ಚೆನ್ನೈ: ಲೋಕಸಭಾ ಚುನಾವಣೆಗೆ ಎಐಎಡಿಎಂಕೆ, ಪಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿ ಸೀಟು ಹಂಚಿಕೊಂಡ ಬೆನ್ನಲ್ಲೇ ಡಿಎಂಕೆ , ಕಾಂಗ್ರೆಸ್ ಪಕ್ಷದೊಂದಿಗೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ.
ಬುಧವಾರ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್‌ಟ್ಯಾಲಿನ್ ಅವರು ಮೈತ್ರಿಯನ್ನು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್‌ಗೆ ಪುದುಚೇರಿ ಸೇರಿದಂತೆ ತಮಿಳುನಾಡಿನ ಒಟ್ಟು 10 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಉಳಿದ 30 ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ.
ಮೈತ್ರಿಕೂಟಕ್ಕೆ ಸಿಪಿಐ(ಎಂ), ಸಿಪಿಐ, ಮುಸ್ಲಿಂ ಲೀಗ್, ವಿಸಿಕೆ ಪಕ್ಷಗಳು ಬೆಂಬಲ ನೀಡಲಿವೆ ಎಂದು ತಿಳಿದು ಬಂದಿದೆ.
ಕಳೆದ ಭಾರಿ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದ ಡಿಎಂಕೆ ಈ ಬಾರಿ ಬಿಜೆಪಿ -ಎಐಎಡಿಎಂಕೆ ಮೈತ್ರಿ ಕೂಟಕ್ಕೆ ಭಾರೀ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳಿವೆ.ಎಂ.ಕರುಣಾ ನಿಧಿ ಮತ್ತು ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಈ ಚುನಾವಣಾ ಹೋರಾಟ ಭಾರೀ ಕುತೂಹಲ ಕೆರಳಿಸಿದೆ.
2014 ರ ಚುನಾವಣೆಯಲ್ಲಿ 39 ಸ್ಥಾನಗಳ ಪೈಕಿ ಎಐಎಡಿಎಂಕೆ 37 ರಲ್ಲಿ ಗೆದ್ದಿತ್ತು, ಒಂದು ಬಿಜೆಪಿ , ಒಂದರಲ್ಲಿ ಪಿಎಂಕೆ ಜಯ ಗಳಿಸಿತ್ತು.