Advertisement

ರಾಜನ್‌ ವಿರುದ್ದ ನೀತಿ ಆಯೋಗದ ಹೇಳಿಕೆ ಹಾಸ್ಯಾಸ್ಪದ : ಕಾಂಗ್ರೆಸ್‌

11:48 AM Sep 04, 2018 | udayavani editorial |

ಹೊಸದಿಲ್ಲಿ : ‘ದೇಶದ ಆರ್ಥಿಕತೆ ಕುಸಿಯಲು ನೋಟು ಅಮಾನ್ಯ ಕ್ರಮ ಕಾರಣವಲ್ಲ; ಬದಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿದ್ದ ರಘುರಾಮ್‌ ರಾಜನ್‌ ಅವರ ಅಸಮರ್ಪಕ ನೀತಿಗಳೇ ಕಾರಣ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿರುವುದನ್ನು ಕಾಂಗ್ರೆಸ್‌ ಬಲವಾಗಿ ಟೀಕಿಸಿದೆ. 

Advertisement

ನೀತಿ ಆಯೋಗದ ಉಪಾಧ್ಯಕ್ಷರ ಈ ಹೇಳಿಕೆಯು ಅತ್ಯಂತ ಅಕ್ಷೇಪಾರ್ಹವಾಗಿದ್ದು ಹಾಸ್ಯಾಸ್ಪದವೂ ಆಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲಾ ಹೇಳಿದ್ದಾರೆ. 

ನೀತಿ ಆಯೋಗದ ಉಪಾಧ್ಯಕ್ಷರ ಹೇಳಿಕೆಯು “ತಪ್ಪನ್ನು ಬೇರೆಯವರ ಮೇಲೆ ಹೊರಿಸುವ’ ತಂತ್ರವಾಗಿದೆ; ಹಿಂದಿನ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಬ್ಯಾಂಕುಗಳ ಎನ್‌ಪಿಎ (ಅನುತ್ಪಾದಕ ಆಸ್ತಿ) ಕೇವಲ 2 ಲಕ್ಷ 83 ಸಾವಿರ ಕೋಟಿ ರೂ. ಇತ್ತು ಮತ್ತು ಅದು ಹತೋಟಿಯ ಒಳಗೇ ಇತ್ತು. ನಾಲ್ಕು ವರ್ಷಗಳ ಬಳಿಕ ಈಗ ಬಿಜೆಪಿ ಆಡಳಿತೆಯಲ್ಲಿ ಬ್ಯಾಂಕುಗಳ ಎನ್‌ಪಿಎ 12 ಲಕ್ಷ ಕೋಟಿ ರೂ. ತಲುಪಿದೆ. ಈ ಅಂಕಿ ಅಂಶವನ್ನು ಮೋದಿ ಸರಕಾರವೇ 2018ರ ಜು.31ರಂದು ಸಂಸತ್ತಿನಲ್ಲಿ ಲಿಖೀತ ಉತ್ತರದಲ್ಲಿ ತಿಳಿಸಿದೆ. ನೋಟು ಅಮಾನ್ಯ ಕ್ರಮದಿಂದ ಜಿಡಿಪಿ ಶೇ.1.5ರಷ್ಟು ಕುಸಿದಿದೆ ಮತ್ತು ಇದರಿಂದ ದೇಶಕ್ಕೆ 2 ಲಕ್ಷ 25 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸುರ್ಜೆವಾಲಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next