನಂಜುಂಡ ಸ್ವಾಮಿ ಜಿ ಎನ್ , ಪುಷ್ಪಲತಾ ಅಮರನಾಥ್ ಇನ್ನು ಮುಂತಾದವರು ವೇದಿಕೆ ಮೇಲೆ ಬಂದು ನಾವು ಅಭ್ಯರ್ಥಿಗಳು ನಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು. ವಿಶೇಷವಾಗಿ ಸುನಿಲ್ ಬಾಸ್ ಮತ್ತು ನಂಜುಂಡಸ್ವಾಮಿಯವರು ವೇದಿಕೆ ಮೇಲೆ ಬಂದಾಗ ಕಾರ್ಯಕರ್ತರು ಹಾಗೂ ಮುಖಂಡರುಗಳು ಸಿಳ್ಳೆ ಹೊಡೆದು ಚಪ್ಪಾಳೆ ಬಾರಿಸುವ ಮೂಲಕ ಅವರಿಗೆ ಬೆಂಬಲ ಸೂಚಿಸಿದರು.

ಆರೋಗ್ಯ ಸಚಿವ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿ ಆಗಮಿಸಿದ ದಿನೇಶ್ ಗುಂಡೂರಾವ್ ಮಾತನಾಡುತ್ತಾ ಎಂಟು ಕ್ಷೇತ್ರದಲ್ಲಿ ಏಳು ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಿರಿ ಆದ್ದರಿಂದ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲೇ ಬೇಕು ಇದರ ಜೊತೆಗೆ ಮುಖ್ಯಮಂತ್ರಿ ಕ್ಷೇತ್ರ ಇದು ಕಳೆದ ಬಾರಿ ಕಡಿಮೆ ಅಂತರದಲ್ಲಿ ಜನನಾಯಕ ಎಲ್ಲರ ಪ್ರೀತಿ ಪ್ರಾತರಾದ ಧ್ರುವನಾರಾಯಣ್ ಸೋತಿದ್ದರು ಆದರೆ ಅವರ ಕೆಲಸಗಳು ಇನ್ನೂ ಜೀವಂತವಾಗಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನಗಳಿಂದ ಹೆಚ್ಚು ಅಭಿವೃದ್ಧಿ ಮಾಡಿರುವ ಸಂಸದ ಅಂದರೆ ಅದು ಧ್ರುವ ನಾರಾಯಣ್ ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ಕೂಡ ಈ ಭಾಗದ ಎಲ್ಲಾ ಶಾಸಕರು ಮುಖಂಡರು ಕಾರ್ಯಕರ್ತರು ಅಧ್ಯಕ್ಷರುಗಳು ಶ್ರಮವಹಿಸಿ ದುಡಿದು ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಕಳುಹಿಸಿಕೊಡಿ ಎಂದರು.

Advertisement

ನಮಗೆ ಗೆಲುವು ಮುಖ್ಯ ಸಮೀಕ್ಷೆ ಮಾಡಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಆದ್ದರಿಂದ ಎಷ್ಟು ಮಂದಿ ಆಕಾಂಕ್ಷಿ ಇದ್ದೀರಿ ಪಕ್ಷಕ್ಕಾಗಿ ನಿಮ್ಮ ಸೇವೆ ವರದಿಯನ್ನು ಪಕ್ಷದ ಹೈಕಮಾಂಡ್ ಗೆ ಸಲ್ಲಿಸಬೇಕು ನೀವು ಕೂಡ ನಿಮ್ಮ ಮಾಹಿತಿಯನ್ನು ತಿಳಿಸಿದ್ದೀರಿ ಈ ಮಾಹಿತಿಯನ್ನು ನಾನು ಹೈಕಮಾಂಡ್ ಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದರು.

ಚಾಮರಾಜನಗರ ಉಸ್ತುವಾರಿ ಸಚಿವರಾದ ವೆಂಕಟೇಶ್ ಮಾತನಾಡಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರ್ದೇಶನದ ಮೇಲೆ ಮುಂದೆ ಬರುವ ಲೋಕಸಭಾ ಚುನಾವಣೆ ಅಂಗವಾಗಿ ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಷ್ಟು ಮಂದಿ ಆಕಾಂಕ್ಷಿಗಳು ಮತ್ತು ಅವರು ಪಕ್ಷಕ್ಕಾಗಿ ಅವರ ಸೇವೆ ಮಾಹಿತಿ ಎಷ್ಟು ಜನ ಅಭ್ಯರ್ಥಿಗಳು ಇದ್ದಾರೆ ಎಂಬ ಮಾಹಿತಿ ತಿಳಿಸಬೇಕು ಇದಕ್ಕೆ ಸಂಬಂಧಪಟ್ಟಂತೆ ಚುನಾವಣೆ ಉಸ್ತುವರಿಯಾದ ದಿನೇಶ್ ಗುಂಡೂರಾವ್ ರವರು ಇಬ್ಬರು ಸೇರಿ ಸಭೆ ನಡೆಸುತ್ತಿದ್ದೇವೆ. ಒಟ್ಟು ಏಳು ಜನ ಆಕಾಂಕ್ಷಿಗಳು ಅಂದರೆ ಮಾಜಿ ಶಾಸಕ ನಂಜುಂಡಸ್ವಾಮಿ ಸುನಿಲ್ ಬೋಸ್, ಪುಷ್ಪ ಅಮರನಾಥ್, ಮಾಜಿ ಸಂಸದ ಶಿವಣ್ಣ ಸೇರಿದಂತೆ ಚಾಮರಾಜನಗರ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದಾರೆ ನೀವು ಪಕ್ಷಕ್ಕಾಗಿ ದುಡಿದಿರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಇದು ಸರಿ ನಿಮ್ಮ ಸೇವೆ ಮಾಹಿತಿಯನ್ನು ಪಕ್ಷದ ಹೈಕಮಾಂಡ್ ಗೆ ವರದಿ ಸಲ್ಲಿಸುತ್ತೇವೆ ಪಕ್ಷದ ತೀರ್ಮಾನಕ್ಕೆ ತಾವುಗಳು ಬದ್ಧರಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡ ಒಗ್ಗಟ್ಟಾಗಿ ಅಭ್ಯರ್ಥಿ ಪರ ದುಡಿದು ಗೆಲ್ಲಿಸಬೇಕು ಎಂದು ತಿಳಿಸಿದರು.

ದೇಶದಲ್ಲಿ ಬಿಜೆಪಿ ಪಕ್ಷ ತೊಲಗಿಸಬೇಕು ಆದ್ದರಿಂದ ಹೆಚ್ಚು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಆದ್ದರಿಂದ ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಪ್ರಬಲವಾಗಿದೆ ಎಲ್ಲರೂ ಒಗ್ಗಟ್ಟಾಗಿ ದುಡಿದರೆ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಯಾವುದೇ ಸಂಶಯ ಇಲ್ಲ ಎಂದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮರಿಸ್ವಾಮಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುಮಾರ್ ಶಾಸಕರಾದ ಪುಟ್ಟರಂಗ ಶೆಟ್ಟಿ ಎ.ಆರ್ ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಇ ಡಿ. ತಿಮ್ಮಯ್ಯ , ಮಾಜಿ ಸಚಿವರಾದ ಸೋಮಶೇಖರ್ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಾ ಅಮರನಾಥ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ನರೇಂದ್ರ , ಜಯಣ್ಣ, ಮಾಜಿ ಸಂಸದರಾದ ಶಿವಣ್ಣ, ಸಿದ್ದರಾಜು ಮುಖಂಡರಾದ ಮಂಜುನಾಥ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next